ಬೆಂಗಳೂರು : ಕೊರೋನಾ ಸೋಂಕಿನ ಮೂರನೇ ಅಲೆ ಬರಲಿದೆ, ಬರೋದಿಲ್ಲ ಅನ್ನುವ ತಜ್ಞರ ಗೊಂದಲದ ಹೇಳಿಕೆಯ ನಡುವೆಯೇ ಹಬ್ಬ ಹರಿದಿನದ ಪರಿಣಾಮ ಅನ್ನುವಂತೆ ಕೊರೋನಾ ಸೋಂಕಿನ ಸಂಖ್ಯೆ ಏರುತ್ತಿರುವುದು ಮೂರನೇ ಅಲೆಯ ಶಂಕೆಗೆ ಕಾರಣವಾಗಿದೆ.
ಇಡೀ ದೇಶದಲ್ಲಿ ಸೋಂಕಿನ ಪ್ರಮಾಣ 13 ಸಾವಿರದ ಗಡಿ ದಾಟಿದ್ದು, ಜಮ್ಮು ಕಾಶ್ಮೀರ ಮತ್ತು ಶ್ರೀನಗರದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರತೊಡಗಿದೆ. ಕರ್ನಾಟಕದಲ್ಲೂ ಸಣ್ಣ ಪ್ರಮಾಣದಲ್ಲಿ ಸೋಂಕಿನ ಸಂಖ್ಯೆ ನಿಧಾನವಾಗಿ ಏರಲಾರಂಭಿಸಿದೆ. ಕಳೆದ ವಾರ 200ರ ಗಡಿಯಲ್ಲಿದ್ದ ಸೋಂಕಿತರ ಸಂಖ್ಯೆ 300ಕ್ಕೆ ಬಂದು ತಲುಪಿದೆ. ಟೆಸ್ಟಿಂಗ್ ಪ್ರಮಾಣ ಕಡಿಮೆ ಇದ್ದರೂ ಸೋಂಕು ಏರುತ್ತಿರುವುದು ಮೂರನೇ ಅಲೆಯ ಅನುಮಾನಕ್ಕೆ ಕಾರಣವಾಗಿದೆ.
ಈಗಾಗಲೇ ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆಯಲು ಮುಗಿಬಿದ್ದ ಜನ ಎರಡನೇ ಡೋಸ್ ಪಡೆಯಲು ಮೀನಾಮೇಷ ಎಣಿಸುತ್ತಿದ್ದಾರೆ. ಸರ್ಕಾರದ ಮಾಹಿತಿ ಪ್ರಕಾರ ದೇಶದಲ್ಲಿ 12 ಕೋಟಿ ಜನ ಇನ್ನೂ ಸೆಂಕೆಂಡ್ ಡೋಸ್ ಪಡೆದೇ ಇಲ್ವಂತೆ. ಇದು ಕೂಡಾ ಸೋಂಕಿನ ಪ್ರಮಾಣ ಏರಿಕೆಗೆ ಕಾರಣವಾಗಿರಬಹುದು ಅನ್ನಲಾಗಿದೆ. ಜೊತೆಗೆ ಸೋಂಕಿನ ಕುರಿತಂತೆ ಮೊದಲಿಂದ ಭಯ ಜನರಲ್ಲಿ ಈಗಿಲ್ಲ. ಹೀಗಾಗಿ ಮಾಸ್ಕ್, ಸಾಮಾಜಿಕ ಅಂತರ ಕಸದ ಬುಟ್ಟಿ ಸೇರಿದೆ.
ಇದೇ ನಿರ್ಲಕ್ಷ್ಯ ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡುವ ಎಲ್ಲಾ ಸಾಧ್ಯತೆಗಳಿದೆ. ಶೇ80 ಲಸಿಕೆ ನೀಡಿದ ದೇಶಗಳಲ್ಲೂ ಕೊರೋನಾ ಸೋಂಕಿನ ಅಲೆ ತೀವ್ರವಾಗಿದೆ. ಹಾಗಿದ್ದ ಮೇಲೆ ಲಸಿಕೆ ಪಡೆಯಲು ನಿರ್ಲಕ್ಷ್ಯ ತೋರಿದ ನಾವು ಯಾವ ಲೆಕ್ಕ.
Discussion about this post