ಬಾಲಿವುಡ್ ನಟ ಹಾಗೂ ಕೆಜಿಎಫ್-2 ಚಿತ್ರದ ವಿಲನ್ ಮುನ್ನಾಬಾಯಿ ಅಲಿಯಾಸ್ ಸಂಜಯ್ ದತ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 62 ನೇ ವಸಂತಕ್ಕೆ ಕಾಲಿಟ್ಟಿರೋ ಸಂಜಯ್ ದತ್ ಗೆ ಇದೀಗ ಕೆಜಿಎಫ್ ಚಿತ್ರತಂಡ ಮತ್ತೊಂದು ಸುದ್ದಿಯನ್ನು ನೀಡಿದೆ.
ಗುರುವಾರ 62ನೇ ವಸಂತಕ್ಕೆ ಕಾಲಿಟ್ಟ ಸಂಜಯ್ ದತ್ ಅವರಿಗೆ ಸರ್ಪ್ರೈಜ್ ಉಡುಗೊರೆ ನೀಡಿರುವ ಚಿತ್ರ ತಂಡKGF Chapter 2 ನಲ್ಲಿ ಸಂಜಯ್ ದತ್ ಅವರ ಅಧೀರನ ಪಾತ್ರದ ಪೋಸ್ಟರ್ ರಿಲೀಸ್ ಮಾಡಿದೆ.
ಇತ್ತೀಚಿಗಷ್ಟೇ ಕ್ಯಾನ್ಸರ್ ನಿಂದ ಚೇತರಿಸಿಕೊಂಡ ಸಂಜಯ್ ದತ್ ಕೆಜಿಎಫ್-2 ನಲ್ಲಿ ಅಧೀರ್ ಪಾತ್ರದ ಮೂಲಕ ಕುತೂಹಲ ಮೂಡಿಸಿದ್ದರು. ಕ್ರೂರತೆಯೇ ಮೈವೆತ್ತಂತಿರುವ ಅಧೀರ್ ಪಾತ್ರದ ಲುಕ್ ಕೆಜಿಎಫ್-2 ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು.
ಇನ್ನು ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಟ್ವೀಟರ್ ಖಾತೆಯಲ್ಲಿ ‘ಅಧೀರ’ನ ಪೋಸ್ಟರ್ ಹಂಚಿಕೊಂಡಿದ್ದು. ಯುದ್ಧ ಇರುವುದೇ ಪ್ರಗತಿಗಾಗಿ. ನನ್ನ ಈ ಮಾತನ್ನು ರಣಹದ್ದುಗಳು ಕೂಡ ಒಪ್ಪಿಕೊಳ್ಳುತ್ತವೆ’ ಎಂಬ ಡೈಲಾಗ್ ಜೊತೆಗೆಜನ್ಮದಿನದ ಶುಭಾಶಯಗಳು ಸಂಜಯ್ ದತ್ ಸರ್’ ಎಂದು ಬರೆದುಕೊಂಡಿದ್ದಾರೆ.
Discussion about this post