ಬೆಂಗಳೂರು : ಕೆಲ ತಿಂಗಳ ಹಿಂದೆ ಮಕ್ಕಳು ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ ಸುದ್ದಿಯಾಗಿದ್ದ ಹಿರಿಯ ನಟ ಅಶ್ವತ್ಥನಾರಾಯಣ ಇಹಲೋಕ ತ್ಯಜಿಸಿದ್ದಾರೆ. 82ರ ಹರೆಯದ ಅಶ್ವತ್ಥ ನಾರಾಯಣ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರು ಮೂವರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.
ತಮ್ಮ 11ನೇ ವಯಸ್ಸಿಗೆ ರಂಗಭೂಮಿಗೆ ಬಂದ ಅಶ್ವತ್ಥನಾರಾಯಣ, ವಾಲ್ಮೀಕಿ ಚಿತ್ರದ ಮೂಲಕ ಚಂದನವನಕ್ಕೆ ಬಂದಿದ್ದರು. ಬಳಿಕ ಚಂದವಳ್ಳಿ ತೋಟದ ಮೂಲಕ ಚಂದನವನದಲ್ಲಿ ಜನಪ್ರಿಯತೆ ಪಡೆದಿದ್ದರು. ಇದಾದ ಬಳಿಕ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹಿರಿಮೆ ಇವರದ್ದು.
Discussion about this post