ದೊಡ್ಮನೆಯ ಹುಡುಗರು ಒಂದೇ ಸಿನಿಮಾದಲ್ಲಿ ನಟಿಸಬೇಕು ಅನ್ನುವುದು ಅಭಿಮಾನಿಗಳ ಕನಸಾಗಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಈ ನಡುವೆ ಪುನೀತ್ ರಾಜ್ ಕುಮಾರ್ ನಟಿಸಿದ ಜೇಮ್ಸ್ ಸಿನಿಮಾ ಅರ್ಧದಲ್ಲೇ ನಿಂತಿದೆ. ಎಲ್ಲವೂ ಅಂದುಕೊಂಡ ಹಾಗೇ ನಡೆದಿರುತ್ತಿದ್ರೆ ಇಷ್ಟು ಹೊತ್ತಿಗೆ ಸಿನಿಮಾ ಎಡಿಟಿಂಗ್ ಟೇಬಲ್ ಮೇಲೆ ಇರಬೇಕಾಗಿತ್ತು. ಆದರೆ ವಿಧಿಯಾಟ ಬೇರೆಯಾಗಿತ್ತು.
ಈ ನಡುವೆ ‘ಜೇಮ್ಸ್ ಸಿನಿಮಾವನ್ನು ಮುಗಿಸುವ ನಿಟ್ಟಿನಲ್ಲಿ ಚಿತ್ರತಂಡ ಬದಲಿ ಐಡಿಯಾಗಳನ್ನು ಮಾಡಿದ್ದು, ಈಗಿನ ಮಾಹಿತಿ ಪ್ರಕಾರ ಪುನೀತ್ ರಾಜ್ಕುಮಾರ್ ಅವರ ದೃಶ್ಯಗಳಿಗೆ ಶಿವಣ್ಣ ಧ್ವನಿ ನೀಡುವ ಸಾಧ್ಯತೆ ಇದೆ. ಇನ್ನು ಅಣ್ಣಾವ್ರ ಮಕ್ಕಳನ್ನು ಈ ಸಿನಿಮಾದಲ್ಲಿ ಒಟ್ಟಿಗೆ ತೋರಿಸಲು ಜೇಮ್ಸ್ ನಿರ್ದೇಶಕರು ನಿರ್ಧರಿಸಿದ್ದಾರೆ.
ಹೀಗಾಗಿ ಜನವರಿ.21ರಿಂದ ‘ಜೇಮ್ಸ್’ ಸಿನಿಮಾದ ಶೂಟಿಂಗ್ನಲ್ಲಿ ರಾಘವೇಂದ್ರ ರಾಜ್ಕುಮಾರ್ ಹಾಗೂ ಶಿವರಾಜ್ಕುಮಾರ್ ಭಾಗಿಯಾಗಲಿದ್ದಾರೆ. ಈ ಮೂವರೂ ಸಿನಿಮಾದ ಯಾವುದಾದರೊಂದು ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಅಥವಾ ಹಾಡಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆಯೇ ಅನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ದಿನವೇ (ಮಾ.17) ‘ಜೇಮ್ಸ್’ ರಿಲೀಸ್ ಆಗುವ ಸಾಧ್ಯತೆ ಇದೆ
Discussion about this post