ಪ್ರವೀಣ್ ನೆಟ್ಟಾರು ಅಂತ್ಯಕ್ರಿಯೆ ಸಂದರ್ಭದಲ್ಲಿ ಕಾಸರಗೋಡು ಬಿಜೆಪಿ ನೇತಾರ ಪಿ ರಮೇಶ್ ಅವರ ಮೇಲೆ ಲಾಠಿ ಬೀಸಿದ ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ.(police officers transfer) ಈ ಮೂಲಕ ಪೊಲೀಸರ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಬೊಮ್ಮಾಯಿ ಸರ್ಕಾರ ಮುಂದಾಗಿದೆ
ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅಂತ್ಯಕ್ರಿಯೆ ಸಂದರ್ಭದಲ್ಲಿ ಪೊಲೀಸರು ಲಾಠಿ ಜಾರ್ಜ್ ಮಾಡಿದ್ದು ಯಾಕೆ ಅನ್ನುವ ಪ್ರಶ್ನೆಗೆ ರಾಜ್ಯ ಸರ್ಕಾರದಿಂದ ಇನ್ನೂ ಉತ್ತರ ಬಂದಿಲ್ಲ. (police officers transfer) ಕಾರ್ಯಕರ್ತರ ಪ್ರಕಾರ ನಳಿನ್ ಕುಮಾರ್ ಕಾರನ್ನು ಅಲುಗಾಡಿಸಿದ ಕಾರಣಕ್ಕೆ ಲಾಠಿ ಬೀಸಲಾಗಿದೆ, ಸುನಿಲ್ ಕುಮಾರ್ ಕಾರ್ಕಳ ಮತ್ತು ಅಂಗಾರ ಅವರನ್ನು ಸೇಫ್ ಮಾಡಲು ಲಾಠಿ ಜಾರ್ಜ್ ಮಾಡಲಾಯಿತಂತೆ. ಆದರೆ ಈ ಲಾಠಿ ಜಾರ್ಜ್ ಬಗ್ಗೆ ಅದ್ಯಾವ ಬಿಜೆಪಿ ನಾಯಕನು ಮಾತನಾಡಲು ಸಿದ್ದರಿಲ್ಲ.
ಈ ನಡುವೆ ಕಾಸರಗೋಡು ಬಿಜೆಪಿ ಮುಖಂಡ ರಮೇಶ್ ಮೇಲೆ ನಡೆದ ಲಾಠಿ ಜಾರ್ಜ್ ವಿಡಿಯೋ ವೈರಲ್ ಆಗಿತ್ತು.(police officers transfer) ಒಂದು ವೇಳೆ ಆ ವಿಡಿಯೋ ಸೆರೆಯಾಗದೆ ಇರುತ್ತಿದ್ರೆ ಏನಾಗುತ್ತಿರಲಿಲ್ಲ. ಇದೀಗ ರಮೇಶ್ ಮೇಲೆ ಲಾಠಿ ಬೀಸಿದ ಪೊಲೀಸರಿಗೆ ವರ್ಗಾವಣೆ ಶಿಕ್ಷೆ ವಿಧಿಸಲಾಗಿದೆ. ಆ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ ಮಾಡದೆ ಇರುವ ಮೂಲಕ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲಾಗಿದೆ.
ಇದನ್ನು ಓದಿ : hariram shankar ips ಒಂದೇ ದಿನ 172 ಪೊಲೀಸರನ್ನು ವರ್ಗಾಯಿಸಿದ ಎಸ್ಪಿ ಹರಿರಾಮ್ ಶಂಕರ್
ಪಾಪ ಈ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಆದೇಶದಂತೆ ಲಾಠಿ ಬೀಸಿದ್ದಾರೆ.ಅಲ್ಲಿ ಬಂದವರ ಪೈಕಿ ನೀವು ಬಿಜೆಪಿ ನಾಯಕರ, ನೀವು ಕಾರ್ಯಕರ್ತರ, ನೀವು ಜಿಲ್ಲಾಧ್ಯಕ್ಷರ ಎಂದು ಹೇಳಿ ಹೊಡೆಯುವಷ್ಟು ಟೈಮ್ ಎಲ್ಲಿತ್ತು. ಕಾನೂನು ಪ್ರಕಾರ ಹಿರಿಯ ಅಧಿಕಾರಿಯ ಆದೇಶ ಪಾಲಿಸಬೇಕಿತ್ತು, ಪಾಲಿಸಿದ್ದಾರೆ ಅಷ್ಟೇ.
ಹಾಗೆಲ್ಲಾ ವರ್ಗಾವಣೆ ಮಾಡುವುದಾಗಿದ್ರೆ ಲಾಠಿ ಜಾರ್ಜ್ ಗೆ ಆದೇಶ ಕೊಟ್ಟ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕಿತ್ತು. ಲಾಠಿ ಜಾರ್ಜ್ ಯಾಕೆ ಮಾಡಬೇಕಾಗಿ ಬಂತು ಅನ್ನುವುದನ್ನು ವಿವರಿಸಬೇಕಿತ್ತು. ಲಾಠಿ ಜಾರ್ಜ್ ಮಾಡಿದ್ಯಾಕೆ ಅನ್ನುವ ಸತ್ಯವನ್ನು ಬಿಚ್ಚಿಡುವ ಎದೆಗಾರಿಕೆ ರಾಜ್ಯ ಸರ್ಕಾರಕ್ಕೆ ಎಲ್ಲಿದೆ. ಹೀಗಾಗಿಯೇ ಅಮಾಯಕ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಮಾಧಾನಗೊಳಿಸಲಾಗಿದೆ.
ಇದನ್ನು ಓದಿ : sr viswanath birthday : 3 ಟನ್ ಮಟನ್, 5 ಟನ್ ಚಿಕನ್ 20 ಸಾವಿರ ಮೊಟ್ಟೆ : ಬಿಡಿಎ ಅಧ್ಯಕ್ಷರ ಅದ್ದೂರಿ ಬರ್ತ್ ಡೇ
ಹೀಗೆ ಕೆಳ ಹಂತದ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಕಾರಣದಿಂದ ಪೊಲೀಸ್ ಸಿಬ್ಬಂದಿ ಕೂಡಾ ಬೇಸರಿಸಿಕೊಳ್ಳುತ್ತಾರೆ. ಅವರ ಕಾರ್ಯ ಕ್ಷಮತೆ ಕೂಡಾ ಕುಗ್ಗುತ್ತದೆ. ಇದರ ಬದಲಾಗಿ ಲಾಠಿ ಜಾರ್ಜ್ ಗೆ ಕಾರಣವಾದ ರಾಜಕಾರಣಿಗಳನ್ನು ಮನೆಗೆ ಕಳುಹಿಸಬೇಕಿತ್ತು ತಾನೇ.
ಇದೀಗ ಸುಬ್ರಹ್ಮಣ್ಯ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಜಂಬೂ ರಾಜ್, ಬೆಳ್ಳಾರೆಯ ರುಕ್ಮ ನಾಯ್ಕ್, ಬೆಳ್ಳಾರೆ ಹೆಡ್ ಕಾನ್ಸ್ಟೇಬಲ್ ಬಾಲಕೃಷ್ಣ ಅವರನ್ನು ವರ್ಗಾವಣೆ ಮಾಡಲಾಗಿದ್ದು ಅವರಿಗೆ ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ದೇವ ಜ್ಯೋತಿ ರೇ ಆದೇಶಿಸಲಾಗಿದೆ.
Discussion about this post