ಒಂದು ಕಡೆ ಇಂಧನ ದರ ಏರಿಕೆಯಾಗುತ್ತಿರುವ ಕಾರಣ ಪರ್ಯಾಯ ಮಾರ್ಗದತ್ತ ಸಂಶೋಧನೆಗಳು ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಇದೀಗ ಎಲ್ಲರ ಚಿತ್ತ ಎಲೆಕ್ಟ್ರಿಕ್ ವಾಹನಗಳತ್ತ ನೆಟ್ಟಿದೆ. ಅದರಲ್ಲೂ ಈಗಾಗಲೇ ಮಾರುಕಟ್ಟೆ ಬಂದಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಜನರ ಮೆಚ್ಚುಗೆಗೂ ಪಾತ್ರವಾಗಿದೆ. ಎಲೆಕ್ಟ್ರಿಕ್ ವಾಹನ ಜಾರ್ಜ್ ಮಾಡಲು ಸೂಕ್ತ ಬಂಕ್ ಗಳಿಲ್ಲ ಅನ್ನುವುದೊಂದೇ ಈಗಿರುವ ಕೊರತೆ.
ಈ ನಡುವೆ ಓಲಾ ಸಂಸ್ಥೆ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಪ್ರಾರಂಭಿಸಿದ್ದು, 499 ರೂಪಾಯಿ ಪಾವತಿಸುವ ಮೂಲಕ ಓಲಾ ಸ್ಕೂಟರ್ ಬು ಮಾಡಬಹುದಾಗಿದೆ. ಆನ್ ಲೈನ್ ಮೂಲಕ ಬುಕ್ಕಿಂಗ್ ಮಾಡಿದವರಿಗೆ ಡೆಲಿವರಿಯಲ್ಲಿ ಆದ್ಯತೆ ದೊರೆಯಲಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ.
ಈಗಾಗಲೇ ಓಲಾ ಎಲೆಕ್ಟ್ರಿಕ್ ಸಂಸ್ಥೆ ಬ್ಯಾಂಕ್ ಆಫ್ ಬರೋಡಾದಿಂದ 100 ಮಿಲಿಯನ್ ಡಾಲರ್ ದೀರ್ಘಾವಧಿಯ ಸಾಲ ಪಡೆದಿದ್ದು, ತನ್ನ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸಿದೆ. ತಮಿಳುನಾಡಿನ ಕೃಷ್ಣಗಿರಿಯಲ್ಲಿ 500 ಎಕರೆ ವಿಸ್ತೀರ್ಣದಲ್ಲಿ ಓಲಾದಿಂದ ಕಾರ್ಖಾನೆಯನ್ನು ಸ್ಥಾಪಿಸಲಾಗುತ್ತಿದ್ದು, ವರ್ಷಕ್ಕೆ 10 ಮಿಲಿಯನ್ ವಾಹನಗಳನ್ನು ಪೂರ್ಣ ಸಾಮರ್ಥ್ಯದಲ್ಲಿ ತಯಾರಿ ಮಾಡುವ ಗುರಿ ಹೊಂದಲಾಗಿದೆ.
ಈ ನಡುವೆ ಪೂರ್ವವಾಗಿ ಬುಕ್ಕಿಂಗ್ ಆರಂಭವಾದ 24 ಗಂಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಾಗಿ 1 ಲಕ್ಷ ಜನ ಬುಕ್ಕಿಂಗ್ ಮಾಡಿದ್ದಾರೆ.
ಇನ್ನು ಆಗಸ್ಟ್ ತಿಂಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, 1 ರಿಂದ 1.20 ಲಕ್ಷ ದರವನ್ನು ಈ ಸ್ಕೂಟರ್ ಹೊಂದಿರಲಿದೆ ಎನ್ನಲಾಗಿದೆ.
Discussion about this post