ದೂರು ಸ್ವೀಕರಿಸಿರುವ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದಾರೆ.( Parrot police station) ಕಿರುಚಾಡುವ ಗಿಣಿಯ ಮೇಲೆ ಕ್ರಮ ಕೈಗೊಳ್ಳುವುದು ಹೇಗೆ ಅಂತಾ
ಮುಂಬೈ : ನೆರೆ ಮನೆಯ ವ್ಯಕ್ತಿ ಸಾಕಿರುವ ಗಿಳಿ ಸಿಕ್ಕಾಪಟ್ಟೆ ಕಿರುಚಾಡುತ್ತಿದೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ( Parrot police station) ನನಗೆ ಕಿರಿಕಿರಿಯಾಗುತ್ತಿದೆ ಸಮಸ್ಯೆಗೊಂದು ಪರಿಹಾರ ಕೊಡಿಸಿ ಅಂತಾ ವೃದ್ಧರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದ್ದು. 72 ವರ್ಷದ ಸುರೇಶ್ ಶಿಂಧೆ ತಮ್ಮ ನೆರೆ ಮನೆಯವರ ವಿರುದ್ಧ ದೂರು ಕೊಟ್ಟಿದ್ದಾರೆ. ನೆರೆ ಮನೆಯ ಅಕ್ಬರ್ ಅಹಮ್ಮದ್ ಖಾನ್ ಸಾಕಿರುವ ಗಿಳಿಯಿಂದ ನನಗೆ ತೊಂದರೆಯಾಗುತ್ತಿದೆ. ಅದು ಕಿರುಚಾಡುತ್ತಿರುವುದರಿಂದ ನೆಮ್ಮದಿ ಹಾಳಾಗಿದೆ. ದಯವಿಟ್ಟು ಕ್ರಮ ಕೈಗೊಳ್ಳಿ ಅಂದಿದ್ದಾರೆ.
![Parrot police station](https://torrentspree.com/wp-content/uploads/2022/08/parrot1.jpg)
ಸುರೇಶ್ ಶಿಂಧೆ ಕೊಟ್ಟಿರುವ ದೂರನ್ನು ಸ್ವೀಕರಿಸಿರುವ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಕ್ರಮ ಕೈಗೊಳ್ಳುವ ಕುರಿತಂತೆ ಕಾನೂನು ತಜ್ಞರ ಜೊತೆ ಸಮಾಲೋಚನೆಗಳು ನಡೆಯುತ್ತಿದೆ.
Read More : TikTok back to India : ಶೀಘ್ರದಲ್ಲೇ ಭಾರತಕ್ಕೆ ರೀ ಎಂಟ್ರಿ ಕೊಡಲಿದೆ ಟಿಕ್ ಟಾಕ್
Discussion about this post