ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ಕತ್ರೀನಾ ಕೈಫ್- ವಿಕ್ಕಿ ಕೌಶಲ್ ವಿವಾಹ ಕಾರ್ಯಕ್ರಮ ನಡೆಯಲಿದೆ. ಸೆಲೆಬ್ರೆಟಿಗಳ ಮದುವೆ ಅಂದ ಮೇಲೆ ಎಲ್ಲರಿಗೂ ಸಹಜ ಕುತೂಹಲವಿರುತ್ತದೆ. ಹಾಗಂತ ಇದು ದೇಶವೇ ಖುಷಿ ಪಡುವ ಸುದ್ದಿಯಲ್ಲ ಬಿಡಿ. ಹಾಗಿದ್ದರೂ ಕತ್ರೀನಾ ವಿವಾಹ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ.
ಮೊನ್ನೆ ಮೊನ್ನೆ ವಿವಾಹ ಕಾರ್ಯಕ್ರಮ ನಡೆಯುವ ಸುತ್ತಿಲಿನ ಪ್ರದೇಶದಲ್ಲಿ ಡ್ರೋನ್ ಹಾರಾಟ ನಡೆಸಿದ್ರೆ ಹೊಡೆದು ಉರುಳಿಸಲಾಗುತ್ತದೆ ಅನ್ನಲಾಗಿತ್ತು. ಇನ್ನು ಈ ಮದುವೆಗೆ ಸಿಕ್ಕಾಪಟ್ಟೆ ಸೆಲೆಬ್ರೆಟಿಗಳು ಬರುವುದರಿಂದ ಜಿಲ್ಲಾಡಳಿತ ಕೂಡಾ ಮದುವೆ ಸಿದ್ದತೆಯಲ್ಲಿ ಪರೋಕ್ಷವಾಗಿ ಪಾಲ್ಗೊಂಡಿದೆ.
ಇದೀಗ ಮದುವೆ ಕಾರ್ಯಕ್ರಮದ ಸಲುವಾಗಿ ರಸ್ತೆಯೊಂದನ್ನು ಬಂದ್ ಮಾಡಿಸಿದ ಆರೋಪ ಕೇಳಿ ಬಂದಿದ್ದು, ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಈ ನಡುವೆ ಒಟಿಟಿ ಸಂಸ್ಥೆಯೊಂದು ಇವರಿಬ್ಬರ ಮದುವೆ ವಿಡಿಯೋ ಖರೀದಿಗೆ ಆಸಕ್ತಿ ಕೋರಿದ್ದು 100 ಕೋಟಿ ರೂಪಾಯಿ ಆಫರ್ ಕೊಟ್ಟಿದೆ ಅನ್ನುವ ಸುದ್ದಿ ಬಂದಿದೆ.
ಹಾಗಂತ ಇದೇನು ಹೊಸ ವಿಷಯವಲ್ಲ, ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರಿಯ ವಿವಾಹ ಕಾರ್ಯಕ್ರಮದ ವಿಡಿಯೋವನ್ನು ವಾಹಿನಿಯೊಂದು ಖರೀದಿಸಿತ್ತು, ಅದೇ ರೀತಿ ವಿದೇಶಗಳಲ್ಲಿ ಸೆಲೆಬ್ರೆಟಿಗಳು ತಮ್ಮ ಮದುವೆ ಸೇರಿದಂತೆ ಖಾಸಗಿ ಸಮಾರಂಭ ವಿಡಿಯೋಗಳನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡುತ್ತಾರೆ. ಈ ವಿಡಿಯೋಗಳನ್ನು ಬಾಯಿ ಬಿಚ್ಚಿ ನೋಡುವ ಅಭಿಮಾನಿಗಳಿರುವಾಗ ಬಿಟ್ಟಿ ಕಾಸು ಬಂದ್ರೆ ಬಿಡ್ತಾರ. ಹಾಗೇ ಕತ್ರೀನಾ ಕೈಫ್- ವಿಕ್ಕಿ ಕೌಶಲ್ ಕೂಡಾ.
Discussion about this post