Saturday, May 15, 2021
spot_img

ವಿಶ್ವಕ್ಕೆಲ್ಲಾ ಕೊರೋನಾ ಚಿಂತೆಯಾದರೆ, ಸೋಂಕು ಹಂಚಿದ ಚೀನಾದಲ್ಲಿ ಕಾಂಡೋಮ್ ಗಾಗಿ ಮುಗಿ ಬಿದ್ದ ಜನ

Must read

- Advertisement -
- Advertisement -

ಬೆಂಗಳೂರು : ಅಚ್ಚರಿಯಾದರೂ ಇದು ಸತ್ಯ ಸುದ್ದಿ. ಓದಲು ವಿಚಿತ್ರ ಅನ್ನಿಸಿದರೂ ಕಾಂಡೋಮ್ ಮಾರಾಟ ಸಂಸ್ಥೆಗಳ ಖಚಿತ ಪಡಿಸಿರುವ ಸುದ್ದಿ.

ವಿಶ್ವದ ಹಲವು ರಾಷ್ಟ್ರಗಳನ್ನು ಚೈನಾ ವೈರಸ್ ಹಿಂಡಿ ಹಿಪ್ಪೆ ಮಾಡಿದೆ. ವಿವಿಧ ಅಲೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ವೈರಸ್ ಜನ ಜೀವನಕ್ಕೆ ಹಿಂದೆಂದೂ ನೀಡದ ಪೆಟ್ಟು ಕೊಟ್ಟಿದೆ. ಅದರಲ್ಲೂ ಭಾರತದಲ್ಲಿ ಪ್ರಾರಂಭವಾಗಿರುವ ಎರಡನೆ ಅಲೆ ಚೀನಾದದ ಮೊದಲ ಅಲೆಗಿಂತಲೂ ಭೀಕರವಾಗಿದೆ. ಚೀನಾದಲ್ಲಿ ಕೊರೋನಾ ಸೋಂಕು ಪ್ರಾರಂಭವಾದ ವೇಳೆ, ಜನ ನಿಂತಲ್ಲೇ ಕುಸಿಯುತ್ತಿದ್ದರು. ಆಸ್ಪತ್ರೆಗಳಲ್ಲಿ ಜಾಗವಿಲ್ಲದೆ ಪರದಾಡುತ್ತಿದ್ದರು. ಅಂತ್ಯ ಸಂಸ್ಕಾರ ಮಾಡಲು ಅಸಾಧ್ಯ ಅನ್ನುವ ಕಾರಣಕ್ಕೆ ಸಾಮೂಹಿಕವಾಗ ಅಂತ್ಯ ಸಂಸ್ಕಾರ ನಡೆಸಲಾಗಿತ್ತು.

ಇದೀಗ ಭಾರತದಲ್ಲಿ ಆಗುತ್ತಿರುವುದೇನೂ ಅನ್ನುವುದನ್ನು ನೋಡಿದರೆ, ಚೀನಾದ ದೃಶ್ಯಗಳು ಕಣ್ಣ ಮುಂದೆ ಹಾದು ಹೋಗುತ್ತದೆ.

ಆದರೆ ವಿಶ್ವಕ್ಕೆಲ್ಲಾ ವೈರಸ್ ಹಂಚಿದ ಚೀನಾ ನೆಮ್ಮದಿಯಾಗಿದೆ. ಜನರಿಗೆಲ್ಲಾ ಲಸಿಕೆ ಹಾಕಿಸಿರುವ ಚೀನಾ, ಕೊರೋನಾ ಸೋಲಿಸಿದ ಖುಷಿಯಲ್ಲಿದೆ. ಕೇವಲ ಅನ್ನಿಸುವಷ್ಟು ಪ್ರಕರಣಗಳು ಅಲ್ಲಿ ವರದಿಯಾಗುತ್ತಿದೆ. ಈ ನಡುವೆ ಕೊರೋನಾ ಮುಕ್ತವಾಗುತ್ತಿರುವ ಚೀನಾದಲ್ಲಿ ಕಾಂಡೋಮ್ ಮಾರಾಟ ದಾಖಲೆ ಬರೆಯುತ್ತಿದೆ.

ಕೊರೋನಾ ಸೋಂಕಿನ ಭೀತಿ ಕಡಿಮೆಯಾಗುತ್ತಿದ್ದಂತೆ ಚೀನಾದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಅದರಲ್ಲೂ ಲೈಂಗಿಕ ಆಸೆಗಳನ್ನು ಹಿಡಿದಿಟ್ಟುಕೊಂಡಿದ್ದ ಮಂದಿ ಇದೀಗ ಆ ಚಟುವಟಿಕೆಯತ್ತ ಮುಖ ಮಾಡಿದ್ದಾರೆ. ಜೊತೆಗೆ ಕೊರೋನಾ ನಿಯಂತ್ರಣ ಸಲುವಾಗಿ ಹಾಕಲಾಗಿದ್ದ ನಿರ್ಬಂಧಗಳನ್ನು ಕೂಡಾ ಸಡಿಲಿಕೆ ಮಾಡಲಾಗುತ್ತಿದೆ. ಇದರ ಭಾಗವಾಗಿ ಸೆಕ್ಸ್ ಉದ್ಯಮದ ಮೇಲೆ ಹಾಕಲಾಗಿದ್ದ ನಿರ್ಬಂಧವನ್ನೂ ತೆಗೆದು ಹಾಕಲಾಗಿದೆ. ಹೀಗಾಗಿ ಲೀಗಲ್ ಹಾಗೂ ಇಲ್ಲೀಗಲ್ ಚಟುವಟಿಕೆಗಳು ಗರಿ ಗೆದರಿದೆ. ಈ ಕಾರಣದಿಂದಲೇ ಅಲ್ಲಿ ಕಾಂಡೋಮ್ ಮಾರಾಟ ಭರ್ಜರಿಯಾಗಿ ಸಾಗಿದೆ. ಎಲ್ಲಿಯ ತನಕ ಅಂದ್ರೆ ಕಾಂಡೋಮ್ ಉತ್ಪಾದನ ಸಂಸ್ಥೆಗಳು ಹಗಲಿರುಳು ತಮ್ಮ ಫ್ಯಾಕ್ಟರಿಗಳನ್ನು ರನ್ ಮಾಡುತ್ತಿದೆ.

ಕೊರೋನಾ ಸೋಂಕು ಪ್ರಾರಂಭವಾದ ದಿನದಿಂದ ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಅನೇಕ ಕಡ್ಡಾಯ ನಿಯಮಗಳು ಜಾರಿಯಾಗಿತ್ತು ಹೀಗಾಗಿ ಕಾಂಡೋಮ್ ಕಂಪನಿಗಳು ನಷ್ಟದ ಹಾದಿಯಲ್ಲಿತ್ತು, ಇದೀಗ ಉದ್ಯಮ ಚೇತರಿಕೆಯ ಹಳಿಯೇರಿದೆ.

ಈ ಸುದ್ದಿಯನ್ನು ರೆಕ್ಕಿಟ್ ಬೆನ್ ಕಿಸರ್ ಸಂಸ್ಥೆ ದೃಢಪಡಿಸಿದ್ದು, ನೆಲ ಕಚ್ಚಿದ್ದ ನಮ್ಮ ಉದ್ಯಮಕ್ಕೆ ಇದೀಗ ಅಶ್ವವೇಗ ಸಿಕ್ಕಿದೆ. 2021ರ ತ್ರೈ ಮಾಸಿಕದಲ್ಲಿ ನಮ್ಮ ವ್ಯವಹಾರ ದ್ವಿಗುಣಗೊಂಡಿದೆ  ಅಂದಿದ್ದಾರೆ.

- Advertisement -
- Advertisement -spot_img
- Advertisement -spot_img

Latest article