Tuesday, March 9, 2021

ವೈವಾಹಿಕ ಜೀವನ –No Comments : ಮೌನಕ್ಕೆ ಶರಣಾದ ಪ್ರೇಮ

Must read

- Advertisement -
- Advertisement -

ಝೀ ಕನ್ನಡ ವಾಹಿನಿಯಲ್ಲಿ ಶನಿವಾರ ಪ್ರಸಾರವಾದ ವೀಕೆಂಡ್ ವಿದ್ ರಮೇಶ್ ಕಾರ್ಯಕ್ರಮದಲ್ಲಿ ಪ್ರೇಮ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದ ಪ್ರೋಮೋ ನೋಡಿದಾಗ ಸಾಕಷ್ಟು ಕುತೂಹಲವಿತ್ತು.

ಪ್ರೇಮ ತಮ್ಮ ವೈವಾಹಿಕ ಬದುಕಿನ ದುರಂತ ಕಥೆಯೊಂದನ್ನು ತೆರೆದಿಡುತ್ತಾರೆ. ಮದುವೆ, ಗಂಡ ಕುರಿತಂತೆ ವಿವರಿಸುತ್ತಾರೆ ಅನ್ನುವ ನಿರೀಕ್ಷೆ ಇತ್ತು. ಆದರೆ ಪ್ರೇಮ ಅವರು ಅದ್ಯಾವುದನ್ನು ವಿವರಿಸಲಿಲ್ಲ. ಎಲ್ಲವನ್ನೂ ಕಾಲನ ಕೈಗೆ ಕೊಟ್ಟು ಸುಮ್ಮನಾದರು.

ರಮೇಶ್ ಅರವಿಂದ್ ಅವರು ಪ್ರೇಮ ಅವರ ಮದುವೆ ಜೀವನ ಬಗ್ಗೆ ಪ್ರಶ್ನಿಸಿ. ಈಗ ಹೇಗಿದೆ ಎಂದು ಪ್ರಶ್ನಿಸಿದ್ರೆ, ದೊಡ್ಡ ನಿಟ್ಟುಸಿರಿನೊಂದಿಗೆ ಮೌನಕ್ಕೆ ಶರಣಾದ ಪ್ರೇಮ, no comments ಎಂದರು.

ರಮೇಶ್ ಅರವಿಂದ್ ಪ್ರೇಮ ಅವರ ನಿರ್ಧಾರವನ್ನು ಅಭಿನಂದಿಸಿದರು, ನಿಮ್ಮ ನಿರ್ಧಾರ ಎಂದು ಮುಂದಕ್ಕೆ ಸಾಗಿದರು.

ಆದರೆ ಪ್ರೇಮ ಕಾರ್ಯಕ್ರಮದ ಅಂತ್ಯ ಭಾಗದಲ್ಲಿ ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ನನ್ನ ಅಭಿಮಾನಿಗಳಿಗೆ ನಾನು ಎಂದಿಗೂ ಮೋಸ ಮಾಡೋದಿಲ್ಲ. ಅವರ ಮುಂದೆ ಸತ್ಯವನ್ನು ಖಂಡಿತಾ ಹೇಳುತ್ತೇನೆ ಎಂದರು.

ಹಾಗಾದರೆ ಪ್ರೇಮ ಬದುಕಿನಲ್ಲಿ ಏನು ನಡೆಯಿತು. ಗೊತ್ತಿಲ್ಲ. ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿದ್ದು ಸತ್ಯ ಅನ್ನುವುದನ್ನು ನಂಬುವ ಕಾಲ ಇದಲ್ಲ. ಹೀಗಾಗಿ ಕಾಲ ಬರಲಿ ಎಲ್ಲವನ್ನೂ ಹೇಳುತ್ತೇನೆ ಅಂದಿದ್ದಾರೆ ಪ್ರೇಮ.

ಅವರ ವೈಯುಕ್ತಿಕ ಬದುಕನ್ನು ಪ್ರಶ್ನಿಸುವ ಅಧಿಕಾರ ನಮಗಿಲ್ಲ. ಹೀಗಾಗಿ ಪ್ರೇಮ ಅವರೇ ಹೇಳಿದಂತೆ ಕಾಲ ಬರಲಿ, ನಾವು ಕಾಯೋಣ.

- Advertisement -
- Advertisement -
- Advertisement -

Latest article