60 ದಾಟಿದ್ರೆ ಅರುಳು ಮರಳು ಅನ್ನುವ ಮಾತಿದೆ. ಆದರೆ ತಮಿಳುನಾಡಿನಲ್ಲಿ 60 ದಾಟಿದ ಮುದುಕನೊಬ್ಬ ಗಾದೆ ಮಾತನ್ನೂ ಮೀರಿ ವರ್ತಿಸಿದ್ದಾನೆ.
66ರ ವೃದ್ಧನೊಬ್ಬ 16ರ ಬಾಲಕಿಗೆ ಲವ್ ಲೆಟರ್ ನೀಡಿದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ವೃದ್ಧ ಚಪಲ ಚನ್ನಿಗರಾಯನನ್ನು ಮೊಹಮ್ಮದ್ ಬಾಹಿರ್ ಬಾಷಾ ಎಂದು ಗುರುತಿಸಲಾಗಿದೆ.
ಮುದುಕ ಕೊಟ್ಟ ಲವ್ ಲೆಟರ್ ಅನ್ನು ಹಾಲಕಿ ಪೋಷಕರಿಗೆ ತೋರಿಸಿದ್ದಾಳೆ. ಗಾಬರಿಗೊಂಡ ಪೋಷಕರು ಮುದಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಆತ ಕ್ಷಮಾಪಣೆ ಕೇಳಿದ್ದ. ಹೀಗಾಗಿ ಪೋಷಕರು ಸುಮ್ಮನಾಗಿದ್ದರು. ಮತ್ತೆ ಒಂದಿಷ್ಟು ದಿನವಾದ ಮೇಲೆ ಮತ್ತೊಂದು ಲವ್ ಲೆಟರ್ ಬರೆದು ಹುಡುಗಿ ಕೈಗಿತ್ತಿದ್ದಾನೆ.
ಆಗ ಪೋಷಕರು ಸುಮ್ಮನಿರಲಿಲ್ಲ, ಮುದುಕನದ್ದು ಅತೀಯಾಯ್ತು ಎಂದು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಇದೀಗ ಮುದುಕನನ್ನು ಜೈಲಿಗೆ ಅಟ್ಟಿದ್ದಾರೆ.
Discussion about this post