Tuesday, March 9, 2021

ಪತ್ನಿಯ ಸೆಕ್ಸ್ ವಿಡಿಯೋ ಇಟ್ಟುಕೊಂಡು 6 ಲಕ್ಷ ಸಂಪಾದಿಸಿದ ದಂಪತಿ…

Must read

- Advertisement -
- Advertisement -

ಯುವಕನೊಂದಿಗೆ ಪತ್ನಿ ಕಳೆದ ಖಾಸಗಿ ಸಮಯಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಪತಿರಾಯನೊಬ್ಬ ಪತ್ನಿ ಜೊತೆಗೆ ಸೇರಿ ಬ್ಲ್ಯಾಕ್ ಮಾಡಲು ಹೋಗಿ ಜೈಲು ಸೇರಿದ ಘಟನೆ ಛತ್ತಿಸ್‍ಗಡದ ರಾಜನಂದ್‍ಗಾವ್‍ನಲ್ಲಿ ನಡೆದಿದೆ.

ಮಹಿಳೆ ತನ್ನ ಪತಿಯ ಸಹಾಯದಿಂದ ಯುವಕನೊಬ್ಬನನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದಳು. ಬಳಿಕ ಆ ಯುವಕನ ಜೊತೆ ದೈಹಿಕ ಸಂಬಂಧ ಬೆಳೆಸುತ್ತಿದ್ದಳು.

ಇದನ್ನು ಆಕೆಯ ಪತಿ ಗೌಪ್ಯವಾಗಿ ವಿಡಿಯೋ ಮಾಡುತ್ತಿದ್ದ. ವಿಡಿಯೋ ಮಾಡಿದ ಬಳಿಕ ಪತಿ-ಪತ್ನಿ ಸೇರಿ ಆ ಯುವಕನಿಗೆ ಬ್ಲ್ಯಾಕ್‍ಮೇಲ್ ಶುರುವಿಟ್ಟುಕೊಂಡಿದ್ದರು. 10 ಲಕ್ಷ ರೂಪಾಯಿಗಾಗಿ ಬೇಡಿಕೆ ಇಟ್ಟಿದ್ದ ದಂಪತಿ ಯುವಕನಿಂದ 6 ಲಕ್ಷ ಕಿತ್ತುಕೊಂಡಿದ್ದರು. ಮತ್ತೆ ಕಾಸಿಗಾಗಿ ಕೈ ಚಾಚಿದ ವೇಳೆ ಯುವಕ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾನೆ.

ಈ ಹಿನ್ನಲೆಯಲ್ಲಿ ದಂಪತಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿ ಜೈಲಿ ಅಟ್ಟಿದ್ದಾರೆ.

- Advertisement -
- Advertisement -
- Advertisement -

Latest article