ತೋಟಗಾರಿಕಾ ಇಲಾಖೆ ಅಧಿಕಾರಿ rajkumar takale ಕಾಂಗ್ರೆಸ್ ನಾಯಕಿಯನ್ನು ಪ್ರೀತಿಸಿ, ಮದುವೆಯಾಗಿ ಮೋಸ ಮಾಡಿದ್ದಾರೆ ಅನ್ನಲಾಗಿದೆ. ಮಡದಿ ಮಕ್ಕಳಿದ್ದರೂ ಮಾಡಿದ್ದು ಮಾತ್ರ ಮಣ್ಣು ತಿನ್ನುವ ಕೆಲಸ
ಬೆಳಗಾವಿ : ಅತ್ಯಾಚಾರ, ಗರ್ಭಪಾತ, ದೈಹಿಕ ಹಲ್ಲೆ ಸೇರಿದಂತೆ 10ಕ್ಕೂ ಅಧಿಕ ಸೆಕ್ಷನ್ ಗಳ ಅಡಿಯಲ್ಲಿ ಕಾಂಗ್ರೆಸ್ ನಾಯಕಿ ನವ್ಯಶ್ರೀ ರಾವ್ (navya shree) ನೀಡಿದ್ದ ದೂರಿನ ಸಂಬಂಧ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ (rajkumar takale) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.
ಇದನ್ನೂ ಓದಿ : Dhruva sarja martin : ಶೂಟಿಂಗ್ ಮುಗಿದಿಲ್ಲ… ಮಾರ್ಟಿನ್ ಬಿಡುಗಡೆ ಮುಂದೂಡಿದ ಚಿತ್ರ ತಂಡ
ಬೆಳಗಾವಿಯ ಎಂಟನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ತೀರ್ಪು ನೀಡಿದೆ. ನ್ಯಾಯಮೂರ್ತಿ ಅನಂತ್ ಹೆಚ್ ಮುಂದೆ ಟಾಕಳೆ ಅರ್ಜಿ ವಿಚಾರಣೆಗೆ ಬಂದಿತ್ತು.
ಈಗಾಗಲೇ ಟಾಕಳೆ ವಿರುದ್ಧ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದರ ಬೆನ್ನಲ್ಲೇ ಟಾಕಳೆ ಜಾಮೀನು ಅರ್ಜಿ ಸಲ್ಲಿಸಿದ್ದ. ಇದೀಗ ಜಾಮೀನು ಅರ್ಜಿ ವಜಾಗೊಂಡ ಕಾರಣ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕನಿಗೆ ಸಂಕಷ್ಟ ಎದುರಾಗಿದೆ.
Discussion about this post