ಕೋತಿ, ಹಸು, ಸಿಂಹಗಳು ಸಂಸ್ಕೃತ ಮತ್ತು ತಮಿಳಿನಲ್ಲಿ ಮಾತನಾಡಲು ಸಾಧ್ಯವೇ..ಮಾಡಿ ತೋರಿಸುತ್ತೇನೆ ಎಂದು ಪ್ರಮಾಣ ಮಾಡುವುದಾಗಿ ಸ್ವಘೋಷಿತ, ವಿವಾದಿತ ದೇವಮಾನವ ನಿತ್ಯಾನಂದ ಸ್ವಾಮಿ ಹೇಳಿದ್ದಾರೆ.
ಭಕ್ತರನ್ನು ಉದ್ದೇಶಿಸಿ ಹೇಳಿದ ಈ ಮಾತುಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋತಿಗಳು ಸೇರಿ ಹಲವು ಪ್ರಾಣಿಗಳಿಗೆ ಮನುಷ್ಯರಲ್ಲಿರುವ ಅನೇಕ ಒಳ ಅಂಗಗಳು ಇಲ್ಲ. ಆದರೆ, ಆ ಪ್ರಾಣಿಗಳಲ್ಲಿನ ಆಂತರಿಕ ಜಾಗೃತಾವಸ್ಥೆಯನ್ನು ಬೆಳೆಸುವ ಮೂಲಕ ಮಾತನಾಡುವಂತೆ ಮಾಡಬಹುದು. ನಾನು ಇದನ್ನು ವೈಜ್ಞಾನಿಕ, ವೈದ್ಯಕೀಯ ಪರೀಕ್ಷೆ, ಸಂಶೋಧನೆ ಮೂಲಕ ಸಾಬೀತು ಪಡಿಸುತ್ತೇನೆ ಅಂದಿದ್ದಾರೆ.
ಪ್ರಾಣಿಗಳು ಮಾತನಾಡುವಂತೆ ಮಾಡಲು ಸಾಫ್ಟ್ವೇರ್ ಇದೆ. ಈ ಸಾಫ್ಟ್ವೇರ್ ಅನ್ನು ಪರೀಕ್ಷೆ ಮಾಡಿದ್ದೇನೆ. ಚೆನ್ನಾಗಿಯೇ ಕೆಲಸ ಮಾಡುತ್ತದೆ. ಇನ್ನೊಂದು ವರ್ಷದೊಳಗೆ ಸಾಫ್ಟ್ವೇರ್ ಅಭಿವೃದ್ಧಿಗೊಳಿಸಿ ಪ್ರಾಣಿಗಳು ಸಂಸ್ಕೃತ, ತಮಿಳು ಮಾತನಾಡುವಂತೆ ಮಾಡುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ.
[youtube https://www.youtube.com/watch?v=QqGikWuZzcc&w=688&h=397]
Discussion about this post