ನಿರೀಕ್ಷೆಯಂತೆ ಬಿಜೆಪಿ ( BJP Ticket) ಹಳೆಯ ಮುಖಗಳನ್ನು ಸೈಡಿಗಿಟ್ಟಿದೆ. ಅದರಲ್ಲೂ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾದವರಿಗೆ ಟಿಕೆಟ್ ತಪ್ಪಿದೆ.
ಬೆಂಗಳೂರು : ಕರ್ನಾಟಕ ವಿಧಾನಸಭೆಯ ಚುನಾವಣೆಗಾಗಿ ( karnataka assembly election 2023) ಬಿಜೆಪಿ ಇಂದು ನಾಳೆ ಅಭ್ಯರ್ಥಿಗಳ ಹೆಸರು ಪ್ರಕಟಿಸುತ್ತಿದ್ದಂತೆ ಎಂದು ನಿರೀಕ್ಷಿಸಲಾಗುತ್ತಿತ್ತು. ಅದರಂತೆ ಬಿಜೆಪಿ ( BJP Ticket) ಮಂಗಳವಾರ ರಾತ್ರಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಈ ಬಾರಿ ಹಾಲಿ ಶಾಸಕರ ಪೈಕಿ ಅನೇಕರಿಗೆ ಟಿಕೆಟ್ ತಪ್ಪಲಿದೆ ( karnataka assembly election 2023) ಅನ್ನುವ ಸುಳಿವು ಸಿಕ್ಕಿತ್ತು, ಹೀಗಾಗಿ ಯಾರು ಈ ಬಾರಿ ಟಿಕೆಟ್ ಕಳೆದುಕೊಳ್ತಾರೆ ಅನ್ನುವುದು ಅನೇಕರ ಕುತೂಹಲವಾಗಿತ್ತು. ಹೀಗಾಗಿಯೇ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಟ್ರೆಂಡ್ ಲಿಸ್ಟ್ ನಲ್ಲಿತ್ತು. ಜೊತೆಗೆ ಬಿಜೆಪಿ ಈ ಬಾರಿ ಕರ್ನಾಟಕದಲ್ಲಿ ಗುಜರಾತ್ ಮಾಡೆಲ್ ಅನ್ನು ಪ್ರಯೋಗಿಸಲಿದೆ. ಯುವಕರು ಮತ್ತು ವಿದ್ಯಾವಂತರಿಗೆ ಮಣೆ ಹಾಕಲಿದೆ ಅನ್ನುವ ಮಾತುಗಳು ಕೇಳಿ ಬಂದಿತ್ತು. ನಿರೀಕ್ಷೆಯಂತೆ ಸರ್ ಪ್ರೈಸ್ ಕೊಟ್ಟಿರುವ ಬಿಜೆಪಿ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಮಾತ್ರವಲ್ಲದೆ ಅನೇಕ ವೈದ್ಯರಿಗೆ ಟಿಕೆಟ್ ನೀಡಿದೆ. ಆ ಪೈಕಿ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದ ಡಾ. ಕ್ರಾಂತಿ ಕಿರಣ್ ಅವರಿಗೆ ಹುಬ್ಬಳ್ಳಿ-ಧಾರವಾಡ(E) ಕ್ಷೇತ್ರದ ಟಿಕೆಟ್ ನೀಡಲಾಗಿದೆ.
ಇನ್ನು ಗುಜರಾತ್ ಮಾಡೆಲ್ ಅನ್ನುವಂತೆ 9 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದ್ದು ಆ ಪೈಕಿ ಐದು ಮಂದಿ ಕರಾವಳಿಯ ಹಾಲಿ ಶಾಸಕರಾಗಿದ್ದಾರೆ. ಮಾಹಿತಿಗಳ ಪ್ರಕಾರ 6 ಮಂದಿಗೆ ಟಿಕೆಟ್ ಮಿಸ್ ಆಗೋ ಸಾಧ್ಯತೆಗಳಿದ್ದು , ಬೈಂದೂರು ಟಿಕೆಟ್ ಇನ್ನಷ್ಟೇ ಘೋಷಣೆಯಾಗಬೇಕಾಗಿದೆ. ( BJP Ticket)
Read More : BJP Ticket : ಮಕ್ಕಳಿಗೆ ಟಿಕೆಟ್ ಕೇಳಿದ ಇಬ್ಬರಿಗೆ ಸಿಹಿ ಕೊಟ್ಟ ಬಿಜೆಪಿ ಹೈಕಮಾಂಡ್
ಕುಂದಾಪುರ ಕ್ಷೇತ್ರದಲ್ಲಿ ಈಗಾಗಲೇ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕೀಯ ನಿವೃತ್ತಿ ಘೋಷಿಸಿದ್ದರು, ಆ ಹಿನ್ನಲೆಯಲ್ಲಿ ನಿರೀಕ್ಷೆಯಂತೆ ಕಿರಣ್ ಕೊಡ್ಗಿಯವರಿಗೆ ಟಿಕೆಟ್ ನೀಡಲಾಗಿದೆ. ಕಿರಣ್ ಕೊಡ್ಗಿಯವರ ತಂದೆ ಎಜಿ ಕೊಡ್ಗಿಯವರೇ ಹಾಲಾಡಿಯವರನ್ನು ರಾಜಕೀಯಕ್ಕೆ ಕರೆ ತಂದಿದ್ದರು.
ಇನ್ನು ಉಡುಪಿ ಕ್ಷೇತ್ರದ ಹಾಲಿ ಶಾಸಕ ರಘಪತಿ ಭಟ್ ಅವರು ಕ್ಷೇತ್ರ ತ್ಯಾಗ ಮಾಡಿದ್ದು, ಅಲ್ಲಿ ಸಂಘಕ್ಕೆ ಹತ್ತಿರವಾದ ಮತ್ತು ಇತ್ತೀಚಿನ ಕೆಲ ಹೋರಾಟಗಳಲ್ಲಿ ಸದ್ದು ಮಾಡಿದ್ದ ಯಶಪಾಲ ಸುವರ್ಣ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಇವರು ಮೊಗವೀರ ಸಮುದಾಯದವರಾಗಿರುವ ಕಾರಣ ಗೆಲುವಿನ ನಿರೀಕ್ಷೆ ಬಿಜೆಪಿಯದ್ದು. ರಘುಪತಿ ಭಟ್ ಅವರ ಮೇಲೆ ಕೆಲ ವೈಯುಕ್ತಿಕ ಆರೋಪಗಳು ಮತ್ತು ಕಾರ್ಯಕರ್ತರ ಕೆಲಸಗಳಾಗುತ್ತಿಲ್ಲ, ಕಾರ್ಯಕರ್ತರ ಕೈಗೆ ಸಿಗುತ್ತಿಲ್ಲ ಅನ್ನುವ ಆರೋಪಗಳಿತ್ತು.
ಇನ್ನು ಸುಳ್ಯ, ಇಲ್ಲಿನ ಹಾಲಿ ಶಾಸಕ ಎಸ್ ಅಂಗಾರ ಅವರನ್ನು ಬದಲಾಯಿಸಬೇಕು ಅನ್ನುವುದು 5 ವರ್ಷಗಳ ಹಿಂದಿನ ಒತ್ತಾಯ. ಕಳೆದ ಬಾರಿಯ ಚುನಾವಣೆಯಲ್ಲೇ ಅಂಗಾರ ಅವರ ಬಗ್ಗೆ ಅಸಮಾಧಾನದ ಮಾತು ಕೇಳಿ ಬಂದಿತ್ತು. ಈ ಬಾರಿ ಈ ಆಕ್ರೋಶ ಜೋರಾಗಿತ್ತು. ಸುಳ್ಯದಲ್ಲಿ ಸುದೀರ್ಘ ಅವಧಿಗೆ ಶಾಸಕರಾಗಿದ್ದರೂ ಅಭಿವೃದ್ಧಿಯಾಗಿಲ್ಲ ಅನ್ನುವುದು ಪ್ರಮುಖ ಆರೋಪ. ಜೊತೆಗೆ ಸ್ವಯಂ ನಿರ್ಧಾರ ಕೈಗೊಳ್ಳುವಲ್ಲಿಯೂ ಅಂಗಾರ ಅವರು ಸಾಕಷ್ಟು ವಿಳಂಭ ಧೋರಣೆ ತಳೆಯುತ್ತಿದ್ದರಂತೆ. ಅಂಗಾರ ಅವರ ಗಾಢ್ ಫಾದರ್ ಗಳ ಮಾತೇ ಅಂತಿಮವಾಗಿತ್ತು, ಹೀಗಾಗಿ ಕ್ಷೇತ್ರದಲ್ಲಿ ಅಸಮಾಧಾನವಿತ್ತು. ಕೆಲ ತಿಂಗಳ ಹಿಂದಷ್ಟೇ ಕಾರ್ಯಕರ್ತರ ಮೇಲೆ ಅಂಗಾರ ಅವರು ಎಗರಾಡಿದ್ದರೂ ಕೂಡಾ. ಸುಳ್ಯದಲ್ಲಿ ಈ ಬಾರಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯ ಟಿಕೆಟ್ ಗಿಟ್ಟಿಸಿದ್ದಾರೆ.
ಪುತ್ತೂರು ಕ್ಷೇತ್ರದಲ್ಲಿ ಸಂಜೀವ ಮಠಂದೂರು ಮೊದಲ ಬಾರಿಗೆ ಶಾಸಕರಾದವರು. ಎರಡನೇ ಬಾರಿಗೆ ಟಿಕೆಟ್ ನಿರೀಕ್ಷೆ ಇತ್ತು. ಆದರೆ ಕಾರ್ಯಕರ್ತರನ್ನು ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲ, ಕಾರ್ಯಕರ್ತರ ಕೆಲಸಗಳಾಗುತ್ತಿಲ್ಲ, ತಮ್ಮದೇ ಆದ ಗುಂಪು ಕಟ್ಟಿಕೊಂಡು ಓಡಾಡುತ್ತಾರೆ, ಬಿಜೆಪಿಯ ಮತ ಬ್ಯಾಂಕ್ ಎಂದು ಕರೆಸಿಕೊಂಡ ವಾರ್ಡ್ ಗಳಲ್ಲಿ ಕೆಲಸಗಳಾಗಿಲ್ಲ ಅನ್ನುವುದು ಅವರ ಮೇಲಿದ್ದ ಗುರುತರ ಆರೋಪ. ಜೊತೆಗೆ ಹಿಂದೂತ್ವಕ್ಕಾಗಿ ಹೊಡೆದಾಡುವ ಕಾರ್ಯಕರ್ತರಿಗೆ ಮಠಂದೂರು ಸ್ಪಂದನೆ ಇರಲಿಲ್ಲ ಅನ್ನುವುದು ಕಾರ್ಯಕರ್ತರ ಆಕ್ರೋಶವಾಗಿತ್ತು. ಮಠಂದೂರು ಅವರದ್ದು ಎನ್ನಲಾದ ಕೆಲ ಖಾಸಗಿ ಪೋಟೋ ವೈರಲ್ ಆಗಿತ್ತು, ಕಾರ್ಯಕರ್ತರನ್ನು ಅಣಬೆಗೆ ಹೋಲಿಸಿದ್ದಾರೆ ಅನ್ನುವ ಸುದ್ದಿಯೂ ಹರಿದಾಡಿತ್ತು. ವಿಶೇಷ ಅಂದ್ರೆ 2004 ನಂತರ ಪುತ್ತೂರು ಕ್ಷೇತ್ರದಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಲು ಯಾರಿಗೂ ಸಾಧ್ಯವಾಗಿಲ್ಲ. ಇದೀಗ ದಕ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಒಕ್ಕಲಿಗೆ ಸಮುದಾಯ ಅವರದ್ದು ಅನ್ನೋದು ಗಮನಾರ್ಹ.
ಇನ್ನು ಬೈಂದೂರು ಕ್ಷೇತ್ರವನ್ನು ಬಾಕಿ ಇರಿಸಿಕೊಳ್ಳಲಾಗಿದೆ. ಬೈಂದೂರು ಕ್ಷೇತ್ರದ ಹಾಲಿ ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್ ತಪ್ಪೋ ಎಲ್ಲಾ ಸಾಧ್ಯತೆಗಳಿದ್ದು, ಯಡಿಯೂರಪ್ಪ ಮತ್ತು ಅವರ ಪುತ್ರ ರಾಘವೇಂದ್ರ ಅವರ ಜೊತೆಗಿನ ಚರ್ಚೆಯ ನಂತ್ರ ಈ ಕ್ಷೇತ್ರಕ್ಕೆ ಟಿಕೆಟ್ ಘೋಷಣೆಯಾಗಲಿದೆ. ಸುಕುಮಾರ ಶೆಟ್ಟಿ ಅವರ ಮೇಲೂ ಸಾಕಷ್ಟು ಆರೋಪಗಳು ಕೇಳಿ ಬಂದಿತ್ತು.
ಕಾಪು ಕ್ಷೇತ್ರದಲ್ಲಿ ಲಾಲಾಜಿ ಮೆಂಡನ್ ಅವರಿಗೆ ಮತ್ತೆ ಟಿಕೆಟ್ ನಿರೀಕ್ಷೆಗಳಿತ್ತು. ಆದರೆ ಕೊನೆ ಘಳಿಗೆಯಲ್ಲಿ ಅವರಿಗೆ ಟಿಕೆಟ್ ಕೈ ತಪ್ಪಿದ್ದು ಅಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಟಿಕೆಟ್ ನೀಡಲಾಗಿದೆ. ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ 2015ರಲ್ಲಿ ಉಡುಪಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಅದಕ್ಕೂ ಮುಂಚೆ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಅವರು 2013ರಲ್ಲಿ ಕಾಪು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಸಿಗದ ಕಾರಣ ನಂತರದ ವರ್ಷಗಳಲ್ಲಿ ಕಮಲ ಪಾಳಯಕ್ಕೆ ಬಂದಿದ್ದರು.
Discussion about this post