ಭುವನೇಶ್ವರ : ಸೆಲೆಬ್ರೆಟಿಗಳ ಅದರಲ್ಲೂ ಕಲಾವಿದರ ಬದುಕಿನಲ್ಲಿ ಬಿರುಗಾಳಿಯೊಂದು ಎದ್ದಿದೆ ಅನ್ನುವುದು ಸತ್ಯ . ಕೊರೋನಾ ಬಳಿಕ ಕಲಾವಿದರ ಬದುಕಿನಲ್ಲಿ ಅಲ್ಲೋಲ ಕಲ್ಲೋಲವಾಗಿದ್ದು, ಏನಾಗಿದೆ ಅನ್ನುವುದು ಮಾತ್ರ ನಿಗೂಢವಾಗಿದೆ. ಮೊನ್ನೆ ಮೊನ್ನೆ ಒಡಿಶಾದ ಯುವನಟಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಒಡಿಶಾ ಹಿರಿಯ ನಟ ರೈ ಮೋಹನ್ ಪರಿದಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭುವನೇಶ್ವರದಲ್ಲಿರುವ ಅವರ ನಿವಾಸದಲ್ಲಿ ಇವರ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಾಚಿ ಬಿಹಾರದ ಉದಯ್ ಪುರ ವಸತಿ ಸಮುಚ್ಛಯದಲ್ಲಿ ಕುಟುಂಬ ಸದಸ್ಯರೊಂದಿಗೆ ಇವರು ವಾಸವಾಗಿದ್ದರು.
ಒಡಿಯಾ ಸಿನಿಮಾಗಳಲ್ಲಿ ಖಳನಟನಾಗಿ ಪ್ರಖ್ಯಾತನಾಗಿರುವ ರೈ ಮೋಹನ್, ಅಪಾರ ಅಭಿಮಾನ ಬಳಗವನ್ನು ಸಂಪಾದಿಸಿದ್ದಾರೆ. ಬೆಂಗಾಲಿ ಮತ್ತು ಒಡಿಯಾ ಸಿನಿಮಾ ಕ್ಷೇತ್ರದಲ್ಲಿರುವ ಇವರ ಸಾಧನೆಗಾಗಿ ರಾಜ್ಯ ಪ್ರಶಸ್ತಿಯನ್ನೂ ಕೂಡಾ ಇವರು ಪಡೆದಿದ್ದಾರೆ.
ಆತ್ಮಹತ್ಯೆಗೆ ಕಾರಣ ನಿಗೂಢವಾಗಿದ್ದು, ಪೊಲೀಸರ ತನಿಖೆಯ ಬಳಿಕ ಸತ್ಯಾಂಶ ಹೊರ ಬರಲಿದೆ.
Discussion about this post