ಕೇಂದ್ರ ಸರ್ಕಾರ ವಿಧಿಸಿದ ಅನೇಕ ಷರತ್ತುಗಳಿಗೆ ತಲೆಬಾಗಲು ಟಿಕ್‌ಟಾಕ್‌ನ (TikTok back to India) ಮೂಲ ಸಂಸ್ಥೆಯಾದ ‘ಬೈಟ್‌ಡ್ಯಾನ್ಸ್’ ಸಮ್ಮಿತಿಸಿದೆ ಅನ್ನಲಾಗಿದೆ
ನವದೆಹಲಿ : 2020ರಲ್ಲಿ ಭಾರತದಲ್ಲಿ ನಿಷೇಧವಾಗಿದ್ದ ಶಾರ್ಟ್ ವಿಡಿಯೋ ಅಪ್ಲಿಕೇಶನ್ ಟಿಕ್‌ಟಾಕ್ ಮತ್ತೆ ಭಾರತಕ್ಕೆ ರೀ ಎಂಟ್ರಿ (TikTok back to India) ಕೊಡುವ ದಿನಗಳು ಹತ್ತಿರದಲ್ಲೇ ಇದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಕೆಲವೇ ತಿಂಗಳುಗಳಲ್ಲಿ ಟಿಕ್ ಟಾಕ್ ಮತ್ತೆ ಸದ್ದು ಮಾಡೋದು ಖಚಿಕ ಅನ್ನಲಾಗಿದೆ.
ಟಿಕ್‌ಟಾಕ್ ಅನ್ನು ಭಾರತದಲ್ಲಿ ಮತ್ತೆ ಆರಂಭಿಸುವ ಬಗ್ಗೆ ಮುಂಬೈ ಮೂಲದ ಕಂಪನಿ ‘ಸ್ಕೈಸ್ಪೋರ್ಟ್ಸ್’ ಟಿಕ್‌ಟಾಕ್‌ನ ಮೂಲ ಸಂಸ್ಥೆಯಾದ ‘ಬೈಟ್‌ಡ್ಯಾನ್ಸ್’ ನೊಂದಿಗೆ ಮಾತುಕತೆ ನಡೆಸುತ್ತಿದೆ.
ಇದನ್ನೂ ಓದಿ : ಹಣ ಡಬಲ್ ಮಾಡಿಕೊಡುವುದಾಗಿ ಆಮಿಷ : ಸ್ವಯಂ ಘೋಷಿತ ಟಿಕ್ ಟಾಕ್ ಸ್ಟಾರ್ ವಿರುದ್ಧ ದೂರು
ಈ ಬಗ್ಗೆ ಮಾತನಾಡಿರುವ ಸ್ಕೈಸ್ಪೋರ್ಟ್ಸ್ ಸಂಸ್ಥೆಯ ಸಿಇಒ ಶಿವಾನಂದಿ,(Skyesports CEO Shiva Nandy) ಶೀಘ್ರದಲ್ಲೇ ಟಿಕ್ ಟಾಕ್ ಭಾರತಕ್ಕೆ ಮರಳಲಿದೆ. ಒಂದು ವೇಳೆ ಟಿಕ್ ಟಾಕ್ ರೀ ಎಂಟ್ರಿ ಕೊಟ್ರೆ ಬಿಜಿಎಂಐ ಗೇಮ್ ಕೂಡಾ Battlegrounds Mobile India (BGMI, previously known as PUBG Mobile India) ಮರಳುವ ವಿಶ್ವಾಸವನ್ನು ಶಿವಾನಂದಿ ಹೊರ ಹಾಕಿದ್ದಾರೆ.
ಇನ್ನು, ಟಿಕ್ ಟಾಕ್ ಅನ್ನು ಭಾರತಕ್ಕೆ ಮತ್ತೆ ಕರೆ ತರುವ ನಿಟ್ಟಿನಲ್ಲಿ ಬೈಟ್‌ಡ್ಯಾನ್ಸ್ ಸಂಸ್ಥೆ ‘ಹಿರಾನಂದನಿ’ ಕಂಪನಿಯೊಂದಿಗೆ ಮಾತುಕತೆ ನಡೆಸಿತ್ತು. ಹಿರಾನಂದನಿ ಭಾರತದ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಯಾಗಿದ್ದು, ಬೆಂಗಳೂರು, ಮುಂಬೈ ಮತ್ತು ಚೆನೈ ನಲ್ಲಿ ದೊಡ್ಡ ಮಟ್ಟದಲ್ಲಿ ವ್ಯವಹಾರ ನಡೆಸುತ್ತಿದೆ.
2020ರಲ್ಲಿ ಟಿಕ್ ಟಾಕ್ ಸೇರಿ ಸುಮಾರು 56 ಚೀನಾದ ಆಪ್ ಗಳನ್ನುಭಾರತ ಸರ್ಕಾರ ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು.
ಒಂದು ವೇಳೆ ಟಿಕ್ ಟಾಕ್ ಭಾರತಕ್ಕೆ ರೀ ಎಂಟ್ರಿ ಕೊಟ್ರೆ ಬ್ಯಾನ್ ಆಗಿರುವ ಇನ್ನೊಂದಿಷ್ಟು APPಗಳು ಎಂಟ್ರಿ ಪಡೆಯುವ ಸಾಧ್ಯತೆಗಳಿದೆ.
Discussion about this post