ಹುಲಿ ಉಗುರು ಪ್ರಕರಣದ ಬಳಿಕ ವರ್ತೂರು ಸಂತೋಷ್ varthur santhosh ಮತ್ತಷ್ಟು ಪ್ರಬಲರಾಗಿದ್ದಾರೆ
ಹುಲಿ ಉಗುರು ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಜೈಲಿಗಟ್ಟಿದ್ದ ಅರಣ್ಯಾಧಿಕಾರಿಗಳಿಗೆ ಹಿನ್ನಡೆಯಾಗಿದೆ. ಸಂತೋಷ್ varthur santhosh ಪರ ವಕೀಲರ ವಾದ ಆಲಿಸಿದ ನ್ಯಾಯಾಲಯ ಸಂತೋಷ್ ಅವರಿಗೆ ಜಾಮೀನು ಕೊಟ್ಟಿದ್ದು ಮುಂದಿನ ವಿಚಾರಣೆಗೆ ಸಹಕರಿಸುವಂತೆ ಸೂಚಿಸಿದೆ,
ನ್ಯಾಯಾಲಯದಲ್ಲಿ ಜಾಮೀನು ಮಂಜೂರಾದ ಬೆನ್ನಲ್ಲೇ, ಸಂತೋಷ್ ಅವರನ್ನು ಜೈಲಿನಿಂದ ಹೊರ ಕರೆಸುವ ಪ್ರಕ್ರಿಯೆಗಳು ಪ್ರಾರಂಭಗೊಂಡಿದ್ದು, ಸಂತೋಷ್ ಪರ ವಕೀಲರು ಸೇರಿದಂತೆ ಅವರ ಅಭಿಮಾನಿಗಳು ಜೈಲಿನ ಸುತ್ತ ನೆರೆದಿದ್ದಾರೆ.
ಈ ನಡುವೆ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ವಾದ ಮಂಡಿಸಿದ ಸಂತೋಷ್ ಪರ ವಕೀಲರು, ಇಡೀ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ಕಾನೂನು ನಿಯಮಗಳ ಪ್ರಕಾರ ನಡೆದುಕೊಂಡಿಲ್ಲ. ನೋಟಿಸು ಕೊಡದೆ ನಮ್ಮ ಕಕ್ಷಿದಾರರನ್ನು ಬಂಧಿಸಿದ್ದು ಮಾತ್ರವಲ್ಲದೆ, ಪ್ರಯೋಗಾಲಯದಿಂದ ವರದಿ ಬರುವ ಮುನ್ನವೇ ಜೈಲಿಗೆ ಕಳುಹಿಸಲೇ ಬೇಕು ಎಂದು ನಿರ್ಧರಿಸಿದ್ದರು. ಹೀಗಾಗಿ ಪ್ರಕರಣದಲ್ಲಿ ಅಗತ್ಯವೇ ಇಲ್ಲದ ಸೆಕ್ಷನ್ ಗಳನ್ನು ದಾಖಲು ಮಾಡಿದ್ದಾರೆ ಅಂದಿದ್ದರು.
Read This : ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾದ ಮಾಜಿ ಕೋಚ್ ಗ್ರೆಗ್ ಚಾಪೆಲ್ Greg Chappell
ಇನ್ನು ನ್ಯಾಯಾಲಯದಿಂದ ಜಾಮೀನು ಮಂಜೂರಾದ ಬಳಿಕ ಸಂತೋಷ್ ಎಲ್ಲಿಗೆ ಹೋಗ್ತಾರೆ ಅನ್ನುವ ಕುತೂಹಲವಿತ್ತು. ಸೀದಾ ಅವರ ಮನೆಗೆ ತೆರಳುತ್ತಾರೆ ಅನ್ನಲಾಗಿತ್ತು, ಆದರೆ ಇದೀಗ ಈ ವಿಚಾರದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಹೊಣೆ ಹೊತ್ತಿರುವ ವಾಹಿನಿಯ ಮಧ್ಯ ಪ್ರವೇಶವಾಗಿದ್ದು, ಕಾನೂನಿನ ಯಾವುದೇ ತೊಡಕುಗಳಿಲ್ಲವಾದರೆ ಅವರನ್ನು ಮತ್ತೆ ಬಿಗ್ ಬಾಸ್ ಮನೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದೆ.
ವಾರಕ್ಕೊಮ್ಮೆ ಬಂದು ಸಹಿ ಹಾಕಬೇಕು, ಲಿಮಿಟ್ ಬಿಟ್ಟು ಹೊರಹೋಗಬಾರದು ಅನ್ನುವ ಯಾವುದೇ ಷರತ್ತುಗಳು ಜಾಮೀನು ಮಂಜೂರು ವೇಳೆ ಇಲ್ಲದಿರುವ ಕಾರಣ ಸಂತೋಷ್ ಅವರು ಬಿಗ್ ಬಾಸ್ ಮನೆಗೆ ಹೋಗಲು ಯಾವುದೇ ಅಡ್ಡಿ ಇಲ್ಲ. ಅಷ್ಟು ಮಾತ್ರವಲ್ಲದೆ ಈಗಾಗಲೇ ಒಂದು ಹಂತದ ವಿಚಾರಣೆ ಮುಗಿದಿದ್ದು, ಫಾರೆನ್ಸಿಕ್ ಲ್ಯಾಬ್ ಕಡೆಯಿಂದ ವರದಿ ಬಾರದ ಹೊರತು ಅರಣ್ಯಾಧಿಕಾರಿಗಳು ಕೂಡಾ ಯಾವುದೇ ಮುಂದಿನ ಯಾವುದೇ ಕ್ರಮಗಳನ್ನು ಜರುಗಿಸುವಂತಿಲ್ಲ ಎಂದು ಸಂತೋಷ್ ಪರ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಸಂತೋಷ್ ಮರಳಿ ಮಹಾಮನೆಗೆ ತೆರಳುತ್ತಾರೆ ಅನ್ನಲಾಗಿದೆ. ಜೊತೆಗೆ ಬಿಗ್ ಬಾಸ್ ಕಾರ್ಯಕ್ರಮದ ವಾಹನ ಕೂಡಾ ಜೈಲಿನ ಬಳಿ ಬಂದಿರೋದು ಕುತೂಹಲಕ್ಕೆ ಕಾರಣವಾಗಿದೆ.
Discussion about this post