ಕೆಲವರಿಗೆ ಕೆಲವೊಮ್ಮೆ ಅದೃಷ್ಟ ಹೇಗೆ ಒಲಿಯುತ್ತದೆ ಅನ್ನುವುದನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಬೇಡ ಬೇಡ ಅಂದ್ರು ಅದೃಷ್ಟ ಬಾಗಿಲು ಒದ್ದು ಒಳಗೆ ಎಂಟ್ರಿ ಪಡೆಯುತ್ತದೆ.
ಥೈಲ್ಯಾಂಡ್ ಮಹಾರಾಜ ವಜಿರಲೊಂಗ್ ಕಾರ್ನ್ ಅವರ ಅಂಗರಕ್ಷಕಿಯಾಗಿದ್ದ ಸುಥಿದಾ ತಿಜಯ್ ರದ್ದು ಇದೇ ಕಥೆ.
ಥಾಯ್ ಏರ್’ವೇಸ್ ನಲ್ಲಿ ಕೆಲಸ ಮಾಡುತ್ತಿದ್ದ ಸುಥಿದಾ ತಿಜಯ್ ರನ್ನು ಇದೇ ವಜಿರಲೊಂಗ್ ಕಾರ್ನ್ ತನ್ನ ಭದ್ರತಾ ಪಡೆಗೆ 2014ರಲ್ಲಿ ನೇಮಿಸಿಕೊಂಡಿದ್ದ.
ನಂತ್ರ ಸುಥಿದಾ ಹಂತ ಹಂತವಾಗಿ ಪದೋನ್ನತಿ ಕೂಡಾ ಹೊಂದಿದ್ದರು. ಇದೀಗ ಸುಥಿದಾ ತಿಜಯ್ ಗೆ ಮಹಾರಾಣಿಯಾಗುವ ಭಾಗ್ಯ ಒಲಿದು ಬಂದಿದೆ.
66 ವರ್ಷದ ವಜಿರಲೊಂಗ್ ಕಾರ್ನ್ 40 ವರ್ಷದ ಸುಥಿದಾ ತಿಜಯ್ರನ್ನು ಮದುವೆಯಾಗಿದ್ದಾರೆ.
ವಜಿರಲೊಂಗ್ ಕಾರ್ನ್ ಅವರಿಗೆ ಈಗಾಗಲೇ 3 ಮದುವೆಯಾಗಿದ್ದು, 7 ಜನ ಮಕ್ಕಳಿದ್ದಾರೆ. ಆದರೆ ಮೂವರು ಪತ್ನಿಯರಿಗೂ ವಜಿರಲೊಂಗ್ ಕಾರ್ನ್ ಅವರಿಗೆ ವಿಚ್ಛೇದನ ನೀಡಿದ್ದು, 4ನೇ ಪತ್ನಿಯಾಗಿ ಅಂಗರಕ್ಷಕಿಯನ್ನು ಮದುವೆಯಾಗಿದ್ದಾರೆ. ಈ ಪೈಕಿ ಮೂರನೇ ಪತ್ನಿಯ ಮೇಲೆ ಗಂಭೀರ ಭ್ರಷ್ಟಚಾರದ ಆರೋಪ ಕೇಳಿ ಬಂದಿತ್ತು. ಹೀಗಾಗಿ ಆಕೆಗೆ ವಿಚ್ಛೇದನ ನೀಡಲಾಗಿತ್ತು.
ಇನ್ನು ಅಂಗರಕ್ಷಕಿಯೊಂದಿಗೆ ವಜಿರಲೊಂಗ್ ಕಾರ್ನ್ ಸಂಬಂಧ ಹೊಂದಿರುವ ಕುರಿತಂತೆ ಸಾಕಷ್ಟು ವರ್ಷದ ಹಿಂದೆಯೇ ಸುದ್ದಿಯಾಗಿತ್ತು. ಆದರೆ ರಾಜ ಮನೆತನದ ಬಗ್ಗೆ ಮಾತನಾಡುವವರು ಯಾರು ಇರಲಿಲ್ಲ.
Dailymail ಈ ಸಂಬಂಧ 2017ರಲ್ಲೇ ವರದಿಯೊಂದನ್ನು ಪ್ರಕಟಿಸಿತ್ತು. ಈಗ ಎಲ್ಲವೂ ಅಧಿಕೃತ.
Discussion about this post