Thursday, January 21, 2021

ಮುರಿದು ಬಿತ್ತಾ ರಶ್ಮಿಕಾ – ರಕ್ಷಿತ್​ ಶೆಟ್ಟಿ ಎಂಗೇಜ್​ಮೆಂಟ್​…..

Must read

ಚಿತ್ರರಂಗದ ಸೆಲೆಬ್ರೆಟಿಗಳ ಪೈಕಿ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕುಂತರು ಸುದ್ದಿ ನಿಂತರು ಸುದ್ದಿ ಅನ್ನುವಂತಾಗಿದೆ ಅವರ ಕಥೆ. ಇದಕ್ಕೆ ಕಾರಣ ವಿಜಯ ದೇವರಕೊಂಡ ಜೊತೆಗಿನ ಗೀತಾ ಗೋವಿಂದ ತೆಲುಗು ಚಿತ್ರ.

ಚಿತ್ರದ ಪೋಸ್ಟರ್ ರಿಲೀಸ್ ಆದ ಬೆನ್ನಲ್ಲೇ ಕಾಲು ಎಳೆಯಲಾರಂಭಿಸಿದ ಅಭಿಮಾನಿಗಳು, ವ್ಯಾಪ್ತಿ ಮೀರಿ ಟ್ರೋಲ್ ಮಾಡಿದ್ದರು. ರಶ್ಮಿಕಾ ಖಾಸಗಿ ಬದುಕಿನ ಬಗ್ಗೆ ಮಾತನಾಡಿ ಕಿರಿ ಕಿರಿ ಉಂಟು ಮಾಡಿದ್ದರು.

ಇದೀಗ ರಶ್ಮಿಕಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಾಗಿರುವುದು ರಕ್ಷಿತ್ ಜೊತೆಗಿನ ಮದುವೆ ವಿಚಾರದಲ್ಲಿ.

ಇದನ್ನೂ ನೋಡಿ : ಹೇಗಿತ್ತು ರಶ್ಮಿಕಾ – ರಕ್ಷಿತ್ ಎಂಗೇಜ್ ಮೆಂಟ್

ಕೆಲವೊಂದು ವೆಬ್ ಸೈಟ್ ಗಳ ಪ್ರಕಾರ ರಶ್ಮಿಕಾ ತೆಲುಗಿನ ತಮ್ಮ ಕೆರಿಯರ್ ಮುಂದುವರಿಸಲು ಬಯಸಿದ್ದಾರೆ, ಹೀಗಾಗಿ ಮದುವೆಯಾಗಲು ಅವರು ಇಚ್ಚಿಸುತ್ತಿಲ್ಲವಂತೆ. ಮತ್ತೊಂದು ವೆಬ್ ಸೈಟ್ ಅವರು ಮದುವೆಯೇ ಆಗುತ್ತಿಲ್ಲ ಎಂದು ಬರೆದಿದೆಯಂತೆ.

ಆದರೆ ಇಂಡಿಯಾ ಟುಡೇ ವರದಿ ಪ್ರಕಾರ ಇವೆಲ್ಲಾ ಫೇಕ್ ಸುದ್ದಿ. ರಶ್ಮಿಕಾ ಮ್ಯಾನೇಜರ್ ಅವರನ್ನು ಮಾತನಾಡಿಸಿರುವ ಆನ್ ಲೈನ್ ನ್ಯೂಸ್ ಪೋರ್ಟಲ್ ಸುಳ್ಳು ಅನ್ನುವುದಕ್ಕೆ ಸಾಕ್ಷಿ ಕೊಟ್ಟಿದೆ.

Rashmika Mandanna interviewed Rakshith Shetty

ರಶ್ಮಿಕಾ ಮ್ಯಾನೇಜರ್ ಪ್ರಕಾರ “ ಕೆಲ ದಿನಗಳ ಹಿಂದಷ್ಟೇ ಅವರಿಬ್ಬರು ಜೊತೆಯಾಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾರೆ. ಅವರಿಬ್ಬರು ಬೇರೆಯಾಗುತ್ತಿದ್ದಾರೆ ಅನ್ನುವುದರಲ್ಲಿ ಯಾವುದೇ ಹುರುಳಿಲ್ಲ. ನಿಗದಿಯಾಗಿರು ಪ್ರಕಾರ ರಕ್ಷಿತ್ ಶೆಟ್ಟಿಯವರ ಹೊಸ ಚಿತ್ರ ‘ಕಥೆಯೊಂದು ಶುರುವಾಗಿದೆ’ಯ ಪ್ರಿಮಿಯರ್ ಶೋ ದಲ್ಲೂ ಕೂಡಾ ಅವರಿಬ್ಬರು ಪಾಲ್ಗೊಳ್ಳಲಿದ್ದಾರೆ”

ಮೂಲಗಳ ಪ್ರಕಾರ ತೆಲುಗು ವೆಬ್ ಸೈಟ್ ಗಳು ಬ್ರೇಕ್ ಅಪ್ ಸುದ್ದಿಯನ್ನು ಕ್ರಿಯೇಟ್ ಮಾಡಿದೆ. ಆದರೆ ಕರ್ನಾಟಕದಲ್ಲಿ ಅವರಿಬ್ಬರೂ ಜೊತೆಯಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರಿಗೆ ಗೊತ್ತಿಲ್ಲ ಅನ್ಸುತ್ತೆ ಪಾಪ.

Rakshith Shetty And Rashmika Engagement Exclusive photo

ಎನಿವೇ ರಕ್ಷಿತ್ ರಶ್ಮಿಕಾ ಜೊತೆಯಾಗಿದ್ದಾರೆ. ಜೊತೆಯಾಗಿಯೇ ಇರುತ್ತಾರೆ ಅನ್ನುವುದರಲ್ಲಿ ಎರಡು ಮಾತಿಲ್ಲ. ನಿಶ್ಚಿತಾರ್ಥ ಸಂದರ್ಭದಲ್ಲೇ ರಕ್ಷಿತ್ ಸ್ಪಷ್ಟ ಪಡಿಸಿದ್ದಾರೆ. ನಮ್ಮ ಮದುವೆಗೆ ಸಾಕಷ್ಟು ಸಮಯವಿದೆ ಎಂದು. ಮತ್ಯಾಕೆ ಅರ್ಜೆಂಟು.

rakshit shetty – Rashmika mandanna fitness challenge

ಅವರೇನು ನಮ್ಮನ್ನು ಊಟಕ್ಕೆ ಕರೆಯತ್ತಾರ, ಅಥವಾ ಹೋಗಿ ಅಕ್ಷತೆ ಕಾಳು ಹಾಕಿ ಬರುವುದಕ್ಕೆ ಅವಕಾಶ ಕೊಡ್ತಾರ ಖಂಡಿತಾ ಇಲ್ಲ.ಮತ್ಯಾಕೆ ಅವರ ಮದುವೆ ಉಸಾಬರಿ.ಅವರ ಖಾಸಗಿ ಬದುಕಿನ ಬಗ್ಗೆ ಮಾತನಾಡುವ ಹಕ್ಕನ್ನು ನಮಗೆ ಕೊಟ್ಟವರಾರು..?

- Advertisement -
- Advertisement -

Latest article