ನವದೆಹಲಿ : 2024ರ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಪಣತೊಟ್ಟಿವೆ. ಆದರೆ ಈಗಿರುವ ಸ್ಥಿತಿಯಲ್ಲಿ ಅದು ಸುಲಭದ ಮಾತಲ್ಲ. ಮೋದಿ ಸರ್ಕಾರದ ವಿರುದ್ಧ ಎದ್ದಿರುವ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಪ್ರತಿಪಕ್ಷಗಳು ವಿಫಲವಾಗಿರುವುದೇ ಇದಕ್ಕೆ ಕಾರಣ.
ಈ ನಡುವೆ 2024ರ ಲೋಕಸಭೆ ಚುನಾವಣೆಗೆ ಸಿದ್ದತೆ ನಡೆಸಿರುವ ಬಿಜೆಪಿ ಮತ್ತೆ ಬಹುಮತ ಪಡೆಯುವ ನಿರೀಕ್ಷೆಯಲ್ಲಿದೆ. ಮೋದಿ ವರ್ಚಸ್ಸು ಬಿಟ್ಟರೆ ಬಿಜೆಪಿ ಗೆಲ್ಲುವ ಬೇರಾವುದೇ ಅಸ್ತ್ರಗಳಿಲ್ಲ. ಹೀಗಾಗಿ ಮತ್ತೆ ನರೇಂದ್ರ ಮೋದಿಯವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಬಿಜೆಪಿ ಹಾಗೂ ಸಂಘ ಪರಿವಾರ ನಿರ್ಧರಿಸಿದೆ.
ಈ ಬಗ್ಗೆ ಗುಜರಾತ್ನ ಗಾಂಧಿನಗರದ ಪಾನ್ಸಾರ್ನಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಮುಂದಿನ ಅವಧಿಗೂ ನರೇಂದ್ರ ಮೋದಿಯವರೇ ಪ್ರಧಾನಮಂತ್ರಿಯಾಗಲಿದ್ದಾರೆ ಅಂದಿದ್ದಾರೆ. ಮೋದಿಯವರನ್ನು ಬಿಟ್ಟು ಇನ್ಯಾವ ನಾಯಕನೂ 20 ವರ್ಷಕ್ಕಿಂತ ಹೆಚ್ಚು ಕಾಲ ಸಾಂವಿಧಾನಿಕ ಹುದ್ದೆಯಲ್ಲಿ ಇರಲಿಲ್ಲಲ್ಲ.
ಅಕ್ಟೋಬರ್ 7ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಸೇವೆಗೆ ಕಾಲಿಟ್ಟು 20 ವರ್ಷವಾಯಿತು. ಜಗತ್ತಿನ ಇನ್ಯಾವ ನಾಯಕನೂ ಹೀಗೆ 20 ವರ್ಷಗಳ ಕಾಲ ಬ್ರೇಕ್ ಇಲ್ಲದೆ, ನಿರಂತರವಾಗಿ ಜನ ಸೇವೆ ಮಾಡಿದ ಉದಾಹರಣೆಯಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹೀಗೆ ನಿರಂತರವಾಗಿ ಜನ ಮೆಚ್ಚುಗೆಗೆ ಪಾತ್ರವಾಗುವುದು ಸುಲಭದ ಮಾತಲ್ಲ. ಇಂತಹುದರಲ್ಲಿ ಮೋದಿಯವರನ್ನು ಜನ ಆಯ್ಕೆ ಮಾಡುತ್ತಿದ್ದಾರೆ ಅಂದ್ರೆ ಅವರು ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಎಂದೇ ಅರ್ಥ ಎಂದು ಶಾ ಹೇಳಿದ್ದಾರೆ.
Prime minister Modi will win in 2024 says Amit Shah
Discussion about this post