ನಿಗೂಢವಾಗಿ ಮೃತಪಟ್ಟ ಬಾಲಿವುಡ್ ನಟ ಸುಶಾಂತ್ ಸಾವಿನ ತನಿಖೆಯ ( Sushant Singh ) ಆರೋಪ ಪಟ್ಟಿ ಕೋರ್ಟ್ ಗೆ ಸಲ್ಲಿಕೆಯಾಗಿದೆ
ಮುಂಬೈ : ತಮ್ಮ ನಿವಾಸದಲ್ಲಿ ಎರಡು ವರ್ಷಗಳ ಹಿಂದೆ ನಿಗೂಢವಾಗಿ ಮೃತಪಟ್ಟ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯ ( Sushant Singh ) ಜಾರ್ಜ್ ಶೀಟ್ ಅನ್ನು ಮಾದಕ ವಸ್ತು ನಿಯಂತ್ರಣ ದಳ ( narcotics control bureau – ncb) ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಅದರಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಿಕ್ಕಾಪಟ್ಟೆ ಮಾದಕ ವ್ಯಸನಿಯಾಗಿದ್ದ. ಗೆಳತಿ ರಿಯಾ ಚಕ್ರವರ್ತಿ ( Rhea Chakraborty ) ಸೇರಿದಂತೆ 15 ಜನ ಡ್ರಗ್ಸ್ ಖರೀದಿಗೆ ಸಹಾಯ ಮಾಡಿದ್ದರು ಎಂದು ಹೇಳಲಾಗಿದ್ದು, 35 ಜನರ ಹೆಸರನ್ನು ಜಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : canada boat accident : ಮೂವರು ಕೇರಳಿಗರ ಬಲಿ ಪಡೆದ ಕೆನಡಾ ದೋಣಿ ದುರಂತ
2018ರಿಂದಲೇ ಸುಶಾಂತ್ ಮಾದಕ ವಸ್ತುಗಳ ಹಿಂದೆ ಬಿದ್ದಿದ್ದ. ಆತನಿಗೆ ಈ ಚಟವನ್ನು ಹತ್ತಿಸಿದ್ದು ಫ್ಲ್ಯಾಟ್ ಮೇಟ್ ಸಿದ್ದಾರ್ಥ್. ಈತ ಸುಶಾಂತ್ ಬ್ಯಾಂಕ್ ಖಾತೆಯ ಹಣವನ್ನೇ ಬಳಸಿ ಡ್ರಗ್ಸ್ ಖರೀದಿಸುತ್ತಿದ್ದ. ಖರೀದಿಗಾಗಿ ಮಾಡಿದ ವೆಚ್ಚವನ್ನು ಪೂಜಾ ಸಾಮಾಗ್ರಿ ಎಂದು ನಮೂದಿಸಿದ್ದಾನೆ.
ಜೊತೆಗೆ ರಿಯಾ ಸುಶಾಂತ್ ನ ಇಬ್ಬರು ಮನೆ ಕೆಲಸದವರು ಹೀಗೆ 35 ಜನ ವಿವಿಧ ಬಗೆಯ ಮಾದಕ ವಸ್ತುಗಳನ್ನು ಸುಶಾಂತ್ ಗಾಗಿ ಖರೀದಿಸಿದ್ದಾರೆ. ಜೊತೆಗೆ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಹಲವಾರು ಮಂದಿ ಬಾಲಿವುಡ್ ಗೆ ಡ್ರಗ್ಸ್ ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದರು ಎಂದು ಜಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.
ಒಂದು ವೇಳೆ ಈ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾದರೆ ರಿಯಾಳಿಗೆ 10 ವರ್ಷಗಳ ತನಕ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿದೆ.
ಡೋಲೋ ಕಂಪನಿಯಿಂದ ವೈದ್ಯರಿಗೆ ಸಾವಿರ ಕೋಟಿ ರೂಪಾಯಿ ಗಿಫ್ಟ್
ಕೊರೋನಾ ಸಾಂಕ್ರಾಮಿಕ ಕಾಲದಲ್ಲಿ Dolo 650 ಮಾತ್ರೆಗೆ ಬಂದ ಬೇಡಿಕೆಯನ್ನು ಊಹಿಸಲು ಸಾಧ್ಯವಿಲ್ಲ. ಒಂದು ನಿಟ್ಟಿನಲ್ಲಿ ಆ ಕಾಲದಲ್ಲಿ blockbuster medicine
ಬೆಂಗಳೂರು : ಕೊರೋನಾ ಸಂಕಷ್ಚ ಕಾಲದಲ್ಲಿ ಬಹುತೇಕ ವೈದ್ಯರು ಸೋಂಕಿತರಿಗೆ Dolo 650 ಮಾತ್ರೆಯನ್ನೇ ಶಿಫಾರಸು ಮಾಡಲಾಗಿತ್ತು. ಕೊರೋನಾ ಉತ್ತುಂಗದಲ್ಲಿ ಸಂದರ್ಭದಲ್ಲಿ ಯಾರಾದ್ರೂ ಮೆಡಿಕಲ್ ಶಾಪ್ ನಲ್ಲಿ Dolo 650 ಮಾತ್ರೆ ಕೇಳಿದ್ರೆ ಅಪರಾಧಿ ಅನ್ನುವಂತೆ ನೋಡ್ತಾ ಇದ್ರು. ಅಷ್ಟೇ ಯಾಕೆ ಮಾತ್ರೆ ಪಡೆದವರ ಹೆಸರು ಫೋನ್ ನಂಬರ್ ಗಳನ್ನು ಮೆಡಿಕಲ್ ನವರು ಬರೆದಿಡಬೇಕಾಗಿತ್ತು.
ಹೀಗೆ ಸದ್ದು ಮಾಡಿದ Dolo 650 ಮಾತ್ರೆಯನ್ನು ಉತ್ಪಾದಿಸುವ ಬೆಂಗಳೂರು ಸಂಸ್ಥೆ ಇದೀಗ ಅಕ್ರಮ ಎಸಗಿರುವುದು ಬೆಳಕಿಗೆ ಬಂದಿದೆ. ಕೇಂದ್ರಿಯ ತೆರಿಗೆ ಮಂಡಳಿ ಅಕ್ರಮವನ್ನು ಬಯಲಿಗೆಳೆದಿದ್ದು, ಮಾತ್ರೆಯ ಮಾರಾಟವನ್ನು ಹೆಚ್ಚಿಸಿಕೊಳ್ಳಲು ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರಿಗೆ ಸಾವಿರ ಕೋಟಿ ರೂಪಾಯಿ ಮೌಲ್ಯದ ಗಿಫ್ಟ್ ಗಳನ್ನು ನೀಡಿರುವುದನ್ನು ಪತ್ತೆ ಹಚ್ಚಲಾಗಿದೆ.
ತನ್ನ ಮಾತ್ರೆಯ ಮಾರಾಟ ಉತ್ತೇಜಿಸುವ ಸಲುವಾಗಿ ವೈದ್ಯರು ಹಾಗೂ ವೃತ್ತಿಪರರಿಗೆ ಉಡುಗೊರೆ, ಪ್ರವಾಸ ವೆಚ್ಚ, ಪ್ರಚಾರಕ್ಕಾಗಿ ಸಭೆಗಳನ್ನು ನಡೆಸುವ ಮೂಲಕ ಅನೈತಿಕ ಮಾರ್ಗವನ್ನು ತುಳಿದಿತ್ತು. ಹೀಗಾಗಿ ಕೊರೋನಾ ಕಾಲದಲ್ಲಿ 350 ಕೋಟಿ ಮಾತ್ರಗಳನ್ನು ಮಾರಿದ್ದ ಮೈಕ್ರೋಲ್ಯಾಬ್ಸ್ 400 ಕೋಟಿ ರೂಪಾಯಿ ಆದಾಯವನ್ನು ಗಳಿಸಿತ್ತು.
ಇದರ ಬೆನ್ನಲ್ಲೇ ಮೈಕ್ರೋಲ್ಯಾಬ್ಸ್ ಹಣಕಾಸು ವಹಿವಾಟು ಮತ್ತು ತೆರಿಗೆ ನಿರ್ವಹಣೆ ಬಗ್ಗೆ ಅನುಮಾನ ಎದ್ದಿತ್ತು. ಹೀಗಾಗಿ ಆದಾಯ ತೆರಿಗೆ ಇಲಾಖೆ ಜುಲೈ 6 ರಂದು 9 ರಾಜ್ಯಗಳಲ್ಲಿ ಸಂಸ್ಥೆಗೆ ಸೇರಿದ್ದ 36 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಆಗ 1.20 ಕೋಟಿಯಷ್ಟು ಲೆಕ್ಕ ತೋರಿಸದ ನಗದು 1.40 ಕೋಟಿ ಮೌಲ್ಯಗ ವಜ್ರಾಭರಣ ಪತ್ತೆಯಾಗಿತ್ತು. ಜೊತೆಗೆ ಒಂದಿಷ್ಟು ದಾಖಲೆಗಳನ್ನು ಕೂಡಾ ಅಧಿಕಾರಿಗಳು ತಮ್ಮ ಸುಪರ್ದಿಗೆ ಪಡೆದಿದ್ದರು.
ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ sales and promotion ವಿಭಾಗದಡಿಯಲ್ಲಿ ಅನೈತಿಕ ಮಾರ್ಗದ ಮಾಹಿತಿ ಸಿಕ್ಕಿದೆ.
Discussion about this post