Shilpa Shetty ಪತಿ Raj Kundra ನೀಲಿ ಚಿತ್ರಗಳ ದಂಧೆಯಲ್ಲಿ ಪ್ರಮುಖ ಆರೋಪಿಯಾದ ಬೆನ್ನಲ್ಲೇ, ಶಿಲ್ಪಾ ಶೆಟ್ಟಿ ರಿಯಾಕ್ಷನ್ ಗಾಗಿ ಎಲ್ಲರೂ ಕಾಯುತ್ತಿದ್ದರು. ಇದೀಗ ಶಿಲ್ಪಾ ಶೆಟ್ಟಿ ಮೌನ ಮುರಿದಿದ್ದು, ಈಗ ನನ್ನ ಸ್ಥಿತಿ ಹೇಗಿದೆ ಅನ್ನುವುದನ್ನು ವಿವರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಅದ್ಯಾವ ಕಷ್ಟವೇ ಬರಲಿ ಎದುರಿಸುತ್ತೇನೆ ಅಂದಿದ್ದಾರೆ,
“ ಜೀವಂತವಾಗಿರುವುದೇ ನನ್ನ ಅದೃಷ್ಟ ಎಂದು ನಾನು ನಂಬಿದ್ದೇನೆ. ಈ ಹಿಂದೆಯೂ ನಾನು ಸವಾಲುಗಳನ್ನು ಎದುರಿಸಿದ್ದೇನೆ. ಮುಂದೆಯೂ ಭವಿಷ್ಯದಲ್ಲೂ ಸವಾಲುಗಳನ್ನು ಎದುರಿಸಲಿದ್ದೇನೆ. ಅದನ್ನು ಸಮರ್ಪಕವಾಗಿ ಎದುರಿಸುತ್ತೇನೆ.
![shilpa2](https://torrentspree.com/wp-content/uploads/2021/07/shilpa2.png)
ಈ ಹಿಂದೆ ನಮಗೆ ನೋಯಿಸಿದವರ ಬಗ್ಗೆ, ಅನುಭವಿಸಿದ ಹತಾಶೆ ಬಗ್ಗೆ, ಅದೃಷ್ಟದ ಬಗ್ಗೆ ನಾವು ಕೋಪದಿಂದಲೇ ಹಿಂದಿರುಗಿ ನೋಡುತ್ತೇವೆ. ಮುಂದೆ ಕೆಲಸ ಕಳೆದುಕೊಳ್ಳಬಹುದು, ಕಾಯಿಲೆ ಬರಬಹುದು ಅಥವಾ ಪ್ರೀತಿ ಪಾತ್ರರನ್ನು ಕಳೆದುಕೊಳ್ಳಬಹುದು ಎಂಬ ಭಯದಿಂದಲೇ ಭವಿಷ್ಯವನ್ನು ನೋಡುತ್ತೇವೆ. ಆದರೆ, ಈ ಕ್ಷಣದಲ್ಲಿ ನಾವು ಬದುಕಬೇಕು. ಈ ಹಿಂದೆ ಏನಾಗಿತ್ತು, ಮುಂದೆ ಏನಾಗಬಹುದು ಎಂಬುದನ್ನು ಬಿಟ್ಟು ಈ ಕ್ಷಣದ ಬಗ್ಗೆ ನಾವು ಜಾಗೃತವಾಗಿರಬೇಕು ಎಂದು ತಿಳಿಸಿದ್ದಾರೆ.
![shilpa1](https://torrentspree.com/wp-content/uploads/2021/07/shilpa1.png)
Discussion about this post