ಕೋಲಾರ ಎಸ್ಪಿ ( Kolar rss SP Devaraj)ಹಿಂದೂ ಕಾರ್ಯಕರ್ತರ ಮೇಲೆ ದರ್ಪ ತೋರಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ. ನ್ಯಾಯ ಕೇಳಲು ಬಂದವರ ಮೇಲೆಯೇ ಡಿ. ದೇವರಾಜ್ ಅವರು ಕೋಪ ತೋರಿಸಿದ್ದಾರೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ
ಕೋಲಾರ : ಆರ್.ಎಸ್.ಎಸ್ ಮುಖಂಡನಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೂರು ಪೊಲೀಸ್ ಠಾಣೆ ಮುಂದೆ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದರು. ( Kolar rss SP Devaraj ) ಈ ವೇಳೆ ಸ್ಥಳಕ್ಕೆ ಬಂದ ಕೋಲಾರ ಎಸ್ಪಿ ದೇವರಾಜ್ ಕಾರಿನಿಂದ ಇಳಿಯುತ್ತಿದ್ದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ತೆರವು ಮಾಡಿದ್ದಾರೆ.
ಆದರೆ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ವರ್ತನೆ ಹಿಂದೂ ಮುಖಂಡರ ಆಕ್ರೋಶಕ್ಕೆ ಗುರಿಯಾಗಿದೆ.ನ್ಯಾಯ ಕೇಳುವ ಸಲುವಾಗಿ ನಮ್ಮ ಕಾರ್ಯಕರ್ತರು ಸ್ಟೇಷನ್ ಗೆ ಹೋಗಿದ್ದಾರೆ. ನ್ಯಾಯ ಕೇಳಲು ಪೊಲೀಸ್ ಠಾಣೆಗಳಲ್ಲದೆ ಮತ್ತೆಲ್ಲಿಗೆ ಹೋಗಲಿ. ಆದರೆ ಪೊಲೀಸ್ ವರಿಷ್ಠಾಧಿಕಾರಿಯವರು ಕಾರ್ಯಕರ್ತರ ಮೇಲೆ ಏಕಾಏಕಿ ಎಗರಾಡಿದ್ದಾರೆ. ಸೌಜನ್ಯದಿಂದ ಮಾತನಾಡಿಸಿದ್ರೆ ಸಾಕಿತ್ತು ಅಂದಿದ್ದಾರೆ.( Kolar rss SP Devaraj)
ಇದನ್ನೂ ಓದಿ : snakebite : ಮೂರೇ ದಿನದಲ್ಲಿ ಸೇಡು ತೀರಿಸಿಕೊಂಡ ನಾಗಿಣಿ : ಉತ್ತರ ಪ್ರದೇಶದಲ್ಲೊಂದು ವಿಚಿತ್ರ ಘಟನೆ
ಒಂದು ಹಂತದಲ್ಲಿ ದೇವರಾಜ್ ಅವರು ಎಲ್ಲಾ ಹಿಂದೂ ಕಾರ್ಯಕರ್ತರನ್ನು ಠಾಣಾ ಆವರಣದಿಂದ ಏಕಾಂಗಿಯಾಗಿ ಹೊರಗಡೆ ಕಳುಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಇನ್ನೇನು ಬೇಕಾಗಿದೆ ನಿಮಗೆ ಎಂದು ಗದರಿದ್ದಾರೆ ಕೂಡಾ.
ಇದನ್ನೂ ಓದಿ : Siddaramaiah : ಬಾದಾಮಿಯಲ್ಲಿ ಸೋಲುವ ಭೀತಿ ಕೋಲಾರಕ್ಕೆ ಸಿದ್ದರಾಮಯ್ಯ ವಲಸೆ
ಆದರೆ ಇದಾದ ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ಆಗಮಿಸಿದ ಹಿಂದೂ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ. ನೀವು ಕಾರ್ಯಕರ್ತರ ಜೊತೆಗೆ ನಡೆದುಕೊಂಡಿರುವ ರೀತಿ ಸರಿ ಇಲ್ಲ, ನ್ಯಾಯ ಕೇಳಲು ಬಂದವರನ್ನು ಮಾತನಾಡಿಸೋದು ಬಿಟ್ಟು ಎಗರಾಡಿರುವುದು ಸರಿಯಲ್ಲ ಅಂದಿದ್ದಾರೆ. ಕೊನೆಗೆ ಕೆಲ ಹಿಂದೂ ಮುಖಂಡರನ್ನು ಕರೆಸಿಕೊಂಡ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಅವರು ಮಾತುಕತೆ ನಡೆಸಿದ್ದಾರೆ.
ಕಳೆದ ಏಪ್ರಿಲ್ ತಿಂಗಳಲ್ಲಿ ರಾಮನವಮಿ ಶೋಭಾಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತರು ಎಸ್ಪಿ ದೇವರಾಜ್ ಜೊತೆಗೆ ಮುನಿಸಿಕೊಂಡಿದ್ದರು. ಪೊಲೀಸರ ಸೂಚನೆಯನ್ನು ಮೀರಿ ಶೋಭಾಯಾತ್ರೆ ನಡೆಸಲು ಮುಂದಾದ ವೇಳೆ ಎಸ್ಪಿ ದೇವರಾಜ್ ಹಿಂದೂ ಕಾರ್ಯಕರ್ತರನ್ನು ಗದರಿದ ಘಟನೆಯೂ ಈ ಹಿಂದೆ ನಡೆದಿತ್ತು.
ಮಾಲೂರು ಪೊಲೀಸ್ ಠಾಣೆಯಲ್ಲಿ ನಡೆದ ಸಣ್ಣ ಘಟನೆ ಬಿಜೆಪಿ ಸರ್ಕಾರವನ್ನು ಮತ್ತೆ ಇಕ್ಕಟಿಗೆ ಸಿಲುಕಿಸಲಿದೆ.
Discussion about this post