ಪ್ರಿಯಕರನ 16 ವರ್ಷದ ಮಗನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದ ಮಹಿಳೆಯೊಬ್ಬಳನ್ನು ಅಮೆರಿಕಾದ ಫ್ಲೋರಿಡಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
ವ್ಯಾಲೆರಿ ಎಸ್ಪೊಸಿಟೊ (37) ಬಂಧನಕ್ಕೆ ಒಳಗಾದ ಮಹಿಳೆ. ಪ್ರಿಯಕರನ ಮಗನ ಜೊತೆ 25 ಬಾರಿ ಸೆಕ್ಸ್ ಮಾಡಿರುವುದಾಗಿ ಮಹಿಳೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ.
ವ್ಯಾಲೆರಿಗೆ ಈಗಾಗಲೇ ಮದುವೆಯಾಗಿದ್ದು, 12 ವರ್ಷದ ಮಗು ಕೂಡ ಇದೆ. ಕಳೆದ 15 ತಿಂಗಳಿನಿಂದ ವ್ಯಾಲೆರಿ ತನ್ನ ಪ್ರಿಯಕರನ 16 ವರ್ಷದ ಮಗನ ಜೊತೆ ಸಂಬಂಧದಲ್ಲಿದ್ದಳು.
2018ರಲ್ಲಿ ಈ ಘಟನೆ ನಡೆದಿದ್ದು, ಪ್ರಿಯಕರನ ಜೊತೆ ಬ್ರೇಕಪ್ ಆಗುವವರೆಗೂ ವ್ಯಾಲೆರಿ ಬಾಲಕನ ಜೊತೆ ಸಂಬಂಧ ಹೊಂದಿದ್ದಳು. ಪ್ರಿಯಕರನ ಜೊತೆ ಬ್ರೇಕಪ್ ನಂತರ ತನ್ನ 12 ವರ್ಷದ ಮಗುವಿನ ಜೊತೆ ಮನೆ ಬಿಟ್ಟು ಹೋಗಿದ್ದಳು.
ಇದಾದ ನಂತ್ರ ವ್ಯಾಲೆರಿಯ ಕೃತ್ಯ ಬೆಳಕಿಗೆ ಬಂದಿತ್ತು.
Discussion about this post