27 C
Bengaluru
Saturday, January 16, 2021

ಚಂದನವನದಲ್ಲಿ ಭರವಸೆ ಮೂಡಿಸಿದ ಸಾಗರದ ಕಿನ್ನರಿ

Must read

ಪದವಿ ಮುಗಿಸಿದ ಕೂಡಲೇ ಕೆಲಸದ ಅನಿವಾರ್ಯತೆಯೂ ಹಿನ್ನಲೆಯಲ್ಲಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಕಾಲಿಟ್ಟ ಶೀತಲ್ ಶೆಟ್ಟಿಗೆ ನಾನು ಇಷ್ಟು ಎತ್ತರಕ್ಕೆ ಬೆಳೆಯುತ್ತೇನೆ ಅನ್ನುವ ನಿರೀಕ್ಷೆ ಇರಲಿಲ್ಲ. ಮನಸ್ಸಿನ ನೋವುಗಳನ್ನು ಮರೆಯಬೇಕು, ನನ್ನ ಕಾಲ ಮೇಲೆ ನಾನು ನಿಲ್ಲಬೇಕು ಅನ್ನುವುದಷ್ಟೇ ಅವರ ಇಚ್ಛೆಯಾಗಿತ್ತು.

BiggBoss Sheethal Shetty View about Malavika

ನಾನೊಂದು ಕಂಪನಿ ಮಾಲಕಿಯಾಗಬೇಕು, ಚಿತ್ರ ನಟಿಯಾಗಬೇಕು ಅನ್ನುವ ಗುರಿ ಅವರಿಗೆ ಇರಲಿಲ್ಲ. ಆದರೆ ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ ಅನ್ನುವಂತೆ ಶೀತಲ್ ಶೆಟ್ಟಿ ಪತಿ ಬೇಕು ಡಾಟ್ ಕಾಂ ತನಕ ಬಂದು ನಿಂತಿದ್ದಾರೆ.

2007 ರ ಜೂನ್ 9 ರಂದು ಮೊದಲ ಬಾರಿಗೆ ಟಿವಿ9 ವಾಹಿನಿಯಲ್ಲಿ ಕ್ಯಾಮರಾ ಎದುರಿಸದ ಶೀತಲ್ ಶೆಟ್ಟಿ ಮುಂದೆ ನಾನು ಶೀತಲ್ ಶೆಟ್ಟಿ ಈಗ ಹೆಡ್ ಲೈನ್ಸ್ ಅನ್ನುವ ಸಾಲಿಗೆ ಜನ ಫಿದಾ ಆಗುವಂತೆ ಮಾಡಿದರು.

Sheethal shetty | ಪೊಲೀಸ್ ಠಾಣೆಗೆ ದೂರು ಕೊಟ್ಟಿಲ್ಲ ಯಾಕೆ?

ಮುಂದೆ ನ್ಯೂಸ್ ರೀಡರ್ ಹುದ್ದೆ ಬೋರ್ ಹೊಡೆಸಿತು.  ಉಳಿದವರು ಕಂಡಂತೆ ಸಿನಿಮಾ ಆಫರ್ ಬಂದಾಗ ಸಂಸ್ಥೆ ಬ್ರೇಕ್ ನೀಡಲು ಒಪ್ಪಲಿಲ್ಲ. ಹೀಗಾಗಿ ಚಿತ್ರರಂಗದತ್ತ ನಡೆಯುವ ಗಟ್ಟಿ ನಿರ್ಧಾರದೊಂದಿಗೆ   ಉಳಿದವರು ಕಂಡಂತೆ ಸೆಟ್ ಗೆ ಎಂಟ್ರಿ ಹೊಡೆದರು.

ಪ್ರಥಮ್ ಕಂಡರೆ ಶೀತಲ್ ಗೆ ಫುಲ್ ಕ್ರಷ್

ಆದರೆ ಚಿತ್ರದಲ್ಲಿ ನಟನೆ ನೋಡಿದವರು. “ ಈಕೆ ನ್ಯೂಸ್ ರೀಡರ್ ಆಗಿದ್ದರೆ ಚೆಂದ, ನಟಿಯಾಗಿ ನೋಡುವುದು ಹಿಂಸೆ” ಅಂದರು. ಆದರೂ ತಮ್ಮ ಚರಿಷ್ಮಾ ಬಳಸಿ ಅರ್ಜುನ, ಕೆಂಡ ಸಂಪಿಗೆ, ಪ್ರೇಮ ಗೀಮ ಜಾನೇದೋ ಸಿನಿಮಾಗಳಲ್ಲಿ ನಟಿಸಿದರು. ಆದರೆ ಶೀತಲ್ ಶೆಟ್ಟಿ ನಟನೆ ಒಗ್ಗಲಿಲ್ಲ. ಪ್ರೇಕ್ಷಕರಿಗೆ ಶೀತಲ್ ಹಿಂಸೆಯಾಗಿ ಹೋದರು.

ಅಷ್ಟು ಹೊತ್ತಿಗೆ ಹೆಗಲು ಕೊಟ್ಟ ಗೆಳೆಯರು ಮೀಡಿಯಾ ಮನೆ ಸಾಹಸಕ್ಕೆ ಕೈ ಹಾಕಿದರು. ಶೀತಲ್ ಶೆಟ್ಟಿ ಫೇಸ್ ವ್ಯಾಲೂ ಜೊತೆಗೆ ಪ್ರತಿಭೆ ಬಳಸಿ ಈವೆಂಟ್ ಗಳ ಕಡೆ ಮುಖ ಮಾಡಿದರು. ಅಷ್ಟು ಹೊತ್ತಿಗೆ ಬಿಗ್ ಬಾಸ್ ಆಫರ್ ಬಂತು. ಬಿಗ್ ಬಾಸ್ ಮನೆಯಲ್ಲಿ ನೆಗೆಟಿವ್, ಪಾಸಿಟಿವ್ ಎರಡೂ ಮುಖವನ್ನೂ ಜನತೆಗೆ ತೋರಿಸಿದರು. Split ಮನಸ್ಥಿತಿ ಅನ್ನುವ ಟೀಕೆಗೆ ಕಣ್ಣೀರು ಹಾಕಿದರು.

ಬಿಗ್ ಬಾಸ್ ಮನೆಯಿಂದ ಹೊರ ಬಂದವರು ತಮ್ಮದೇ ವ್ಯವಹಾರ ಜಗತ್ತಿನ ಮುಳುಗಿದ್ದರು,  ಚಿತ್ರರಂಗದಲ್ಲಿ ಜನ ಸ್ವೀಕರಿಸುವುದು ಕಷ್ಟ ಅನ್ನುವುದು ಅವರಿಗೂ ಅರಿವಾಗಿತ್ತು. ಆದರೆ  ಪತಿಬೇಕು.ಕಾಂ ಚಿತ್ರದ ಆಫರ್ ಬಂದಾಗ ತಡೆಯಲಾಗಲಿಲ್ಲ. ಮತ್ತೊಂದು ಟ್ರೈ ಎಂದು ಒಪ್ಪಿಕೊಂಡರು.

ಆದರೆ ಇದೀಗ ಚಿತ್ರದ ಟ್ರೈಲರ್ ನೋಡಿದರೆ ಶೀತಲ್ ಶೆಟ್ಟಿ ಭರವಸೆಯ ನಟಿಯಾಗಿ ಗೋಚರಿಸಿದ್ದಾರೆ.  ಮುಂದೆ ಬರಲಿರುವ ಹಲವು ಕಥೆಗಳಿಗೆ ಈಕೆ ನಾಯಕಿಯಾದರು ಅಚ್ಚರಿಯಿಲ್ಲ ಅನ್ನುವಂತೆ ನಟಿಸಿದ್ದಾರೆ.

ಕಲರ್ಸ್ ವಾಹಿನಿಯ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಕೆಟ್ಟ ನಿರೂಪಕಿಯಾಗಿದ್ದ ಶೀತಲ್ ಶೆಟ್ಟಿ ಇಷ್ಟು ಚೆನ್ನಾಗಿ ನಟಿಸಬಲ್ಲರೇ ಅನ್ನುವ ಪ್ರಶ್ನೆ ಮೂಡುವಂತೆ ಮಾಡಿದ್ದಾರೆ.

ರಾಧಿಕಾ, ರಾಗಿಣಿ, ರಶ್ಮಿಕಾ ಮಟ್ಟಕ್ಕೆ ಬೆಳೆಯುವುದು ಕಷ್ಟವಾದರೂ ಅವರ ರೇಂಜ್ ಗೆ ಸದ್ದು ಮಾಡುವ ತಾಕತ್ತು ಇದೆ ಅನ್ನುವುದನ್ನು ಪತಿ ಬೇಕು.ಕಾಂ ಟ್ರೈಲರ್ ನಲ್ಲಿ ಶೀತಲ್ ತೋರಿಸಿಕೊಟ್ಟಿದ್ದಾರೆ.

ಮೊದಲಿನಿಂದಲೂ ನನ್ನ ವೈಯುಕ್ತಿಕ ಬದುಕಿಗೆ ಹೆಚ್ಚು ಒತ್ತು ಕೊಡುತ್ತೇನೆ. ನನ್ನೊಟ್ಟಿಗೆ ನಾನು ಕಾಲ ಕಳೆಯುತ್ತೇನೆ ಅನ್ನುವ ಶೀತಲ್ ಶೆಟ್ಟಿ ಕನ್ನಡಿಗರ ಮನಸ್ಸಿಗೆ ನಟಿಯಾಗಿ ಹತ್ತಿರವಾಗುತ್ತಿರುವುದು ಗ್ಯಾರಂಟಿ.

ನಾವೇ ಅವರನ್ನು ಹಾಸ್ಯ ಕಾರ್ಯಕ್ರಮದ ನಿರೂಪಕ್ಕಿ ಸ್ಥಾನದಲ್ಲಿ ನಿಂತಾಗ ಟೀಕಿಸಿದ್ದೇವು. ಈಗ ನಟನೆ ಚೆನ್ನಾಗಿದೆ ಹೊಗಳುತ್ತಿದ್ದೇವೆ.

Pathibeku.com Trailer 

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article