Praveen nettar NIA ರಾಜ್ಯ ಪೊಲೀಸರ ತನಿಖೆ ಒಂದು ಹಂತಕ್ಕೆ ತಲುಪಿದ್ದು, ಇದೀಗ NIA ಮುಂದಿನ ತನಿಖೆ ಪ್ರಾರಂಭಿಸಿದೆ
ಪುತ್ತೂರು : ಜುಲೈ 26 ರಂದು ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ( Praveen nettar NIA) ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ಚುರುಕುಗೊಳಿಸಿದೆ. ಹತ್ಯೆಯ ಕಾರಣದ ಬೆನ್ನು ಹತ್ತಿರುವ ಅಧಿಕಾರಿಗಳು, ಕೊಲೆಯ ಹಿಂದಿರುವ ಕಾಣದ ಕೈಗಳ ಶೋಧಕ್ಕೆ ಇಳಿದಿದ್ದಾರೆ. ಕೆಲ ಸಂಘಟನೆಗಳು ಈ ಕೃತ್ಯ ಹಿಂದೆ ಅನ್ನುವ ಗುಮಾನಿ ಇದ್ದು ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಈ ನಡುವೆ ನೆಟ್ಟಾರು ಹತ್ಯೆ ಪ್ರಕರಣ ತನಿಖೆಯನ್ನು ಶೀಘ್ರ ಮುಗಿಸುವ ನಿಟ್ಟಿನಲ್ಲಿ ರಾಜ್ಯ ಪೊಲೀಸರ ಸಹಕಾರ ಕೇಳಿದೆ. ಈ ಹಿಂದೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಕೆಲಸ ನಿರ್ವಹಿಸಿದ್ದ ಕೆಲ ಅಧಿಕಾರಿಗಳನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಕಳುಹಿಸಿಕೊಡುವಂತೆ ಮನವಿ ಮಾಡಿದೆ.
ಇದನ್ನೂ ಓದಿ : Kateel Yakshagana : ಕಟೀಲು ಮೇಳದಿಂದ ಇನ್ನು ಮುಂದೆ ಕಾಲಮಿತಿ ಯಕ್ಷಗಾನ
ಈ ಹಿನ್ನಲೆಯಲ್ಲಿ ಆಡಳಿತ ವಿಭಾಗದ ಎಡಿಜಿಪಿ ಡಾ.ಎಂ.ಎ. ಸಲೀಂ ಅವರು 7 ಸಿಬ್ಬಂದಿಗಳನ್ನು ಒಂದು ತಿಂಗಳ ಅವಧಿಗೆ ಓಒಡಿ ಮೂಲಕ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪುತ್ತೂರು ರೂರಲ್ ಠಾಣೆಯ ಪಿಎಸ್ಐ ಉದಯರವಿ, ಕಾರ್ಕಳ ಗ್ರಾಮಾಂತರ ಠಾಣಾ ಪಿಎಸ್ಐ ಎಂ.ಎಸ್. ಪ್ರಸನ್ನ, ವೇಣೂರು ಠಾಣೆಯ ಹೆಡ್ ಕಾನ್ಸ್ಟೇಬಲ್ ಪ್ರವೀಣ್ ಎಮ್. ಪುತ್ತೂರು ಗ್ರಾಮಾಂತರ ಠಾಣೆಯ ಹೆಡ್ ಕಾನ್ಸ್ಟೇಬಲ್ ಗಳಾದ ಅದ್ರಾಮ ಮತ್ತು ಪ್ರವೀಣ್ ರೈ, ವಿಟ್ಲ ಪೊಲೀಸ್ ಠಾಣೆಯ ಉದಯ ರೈ, ಬಂಟ್ವಾಳ ಸಂಚಾರಿ ಠಾಣೆಯ ವಿವೇಕ್ ರೈ ಹಾಗೂ ಕುಮಾರ್, ಸುಳ್ಯ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಅನಿಲ್ ಅವರು ಈ ಆದೇಶದಂತೆ NIA ತಂಡ ಸೇರಿಕೊಳ್ಳಲಿದ್ದಾರೆ.
Discussion about this post