Thursday, January 28, 2021

ಅಕ್ರಮ ಸಂಬಂಧ ಬಯಲಾದ ಭೀತಿ – ಗಂಡನ ಮರ್ಮಾಂಗವನ್ನು ಕಚ್ಚಿದ ಪತ್ನಿ

Must read

ಪ್ರಿಯಕರನ ಜೊತೆಗಿನ ಪ್ರಣಯದಾಟವನ್ನು ಪತಿ ನೋಡಿದ್ದು,ಅದನ್ನು ಗ್ರಾಮಸ್ಥರಿಗೆ ಹೇಳುತ್ತಾನೆ ಅನ್ನುವ ಭೀತಿಯಿಂದ ಗಂಡನ ಮರ್ಮಾಂಗವನ್ನೇ ಪತ್ನಿಯೊಬ್ಬಳು ಕಚ್ಚಿ ತುಂಡರಿಸಿದ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.

ಕಳೆದ ಸೋಮವಾರ ಗುಡಿಯಾಟಂನ ಥುರೈಮೂಲೈ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಪತಿ ಸೆಂತಮಾರೈ ನ ಮರ್ಮಾಂಗ ಕಚ್ಚಿದ ಪತ್ನಿ ಜಯಂತಿಯನ್ನು(45)ಯನ್ನು ಪೊಲೀಸರು ಬಂಧಿಸಿದ್ದಾರೆ.

ಸೆಂತಮಾರೈನನ್ನು ಸ್ಥಳೀಯರು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು,ಹೆಚ್ಚಿನ ಚಿಕಿತ್ಸೆಗಾಗಿ ರಾಜೀವ್‌ ಗಾಂಧಿ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಸೆಂತಮಾರೈ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಜಯಂತಿ ಹಾಗೂ ಸೆಂತಮಾರೈ ಕಳೆದ ಭಾನುವಾರ ರಾತ್ರಿ ಗ್ರಾಮದ ಆಷಾಢ ಮಾಸದ ವಿಶೇಷ ಹಬ್ಬಕ್ಕಾಗಿ ದೇವಸ್ಥಾನಕ್ಕೆ ತೆರಳಿದ್ದರು. ಸುಮಾರು ಮಧ್ಯರಾತ್ರಿ 1.30 ರ ವೇಳೆ ಜಯಂತಿ ಸೆಂತಮಾರೈ ನ ಕಣ್ಣು ತಪ್ಪಿಸಿದ್ದಾಳೆ. ಒಂದು ಗಂಟೆಗೂ ಹೆಚ್ಚು ಹೊತ್ತಾದರೂ,ಜಯಂತಿ ಕಾಣದೇ ಇದ್ದುದರಿಂದ ಪತ್ನಿಯನ್ನು ಹುಡುಕಿಕೊಂಡು ಸೆಂತಮಾರೈ ತೆರಳಿದ್ದಾನೆ. ಈ ವೇಳೆ ಪತ್ನಿ ಗ್ರಾಮದ ದಚ್ಚನಮೂರ್ತಿ ಎಂಬಾತನ ಜೊತೆ ಇರುವುದನ್ನು ನೋಡಿದ್ದಾನೆ.

ಈ ವೇಳೆ  ನಿಮ್ಮಿಬ್ಬರ ಅಕ್ರಮ ಸಂಬಂಧವನ್ನು ಗ್ರಾಮದಲ್ಲಿ ಬಹಿರಂಗಪಡಿಸುವುದಾಗಿ ಸೆಂತಮಾರೈ ಬೆದರಿಕೆ ಹಾಕಿದ್ದಾನೆ. ಈ ವೇಳೆ ಗಲಾಟೆ ನಡೆದಿದೆ. ಸೆಂತಮಾರೈ ನ ಪಂಚೆ ಕಳಚಿ ಬಿದ್ದಿದೆ. ಗ್ರಾಮಸ್ಥರಿಗೆ ವಿಚಾರ ಗೊತ್ತಾದರೆ,ಇಬ್ಬರಿಗೂ ಧರ್ಮದೇಟು ಬೀಳುತ್ತದೆ ಎಂಬ ಭಯದಲ್ಲಿಯಂತಿ ಸೆಂತಮಾರೈ ನ ಮರ್ಮಾಂಗವನ್ನು ಕಚ್ಚಿ ಹಲ್ಲೆ ನಡೆಸಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಪತ್ನಿ ಜಯಂತಿ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
- Advertisement -

Latest article