ಹೊಸ ರೂಪದಲ್ಲಿ ಹಾವಳಿ ಇಡುತ್ತಿರುವ ಒಮಿಕ್ರೋನ್ ( omicron ) ಹೊಸ ತಲೆಬೇನೆಯಾಗಿ ಪರಿಣಮಿಸಿದೆ
ಲಂಡನ್ : ಕೊರೋನಾ ಸೋಂಕು ಇನ್ನೂ ಜೀವಂತವಾಗಿದ್ದು, ದಿನಕ್ಕೊಂದು ರೂಪದಲ್ಲಿ ರೀ ಎಂಟ್ರಿಯಾಗುತ್ತಿದೆ. ಅದರಲ್ಲೂ ಒಮಿಕ್ರೋನ್ ರೂಪಾಂತರಿ ವೈರಸ್ ಹಾವಳಿ ಸಾಕಷ್ಟು ಸಮಸ್ಯೆಯನ್ನು ತಂದೊಡ್ಡಿದೆ. ಕೊರೋನಾ ಲಸಿಕೆ ಪಡೆದುಕೊಂಡವರಿಗೂ ಈ ಒಮಿಕ್ರೋನ್ ಹರಡುವ ಕಾರಣ ಸಮಸ್ಯೆ ದೊಡ್ಡದಾಗಿತ್ತು.
ಇದೀಗ ಒಮಿಕ್ರೋನ್ ರೂಪಾಂತರಿ ವೈರಸ್ ವಿರುದ್ಧವೂ ಹೋರಾಡಬಲ್ಲ ಬೂಸ್ಟರ್ ಲಸಿಕೆಯನ್ನು ಮಾಡೆರ್ನಾ ಬಿಡುಗಡೆ ಮಾಡಿದೆ. ಈ ಲಸಿಕೆ ಒಮಿಕ್ರೋನ್ ರೂಪಾಂತರಿಗೆ ಪರಿಣಾಮಕಾರಿ ಎಂದು ಸಂಸ್ಥೆ ಹೇಳಿದ್ದು, ಬ್ರಿಟನ್ ಜೌಷಧಿ ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ ಮಾಡೆರ್ನಾದ ಸ್ಟೈಕ್ ಮ್ಯಾಕ್ಸ್ ಲಸಿಕೆಗೆ ಬಳಕೆಗೆ ಅನುಮತಿ ನೀಡಿದೆ.
ಇದನ್ನೂ ಓದಿ : Amazon pressure cooker : ಕೆಟ್ಟು ಹೋದ ಕುಕ್ಕರ್ ಮಾರಿದ ಅಮೆಜಾನ್ 1 ಲಕ್ಷ ರೂಪಾಯಿ ದಂಡ
ವಿಶೇಷ ಅಂದ್ರೆ ಈ ಲಸಿಕೆಯ ಅರ್ಧ ಭಾಗ ಮೂಲ ವೈರಸ್ ಅನ್ನು ಕೊಲ್ಲುತ್ತದೆ. ಇನ್ನರ್ಧ ಲಸಿಕೆ ಒಮಿಕ್ರೋನ್ ವೈರಸ್ ಅನ್ನು ಕೊಲ್ಲುತ್ತದೆಯಂತೆ.
Discussion about this post