ದೇಹದೊಳಗಿನ ಕಶ್ಮಲಗಳನ್ನು ಹೊರ ಹಾಕಲು ಸ್ವಚವಾದ ಶೌಚಾಲಯ ಇದ್ರೆ ಸಾಕು ಅನ್ನುವುದು ಎಲ್ಲರ ಹಂಬಲ. ಆದ್ರೆ ಮಲ್ಯನಂತಹ ಪುಣ್ಯಾತ್ಮರು ಚಿನ್ನದ ಶೌಚಾಲಯವನ್ನೇ ಕಟ್ಟಿಸಿದ್ದರಂತೆ. ತಿಂದಿರುವುದನ್ನು ಹೊರಹಾಕಲು ಚಿನ್ನದ್ಯಾಕೆ ಬೇಕು ಅನ್ನುವುದು ಈವರೆಗೂ ಅರ್ಥವಾಗಿಲ್ಲ.
ಇನ್ನು ಕಾಸಿದ್ದವರು ಅರೆ ಘಳಿಗೆಯ ಕೆಲಸಕ್ಕೆ ಸಿಕ್ಕಾಪಟ್ಟೆ ಖರ್ಚು ಮಾಡ್ತಾರೆ ಬಿಡಿ.
ಇನ್ನು ರೆಸ್ಟೋರೆಂಟ್ ಹೋಟೆಲ್ ಗಳ ಶೌಚಾಲಯ ಒಳ ಹೊಕ್ರೆ ಒಂದ್ಸಲ ಹೊರಗೆ ಹೋದ್ರೆ ಸಾಕು ಅನ್ನಿಸಿ ಬಿಡುತ್ತೆ. ಆದ್ರೆ ಜಪಾನ್ನಲ್ಲಿರುವ ಒಂದು ಕೆಫೆ, ಅಲ್ಲಿನ ತಿಂಡಿ ತಿನಿಸುಗಳ ಬದಲಾಗಿ ವಿಚಿತ್ರವಾದ ಶೌಚಾಲಯದಿಂದಾಗಿ ಜನರನ್ನು ಆಕರ್ಷಿಸುತ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ ಜನ ಇಲ್ಲಿಗೆ ಟೀ ಕಾಫಿ ಕುಡಿಯಲು ಬರೋ ಬದಲು, ತಿಂದಿರೋದನ್ನ ಹೊರ ಹಾಕೋದಿಕ್ಕೆ ಬರ್ತಾರಂತೆ.
ಜಪಾನ್ ನ ಅಕಾಶಿಯಲ್ಲಿರುವ ಹಿಪೊಪೊ ಪಾಪಾ ಕೆಫೆ ತನ್ನ ಗ್ರಾಹಕರು ಶೌಚಾಲಯ ಬಳಸುವಾಗ ಮೀನು ಮತ್ತು ಆಮೆಗಳನ್ನು ನೋಡುತ್ತ ಎಂಜಾಯ್ ಮಾಡಲು ಅವಕಾಶ ಮಾಡಿಕೊಂಡಿದೆ. ಶೌಚಾಲಯದ ಸುತ್ತಲೂ ದೈತ್ಯ ಅಕ್ವೇರಿಯಂ ನಿರ್ಮಿಸಿರುವ ಮಾಲೀಕರು ಗ್ರಾಹಕರು ಸಂತೃಪ್ತಿಯಾಗಿ ‘ಮಾಡ್ಲಿ’ ಎಂದು ಬಯಸಿದ್ದಾರೆ.
ಮೂರು ಕಡೆಯಿಂದ ಸುತ್ತುವರೆದಿರುವ ಅಕ್ವೇರಿಯಂನ ದೃಶ್ಯಾವಳಿಗಳನ್ನು ನೋಡಿ ಆನಂದಿಸಲು ಕೆಲವು ಗ್ರಾಹಕರು ಟಾಯ್ಲೆಟ್ನೊಳಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ.
ಅಂದ ಹಾಗೇ ಈ ವಿಚಿತ್ರ ಟಾಯ್ಲೆಟ್ ನಿರ್ಮಾಣಕ್ಕೆ ಸುಮಾರು 1.8 ಕೋಟಿ ರೂಪಾಯಿ ಖರ್ಚಾಗಿದೆಯಂತೆ.
ಇನ್ನು ಇದನ್ನು ಬಳಸಲು ಮಹಿಳೆಯರಿಗೆ ಆದ್ಯತೆ ನೀಡಲಾಗಿತ್ತು. ಮಹಿಳಾ ಗ್ರಾಹಕರು ಇಲ್ಲದ ಸಮಯದಲ್ಲಿ ಪುರುಷರಿಗೆ ಈ ಶೌಚಾಲಯಕ್ಕೆ ಎಂಟ್ರಿ.
Discussion about this post