ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಮಾಡಿದ್ದು ಬರೀ ತಪ್ಪುಗಳು ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ
ಬೆಂಗಳೂರು : ರಾಜ್ಯದಲ್ಲಿ ದುರಾದೃಷ್ಟ ಅನ್ನುವಂತೆ ಎದ್ದಿರುವ ಪಠ್ಯಪುಸ್ತಕ ವಿವಾದಕ್ಕೆ ತೆರೆ ಎಳೆಯಲು ಬೊಮ್ಮಾಯಿ ನೇತೃತ್ವದ ಸರ್ಕಾರ ಮುಂದಾಗಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿದ ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ದ ಟೂಲ್ ಕಿಟ್ ಹೋರಾಟ ಪ್ರಾರಂಭವಾದ ಬೆನ್ನಲ್ಲೇ ರಾಜ್ಯ ಸರ್ಕಾರ ತಡವಾಗಿ ಎಚ್ಚೆತ್ತುಕೊಂಡಿದೆ. ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ದೇವೇಗೌಡರು ದನಿ ಎತ್ತಿರುವುದು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿರುವ ಕಂದಾಯ ಸಚಿವ ಆರ್ . ಅಶೋಕ್, ಬರಗೂರು ಮಾಡಿದ ಯಟವಟ್ಟುಗಳು, ತಪ್ಪುಗಳ ಪಟ್ಟಿಯನ್ನು ರಾಜ್ಯದ ಜನತೆಯ ಮುಂದಿಟ್ಟಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರನ್ನು ವಿಪರೀತವಾಗಿ ಓಲೈಕೆ ಮಾಡಲಾಗುತ್ತಿತ್ತು. ಮುಂದುವರಿದು ಪಠ್ಯದಲ್ಲೂ ಅದನ್ನು ಸೇರಿಸಲಾಗಿದೆ. ಮೈಸೂರು ಅರಸರಿಗೆ ಸಂಬಂಧಪಟ್ಟ ವಿಚಾರಗಳನ್ನು ನಿರ್ಲಕ್ಷ್ಯ ಮಾಡಿ, ಟಿಪ್ಪುವನ್ನು ಪಠ್ಯದಲ್ಲಿ ವೈಭವೀಕರಣಗೊಳಿಸಲಾಯ್ತು. ಭಾರತೀಯ ಸಂಸ್ಕೃತಿ, ಭಾರತೀಯ ರಾಜರ ಆಳ್ವಿಕೆ, ಅವರ ಸಾಧನೆಗಳನ್ನು ಪಕ್ಕಕ್ಕೆ ಸರಿಸಲಾಯ್ತು ಎಂದು ಅಶೋಕ್ ಆರೋಪಿಸಿದ್ದಾರೆ.
ಕಮ್ನುನಿಸ್ಟ್ ಸಿದ್ದಾಂತ ಹೇರಿ ಬರಗೂರು
ಇನ್ನು ಬರಗೂರು ನೇತೃತ್ವದ ಸಮಿತಿ ಪಠ್ಯದಲ್ಲಿ ಕಮ್ಯುನಿಸ್ಟ್ ಸಿದ್ದಾಂತವನ್ನು ಹೇರಿತ್ತು. ಕಮ್ಯುನಿಸಂ ಅತ್ಯುತ್ತಮ್ಮ ಎಂದು ಸಾರಲಾಗಿತ್ತು. ಸರ್ವಾಧಿಕಾರಿ ಆಡಳಿತದಿಂದ ಶಿಸ್ತು ಬರುತ್ತದೆ ಎಂದು ಮಕ್ಕಳ ತಲೆಯಲ್ಲಿ ತುಂಬಿಸುವ ಕೆಲಸವಾಗಿತ್ತು.
ಹಿಂದೂ ಧರ್ಮವನ್ನು ಕಡೆಗಣಿಸಿದ್ದ ಸಮಿತಿ
ಪಠ್ಯದಲ್ಲಿ ಶಿವ, ರಾಮ, ಕೃಷ್ಣ ಕುರಿತಾದ ಅಂಶಗಳನ್ನು ಪಠ್ಯದಿಂದ ಕೈ ಬಿಡಲಾಗಿತ್ತು. ಹಿಂದೂ ಧರ್ಮ, ಹಿಂದೂ ಪದ, ರಾಮಾಯಣ, ಮಹಾಭಾರತದ ಅಂಶಗಳಿಗೂ ಬರಗೂರು ಸಮಿತಿ ಕತ್ತಿ ಹಾಕಿತ್ತು. ಆಗ ಆದ್ಯಾವ ಸಾಹಿತಿಗಳೂ ಅಪಸ್ವರ ಎತ್ತಿರಲಿಲ್ಲ.
ಮುಸ್ಲಿಮರ ದೌರ್ಜನ್ಯ ಸೈಡ್ ಲೈನ್
ಭಾರತದಲ್ಲಿ ಹಿಂದೂ ದೇವಾಲಯಗಳನ್ನು ಮುಸ್ಲಿಂ ಅಕ್ರಮಣಕಾರರು ನಾಶ ಮಾಡಿದ್ದರು ಅನ್ನುವ ಅಂಶಗಳು ಮಕ್ಕಳಿಗೆ ಕಿಳಿಯಬಾರದು ಅನ್ನುವುದು ಸಮಿತಿಯ ಉದ್ದೇಶವಾಗಿತ್ತು. ಈ ಸಲುವಾಗಿಯೇ ಮಹಮದ್ ಘಜನಿ ಭಾರತದ ಮೇಲೆ ದಾಳಿ ಮಾಡಿ ದೇವಾಲಯಗಳನ್ನು ನಾಶ ಮಾಡಿದ ವಿಚಾರಗಳನ್ನು ಬರಗೂರು ಸಮಿತಿ ತೆಗೆದು ಹಾಕಿತ್ತು. ವಿಜಯನಗರ, ಶಿವಾಜಿ ವಿಚಾರಗಳಿಗೂ ಬರಗೂರು ಸಮಿತಿ ಕತ್ತರಿ ಹಾಕಿತ್ತು.
ಇದನ್ನೂ ಓದಿ : ಬರಗೂರು ಪಠ್ಯಕ್ಕೆ ಸೆಡ್ಡು ಹೊಡೆದ ಸರ್ಕಾರ : ಸಿದ್ದು ಅವಧಿಯ ಎಡವಟ್ಟುಗಳ ಪಟ್ಟಿ ಬಿಡುಗಡೆ
ಹೀಗೆ ಸಿದ್ದರಾಮಯ್ಯ ಮತ್ತು ಬರಗೂರು ಕಡೆಯಿಂದ ಆಗಿರುವ ಯಡವಟ್ಟುಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಜನತೆಯ ಮುಂದಿಟ್ಟಿದೆ. ಈ ಮೂಲಕ ರಾಜಕೀಯ ಪ್ರೇರಿತ ಪಠ್ಯಪುಸ್ತಕ ಹೋರಾಟಕ್ಕೆ ತಿರುಗೇಟು ನೀಡಲಾಗಿದೆ.
Discussion about this post