Monday, April 19, 2021

ಎತ್ತ ಸಾಗುತ್ತಿದೆ ಯುವ ಜನಾಂಗ… ಬಸ್ ನಿಲ್ದಾಣದಲ್ಲೇ ತುಟಿಗೆ ತುಟಿಗೆ ಒತ್ತಿದ ಜೋಡಿ… ಚುಂಬನದ ದೃಶ್ಯ ಫುಲ್ ವೈರಲ್

Must read

- Advertisement -
- Advertisement -

ಮಂಡ್ಯ : ಯುವ ಜನಾಂಗ ಹಾದಿ ತಪ್ಪುತ್ತಿದೆ ಅನ್ನುವುದಕ್ಕೆ ಇತ್ತೀಚಿನ ದಿನಗಳಲ್ಲಿ ಸಾವಿರ ಸಾವಿರ ಸಾಕ್ಷಿಗಳು ಸಿಗುತ್ತಿದೆ.

ನಿಜಕ್ಕೂ ಈ ಸುದ್ದಿಗಳನ್ನು ನೋಡಿದರೆ ನಾಳಿನ ಉತ್ತಮ ಸಮಾಜದ ಬಗ್ಗೆ ಆತಂಕವಾಗುತ್ತಿದೆ.

ನಾಚಿಕೆ, ಲಜ್ಜೆ, ಜವಾಬ್ದಾರಿ ಅನ್ನುವುದನ್ನು ಯುವಜನತೆ ಮರೆಯುತ್ತಿರುವುದು ಮುಂದಿನ ಅಪಾಯದ ಮುನ್ಸೂಚನೆ ಅನ್ನುವುದರಲ್ಲಿ ಎರಡು ಮಾತಿಲ್ಲ.

ಹೀಗೆ ಮಂಡ್ಯದ ಕೆ.ಆರ್. ಪೇಟೆಯಲ್ಲೂ ಹೀಗೆ ಆಗಿದೆ.

ಕೆ.ಆರ್.ಪೇಟೆ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು. ಯುವ ಜೋಡಿಯೊಂದು ಬಸ್​ ನಿಲ್ದಾಣಕ್ಕೆ ಬಂದು ಬಸ್ ಗಾಗಿ ಕಾದು ನಿಂತಿತ್ತು. ಅದೇನಾಯ್ತೋ ಗೊತ್ತಿಲ್ಲ.

ಅದೇನು ತಿಂದು ಬಂದಿದ್ರೋ ಗೊತ್ತಿಲ್ಲ. ಬಸ್​ ಹಿಂಭಾಗಕ್ಕೆ ತೆರಳಿದ ಯುವಕ ಮತ್ತು ಯುವತಿ ಅದ್ಯಾವ ಇಂಗ್ಲೀಷ್ ಫಿಲ್ಮಂಗೂ ಕಡಿಮೆ ಇಲ್ಲದಂತೆ ಚುಂಬಿಸಲಾರಂಭಿಸಿದ್ದಾರೆ.

ಸುತ್ತಮುತ್ತ ಜನ ಓಡಾಡುತ್ತಿದ್ದಾರೆ, ನಮ್ಮನ್ನೇ ಗಮನಿಸುತ್ತಾರೆ ಅನ್ನುವ ಪರಿವೆ ಇಲ್ಲದೆ ತುಟಿಗೆ ತುಟಿ ಒತ್ತಿದ್ದಾರೆ. ಜನ ಗಮನಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಿದರೆ, ಅದ್ಯಾವ ಪ್ರಾಣಿಗಳಾದರೂ ಓಡಿ ಹೋಗುತ್ತಿತ್ತು.

ಆದರೆ ಈ ಜೋಡಿ ನೋಡಿದವರ ಕಣ್ಣು ತಂಪಾಗಲಿ ಎಂದು ತಮ್ಮ ಕಾರ್ಯವನ್ನು ನಿಷ್ಠೆಯಿಂದ ಮುಂದುವರಿಸಿದ್ದಾರೆ,

ಇದೀಗ ಈ ದೃಶ್ಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೋಡಿಯ ವಿರುದ್ಧ ಕ್ರಮ ಕೈಗೊಳ್ಳಿ ಅನ್ನುವುದು ಕೆಲವರ ಆಗ್ರಹವಾದರೆ ಮತ್ತೆ ಕೆಲವರು ಮದುವೆ ವಯಸ್ಸಿಗೆ ಬಂದವರಾಗಿದ್ದರೆ ಮನೆಯವರನ್ನು ಕರೆಸಿ ಮದುವೆ ಮಾಡಿಸಿ ಮುಂದಾಗಬಹುದಾದ ಅನಾಹುತವನ್ನಾದರೂ ತಡೆಯಿರಿ ಎಂದು ಒತ್ತಾಯಿಸಿದ್ದಾರೆ.

- Advertisement -
- Advertisement -
- Advertisement -

Latest article