ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮ ಸದ್ಯ ಹಂಸಲೇಖ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ಸಾಗುತ್ತಿದೆ.
ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಅರ್ಜುನ್ ಜನ್ಯ ಜೊತೆಗೆ ಸಾಗುತ್ತಿದ್ದ ಕಾರ್ಯಕ್ರಮದಿಂದ ವಿಜಯ್ ಪ್ರಕಾಶ್ ನಾಪತ್ತೆಯಾಗಿದ್ದಾರೆ.
ಕಳೆದ ಐದು ಸಂಚಿಕೆಯಿಂದ ವಿಜಯ್ ಪ್ರಕಾಶ್ ಕಾಣೆಯಾಗಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. ವಿಜಯ ಪ್ರಕಾಶ್ ಚಾನೆಲ್ ಜೊತೆ ಮುನಿಸಿಕೊಂಡ್ರ, ಅಥವಾ ಬೇರೆ ವಾಹಿನಿಯಲ್ಲಿ ಕಾಣಿಸಿಕೊಳ್ತಾರ ಅನ್ನುವ ಪ್ರಶ್ನೆಗಳು ಶುರುವಾಗಿದೆ.
ಆದರೆ ಅಂತಹ ಯಾವುದೇ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಮುಂದಿನ ವಾರದಿಂದ ಮತ್ತೆ ವಿಜಯ್ ಪ್ರಕಾಶ್ ಕಾಣಿಸಿಕೊಳ್ಳಲಿದ್ದಾರೆ.ಈ ಸಂಬಂಧ ಅವರೇ ಸ್ಪಷ್ಟ ಪಡಿಸಿದ್ದಾರೆ.
ವೀಕ್ಷಕರೊಬ್ಬರು ವಿಜಯ್ ಪ್ರಕಾಶ್ ಅವರನ್ನು ಟ್ವಿಟರ್ ನಲ್ಲಿ ಅನುಪಸ್ಥಿತಿ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯ್ ಪ್ರಕಾಶ್ ಮುಂದಿನ ವಾರದಿಂದ ಮತ್ತೆ ಕಾರ್ಯಕ್ರಮಕ್ಕೆ ಬರುವೆ ಅಲ್ಲಿ ಕಾರಣವನ್ನು ಕೂಡ ತಿಳಿಸುವುದಾಗಿ ಟ್ವಿಟ್ ನಲ್ಲೇ ಉತ್ತರಿಸಿದ್ದಾರೆ.
