ಸೆಲೆಬ್ರೆಟಿಗಳ ಸುದ್ದಿ ಅಂದ್ರೆ ನಮ್ಮವರಿಗೆ ಇನ್ನಿಲ್ಲದ ಪ್ರೀತಿ. ಅದರಲ್ಲೂ ಸ್ವಲ್ಪ ಮಸಾಲ ಇತ್ತು ಅಂದ್ರೆ ಕೇಳಬೇಕಾ. ಕೆಲ ದಿನಗಳ ಹಿಂದಷ್ಟೇ ರಶ್ಮಿಕಾ ಮಂದಣ್ಣ ಕಿಸ್ಸಿಂಗ್ ಸೀನ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದೀಗ ದೀಪಿಕಾ ಪಡುಕೋಣೆ ಸರದಿ. ‘ಚಾಪಾಕ್’ ಚಿತ್ರದಲ್ಲಿ ಬ್ಯುಸಿಯಾಗಿರುವ ಅವರು ಈ ಚಿತ್ರದಲ್ಲಿ ನಟ ವಿಕ್ರಾಂತ್ ಮಾಸೇ ಜೊತೆ ಟೆರೆಸ್ ಮೇಲೆ ಕಿಸ್ಸಿಂಗ್ ಸೀನ್ ಮಾಡಿದ ವಿಡಿಯೋ ವೈರಲ್ ಆಗಿದೆ.
ನವದೆಹಲಿಯಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ಇವರಿಬ್ಬರೂ ಲಿಪ್ ಲಾಕ್ ಮಾಡುವ ವಿಡಿಯೋವನ್ನು ಅಕ್ಕಪಕ್ಕದ ಮನೆಯವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಬಿಟ್ಟಿದ್ದಾರೆ.
ಹೇಳಿ ಕೇಳಿ ಸೋಷಿಯಲ್ ಮೀಡಿಯಾ ಜಮಾನ. ಕಿಸ್ಸಿಂಗ್ ವಿಡಿಯೋ ನೋಡಲು ಜನಸಾಗರವೇ ಹರಿದು ಬರುತ್ತಿದೆ.
`ಚಾಪಾಕ್’ ಚಿತ್ರ ಆ್ಯಸಿಡ್ ದಾಳಿಗೊಳಗಾದ ಲಕ್ಷ್ಮಿ ಅಗರ್ವಾಲ್ ಅವರ ಜೀವನಚರಿತ್ರೆಯಾಗಿದ್ದು, ದೀಪಿಕಾ ಮಾಲತಿ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Discussion about this post