ವ್ಯಾಪಕವಾಗಿ ಹರಡಲು ಪ್ರಾರಂಭಿಸಿರುವ Omicron ದೇಶದಲ್ಲಿ ಮೂರನೇ ಅಲೆಗೆ ಕಾರಣವಾಗಿದೆ ಎಂದು Covid Task Force Boss Dr NK Arora ಹೇಳಿದ್ದಾರೆ.
ನವದೆಹಲಿ : ವಿಶ್ವದಲ್ಲಿ ಈಗಾಗಲೇ ವ್ಯಾಪಕವಾಗಿ ಹರಡುತ್ತಿರುವ ಒಮಿಕ್ರೋನ್ ಭಾರತದಲ್ಲೂ ಅಬ್ಬರಿಸಲಾರಂಭಿಸಿದೆ. ತಜ್ಞರ ಎಚ್ಚರಿಕೆಯಂತೆ ಭಾರತದಲ್ಲೂ ಕೊರೋನಾ ರೂಪಾಂತರಿ ವೈರಸ್ ಮೂರನೇ ಅಲೆಗೆ ಕಾರಣವಾಗಿದೆ. ಈ ನಡುವೆ ದೇಶದಲ್ಲಿ ಮೂರನೇ ಅಲೆ ಪ್ರಾರಂಭವಾಗಿದೆ ಎಂದು ಲಸಿಕೆ ಟಾಸ್ಕ್ ಫೋರ್ಸ್ ಮುಖ್ಯಸ್ಥ ಡಾ.ಅರೋರಾ ಹೇಳಿಕೆ ಕೊಟ್ಟಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿರುವ ಅವರು, ಡಿಸೆಂಬರ್ ಮೊದಲ ವಾರ ಭಾರತದಲ್ಲಿ ಒಮಿಕ್ರೋನ್ ಪ್ರಕರಣ ಪತ್ತೆಯಾಗಿತ್ತು. ಇದಾದ ಬಳಿಕ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಿದ್ರೆ ಅದರ ಪಾಲು ಶೇ 12ಕ್ಕೆ ಏರಿತ್ತು. ಬಳಿಕದ ವಾರದಲ್ಲಿ ಈ ಪ್ರಮಾಣ ಶೇ21ನ್ನು ತಲುಪಿದೆ. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ ಏರಿದಂತೆ ಒಮಿಕ್ರೋನ್ ರೂಪಾಂತರಿ ವೈರಸ್ ಗೂ ತುತ್ತಾಗುತ್ತಿರುವವರ ಸಂಖ್ಯೆ ಏರುತ್ತಿದೆ ಎಂದು ಆರೋರಾ ಹೇಳಿದ್ದಾರೆ.
ಇನ್ನು ದೆಹಲಿ, ಮುಂಬೈ ಮತ್ತು ಕೋಲ್ಕತಾ ನಗರದಲ್ಲಿ ಒಮಿಕ್ರೋನ್ ಪ್ರಕರಣ ತೀವ್ರವಾಗಿ ಹರಡಿದೆ ಅಂದಿರುವ ಅವರು, ಶೇ 75ರಷ್ಟು ಪಾಲು ಇಲ್ಲಿಂದಲೇ ಬರುತ್ತಿದೆ ಅಂದಿದ್ದಾರೆ. ಈ ಮೂಲಕ ದೇಶದಲ್ಲಿ ಮೂರನೇ ಅಲೆ ಪ್ರಾರಂಭವಾಗಿದೆ ಎಂದು ಸ್ಪಷ್ಟಪಡಿಸಿರುವ ಆರೋರಾ ರಾಜ್ಯಗಳು ಕಠಿಣ ಕ್ರಮಗಳನ್ನು ಜಾರಿಗೆ ತಾರದ ಹೊರತು ಸೋಂಕು ನಿಯಂತ್ರಣ ಸಾಧ್ಯವಿಲ್ಲ ಅಂದಿದ್ದಾರೆ.
Discussion about this post