ಪ್ರಾಥಮಿಕ ಶಾಲೆಯ ಪಠ್ಯ ಪುಸ್ತಕದಲ್ಲಿ, ಹುಲಿಯೊಂದಿಗೆ ಹೋರಾಡಿ ಬಿರುದು ಗಳಿಸಿದವರ ಕಥೆಯನ್ನು ಕೇಳಿದ್ದೇವೆ. ಆದರೆ ಅದೆಷ್ಟು ಸತ್ಯ ಅನ್ನುವುದು ಇನ್ನೂ ಅಸ್ಪಷ್ಟ. ಆದರೆ ಕಾಡು ಪ್ರಾಣಿಗಳೊಂದಿಗೆ ಸೆಣಸಾಡಿ ಅದೃಷ್ಟ ಅನ್ನುವಂತೆ ಬದುಕಿ ಬಂದವರ ಕಥೆಗಳನ್ನು ಇತ್ತೀಚೆಗೆ ನಾವು ಕೇಳುತ್ತಿದ್ದೇವೆ.
ಹೀಗೆ ಮಹಿಳೆಯೊಬ್ಬರು ವಾಕಿಂಗ್ ಸ್ಟಿಕ್ ಅನ್ನೇ ಶಸ್ತ್ರವನ್ನಾಗಿಸಿ ಚಿರತೆಯೊಂದಿಗೆ ಹೋರಾಡಿ ಪ್ರಾಣ ಉಳಿಸಿಕೊಂಡ ಘಟನೆ ಮುಂಬೈನ ಆರೆ ಕಾಲೋನಿಯಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಹೋರಾಟದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
55 ವರ್ಷದ ನಿರ್ಮಲಾ ದೇವಿ ಸಿಂಗ್, ಬುಧವಾರ ಸಂಜೆ ವೇಳೆ ಮನೆ ಸಮೀಪದ ಕಟ್ಟೆಯೊಂದರಲ್ಲಿ ಕೂತಿದ್ದರು. ಈ ವೇಳೆ ಬಂದ ಚಿರತೆ, ಏಕಾಏಕಿಯಾಗಿ ನಿರ್ಮಲಾ ಅವರ ಮೇಲೆ ಎರಗಲು ಮುಂದಾಗಿದೆ. ಧೃತಿಗೆಡದ 55 ವರ್ಷದ ನಿರ್ಮಲಾ ದೇವಿ ಚಿರತೆಯೊಂದಿಗೆ ಹೋರಾಡಿದ್ದಾರೆ. ಕಷ್ಟಪಟ್ಟು ಚಿರತೆಯ ದಾಳಿಯಿಂದ ಪ್ರಾಣ ರಕ್ಷಿಸಿಕೊಂಡಿದ್ದಾರೆ.
ಚಿರತೆಯಿಂದ ಪ್ರಾಣ ಉಳಿಸಿಕೊಳ್ಳಲು ವಾಕಿಂಗ್ ಸ್ಟಿಕ್ ಅನ್ನೇ ಉಪಯೋಗಿಸಿದ ಮಹಿಳೆ ಹೋರಾಡಿದ್ದಾರೆ. ಚಿರತೆಯನ್ನು ಕೋಲಿನಿಂದ ತಳ್ಳಿ ತಪ್ಪಿಸಿಕೊಂಡಿದ್ದಾರೆ. ಮಹಿಳೆ ಕಿರುಚಾಡುತ್ತಿದ್ದಂತೆಯೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ
ಈ ಪ್ರದೇಶದಲ್ಲಿ ಚಿರತೆ ದಾಳಿ ನಡೆಸುತ್ತಿರುವ ಮೂರನೇ ಘಟನೆ ಇದಾಗಿದ್ದು , ಎರಡು ದಿನಗಳ ಹಿಂದಷ್ಟೇ ಮನೆಯ ಹೊರಗೆ ಆಟವಾಡುತ್ತಿದ್ದ 4 ವರ್ಷದ ಮಗುವಿನ ಮೇಲೆ ದಾಳಿ ನಡೆಸಿತ್ತು. ತಕ್ಷಣ ಸ್ಥಳೀಯರು ದೌಡಾಯಿಸಿ ಮಗುವನ್ನು ರಕ್ಷಿಸಿದ್ದರು.
CCTV visuals of a leopard attack in Aarey colony..
— Aruneel Sadadekar (@Aruneel_S) September 30, 2021
A senior citizen woman braves off a sudden leopard attack in #Mumbai's #Aarey Colony…
Woman suffers injuries…#Leopard attacks have become frequent in Aarey Colony…few days back, a four year old boy was also attacked pic.twitter.com/Mk8xOecJst
Discussion about this post