ರಾಹುಲ್ ಗಾಂಧಿಯನ್ನು ( rahul Gandhi ) ಸೀರಿಯಸ್ ನಾಯಕ ಎಂದು ಬಹುತೇಕರು ಪರಿಗಣಿಸಿಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಬಲಿಷ್ಟಗೊಳಿಸಲು ಅವಕಾಶಗಳು ಮುಕ್ತವಾಗಿದೆ. ಆದರೆ ಅದನ್ನು ಅವರು ಬಳಸಿಕೊಳ್ಳುತ್ತಿಲ್ಲ
ನವದೆಹಲಿ : ಕಾಂಗ್ರೆಸ್ ಪಕ್ಷದ ಅಧ್ಯಕೀಯ ಚುನಾವಣೆ, ಭಾರತ ಜೋಡೋ ಯಾತ್ರೆಯ ಪೂರ್ವಭಾವಿ ಸಭೆ ಗುರುವಾರ ನಿಗದಿಯಾಗಿದ್ದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ( rahul Gandhi ) ಇವೆಲ್ಲವನ್ನೂ ಪಕ್ಕಕ್ಕಿಟ್ಟು5 ದಿನಗಳ ಪ್ರವಾಸಕ್ಕಾಗಿ ಯುರೋಪ್ ಗೆ ಹಾರಿದ್ದಾರೆ.
ಒಂದು ಕಡೆ ಗೋವಾದಲ್ಲಿ ಕಾಂಗ್ರೆಸ್ ಪಕ್ಷ ಸಂಕಷ್ಟಲ್ಲಿದೆ. ಅಲ್ಲಿ ಕೈ ಶಾಸಕರನ್ನು ಸೆಳೆಯಲು ಬಿಜೆಪಿ ಸರ್ಕಸ್ ನಡೆಸುತ್ತಿದೆ. ಗುರುವಾರ ಅಂದರೆ ನಾಳೆ ಪಕ್ಷದ ಅಧ್ಯಕ್ಷೀಯ ಚುನಾವಣೆ ಮತ್ತು ಭಾರತ್ ಜೋಡೋ ಯಾತ್ರೆ ಕುರಿತಂತೆ ಮಹತ್ವದ ಸಭೆಯನ್ನು ಕರೆಯಲಾಗಿದೆ ಹಾಗಿದ್ದರೂ ರಾಹುಲ್ ಗಾಂಧಿ ವಿದೇಶಕ್ಕೆ ಹಾರಿರುವುದು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : poor quality tea to CM : ಮುಖ್ಯಮಂತ್ರಿಗೆ ತಣ್ಣಗಾದ ಟೀ ಕೊಟ್ಟ ಅಧಿಕಾರಿಗೆ ಶೋಕಾಸ್ ನೋಟಿಸ್
ಪಕ್ಷದ ಕಾರ್ಯಕ್ಕಿಂತ ಅಗತ್ಯವಾದ ಮತ್ಯಾವ ಕಾರ್ಯಕ್ಕಾಗಿ ರಾಹುಲ್ ಗಾಂಧಿ ವಿದೇಶಕ್ಕೆ ಹಾರಿದರು ಅನ್ನುವುದು ಯಕ್ಷ ಪ್ರಶ್ನೆಯಾಗಿದೆ.
Discussion about this post