ಈ oben electric bike ಬೆಂಗಳೂರಿನ ಜಿಗಣಿ ರಸ್ತೆಯಲ್ಲಿ ನಿರ್ಮಾಣವಾಗುತ್ತದೆ. ಆದರೆ ಬೆಂಗಳೂರಿಗರಿಗೆ ಒಬೆನ್ ಎಲೆಕ್ಟ್ರಿಕ್ ಬೈಕ್ ಟೆಸ್ಟ್ ರೈಡ್ ಭಾಗ್ಯವಿಲ್ಲ
ಇಂಧನ ದರ ಏರಿಕೆಯ ನಡುವೆ ಇದೀಗ ಎಲೆಕ್ಟ್ರಿಕ್ ವಾಹನಗಳ ಭರಾಟೆ ಶುರುವಾಗಿದೆ. ರಸ್ತೆಗೆ ಬಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಬೆಂಕಿ ತುತ್ತಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹಾಗಂತ ಇವಿಗಳನ್ನು ಕೈ ಬಿಡುವ ಹಾಗಿಲ್ಲ. ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳೇ ರಸ್ತೆಯಲ್ಲಿ ಕಾರು ಬಾರು ನಡೆಸಲಿದೆ. ಈ ನಡುವೆ 100 ಕಿಮೀ ಗರಿಷ್ಟ ವೇಗದ ಸಾಮರ್ಥ್ಯ ಹೊಂದಿರುವ oben electric bike ಒಬೆನ್ ಎಲೆಕ್ಟ್ರಿಕ್ ಬೈಕ್ ರಸ್ತೆಗಿಳಿಯಲು ರೆಡಿಯಾಗಿದೆ. ಈಗಾಗಲೇ ಬುಕ್ಕಿಂಗ್ ನಡೆಯುತ್ತಿದ್ದು, ಬುಕ್ಕಿಂಗ್ ಮಾಡಿದವರಿಗೆ ಟೆಸ್ಟ್ ರೈಡ್ ಅವಕಾಶ ಮಾಡಿಕೊಡಲಾಗಿದೆ. ಬೆಂಗಳೂರು ಹೊರತುಪಡಿಸಿ, 8 ಮಹಾನಗರಗಳಲ್ಲಿ ಎಲೆಕ್ಟ್ರಿಕ್ ಬೈಕ್ ಟೆಸ್ಟ್ ರೈಡ್ ಮಾಡಬಹುದಾಗಿದೆ.
ಇದನ್ನೂ ಓದಿ : Whitener and solution: ಹೆಸರಿಗೆ ಬಕ್ ಸ್ಟಾಲ್ : ಕೆಲಸ ಅಪ್ರಾಪ್ತರಿಗೆ ವೈಟರ್ ಮಾರಾಟ
ಇನ್ನು ಬೈಕ್ ಸಾಮರ್ಥ್ಯ ವಿಚಾರಕ್ಕೆ ಬರುವುದಾದರೆ 2 ಗಂಟೆ ಜಾರ್ಜ್ ಮಾಡಿದರೆ 200 ಕಿಮೀ ಚಲಿಸಬಹುದು ಅನ್ನುವ ಭರವಸೆಯನ್ನು ಕಂಪನಿ ನೀಡಿದೆ. 3 ಸೆಕೆಂಡ್ ನಲ್ಲಿ 40 ಕಿಮೀ ತಲುಪಬಲ್ಲ ಸಾಮರ್ಥ್ಯವನ್ನು ಈ ಬೈಕ್ ಹೊಂದಿದೆಯಂತೆ. ಉಳಿದೆಲ್ಲಾ ಇವಿ ಬೈಕ್ ಗಳು NMC ರ ಬ್ಯಾಟರಿ ಬಳಸುತ್ತಿದ್ರೆ, ಒಬೆನ್ ಬೈಕ್ ನಲ್ಲಿ LFC ಬ್ಯಾಟರಿ ಹೊಂದಿದೆ. ಒಟ್ಟು ಮೂರು ಬಣ್ಣಗಳಲ್ಲಿ ಬೈಕ್ ಲಭ್ಯವಿರಲಿದೆ.
ಬೆಂಗಳೂರಿನ ಜಿಗಣಿ ರಸ್ತೆಯಲ್ಲಿ ಒಬೆನ್ ಬೈಕ್ ತಯಾರಿಕಾ ಘಟಕವಿದ್ದು, ದಸರಾ ಹಬ್ಬದ ಸಂದರ್ಭದಲ್ಲಿ ಬುಕ್ಕಿಂಗ್ ಮಾಡಿದವರ ಮನೆ ಬಾಗಿಲಿಗೆ ಬೈಕ್ ಡೆಲಿವರಿಯಾಗಲಿದೆ.
ಪಾರ್ಸೆಲ್ ವಿಚಾರಕ್ಕೆ ಡಾಬಾ ಪುಡಿ ಮಾಡಿದ ಪ್ರೊಬೆಷನರಿ ಪಿಎಸ್‌ಐ : ಗದಗದಲ್ಲೊಂದು ಅಮಾನವೀಯ ಘಟನೆ
ಗದಗ : ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬೇವಿನಕಟ್ಟಿ ಗ್ರಾಮದ ಹೊರವಲಯದ ಡಾಬಾ ಒಂದಕ್ಕೆ ತನ್ನ ಗ್ಯಾಂಗ್ ಜೊತೆ ನುಗ್ಗಿದ ಪ್ರೊಬೆಷನರಿ ಪಿಎಸ್‌ಐ ( gadag probationary psi ) ಗಲಾಟೆ ಮಾಡಿ ಡಾಬಾ ಪುಡಿಗಟ್ಟಿದ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಐವರು ಗೆಳೆಯರೊಂದಿಗೆ ಸೇರಿ ರಾಡಿ ರಂಪಾಟ ಮಾಡಿದ್ದಾರೆ. ಅಂದ ಹಾಗೇ ಗಲಾಟೆ ಮಾಡಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರೊಬೆಷನರಿ ಪಿಎಸ್‌ಐ ಅರವಿಂದ ಅಂಗಡಿ ಮತ್ತು ಸ್ನೇಹಿತರು
ಶ್ರೀಶೈಲ ಕಳ್ಳಿಮಠ ಅನ್ನುವವರ ಲಕ್ಕಿ ಡಾಬಾ ಗೆ ಸೋಮವಾರ ರಾತ್ರಿ ( ಜುಲೈ 4 ) ನುಗ್ಗಿದ ಅರವಿಂದ ಗ್ಯಾಂಗ್ ಕುಡಿದ ಮತ್ತಿನಲ್ಲಿ ಏಕಾಏಕಿ ಗಲಾಟೆ ಮಾಡಿದೆ. ಕಂಠ ಪೂರ್ತಿ ಕುಡಿದಿದ್ದ ಗುಂಪು ಡಾಬಾದ ಫ್ಯಾಮಿಲಿ ರೂಮ್‌ನಲ್ಲಿ ಕೂತು ಕುಡಿಯೋದಕ್ಕೆ ಅವಕಾಶ ಕೇಳಿದ್ರಂತೆ. ಫ್ಯಾಮಿಲಿ ರೂಮ್‌ನಲ್ಲಿ ಅವಕಾಶ ಇಲ್ಲ. ಹೊರಗಡೆ ಪ್ರತ್ಯೇಕವಾಗಿ ಅವಕಾಶ ಮಾಡಿ ಕೊಡ್ತೀನಿ ಎಂದು ಶ್ರೀಶೈಲ ಕಳ್ಳಿಮಠ ಹೇಳಿದ್ರೆ ಅದನ್ನು ಕೇಳುವ ಸ್ಥಿತಿಯಲ್ಲಿ ಅರವಿಂದ ಅಂಗಡಿ ಇರಲಿಲ್ಲ.
ಈ ವೇಳೆ ಪಾರ್ಸೆಲ್ ಕೊಡಿ ಹೊರಗಡೆ ಹೋಗ್ತೀವಿ ಅಂತಾ ಗುಂಪಿನಲ್ಲಿದ್ದವರು ಹೇಳಿದ್ದಾರೆ. ಪಾರ್ಸೆಲ್ ಕೊಡುವ ಸಂದರ್ಭದಲ್ಲಿ ಅರವಿಂದ ಅಂಗಡಿ ಗೆಳೆಯ ಹನಮಂತ ಮತ್ತೆ ಕಿರಿಕ್ ತೆಗೆದು ಡಾಬಾ ಮಾಲೀಕ ಶ್ರೀಶೈಲ ಅವರ ತಲೆಗೆ ಸೋಡಾ ಬಾಟಲಿಯಿಂದ ಹಲ್ಲೆ ಮಾಡಿದ್ದಾನೆ. ಇದಾದ ಬಳಿಕ ಮಾತಿಗೆ ಮಾತು ಬೆಳೆದು ರೌಡಿಗಳ ಗುಂಪು ಡಾಬಾ ಧ್ವಂಸಗೊಳಿಸಿದೆ. ಡಾಬಾದಲ್ಲಿನ ಫ್ರಿಜ್ಡ್, ಕೌಂಟರ್ ಒಡೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಅಡುಗೆ ಮನೆಗೆ ನುಗ್ಗಿ ಸಿಲಿಂಡರ್‌ನಿಂದ ಬೆಂಕಿ ಹಚ್ಚಲು ಮುಂದಾಗಿದ್ದಾರಂತೆ. ಈ ಎಲ್ಲಾ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಎಂದು ಗಾಯಗೊಂಡಿರುವ ಶ್ರೀಶೈಲ ಕಳ್ಳಿಮಠ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಡಾಬಾ ಮಾಲೀಕ ಶ್ರೀ ಶೈಲ ಅವರಿಗೆ ಕರೆ ಮಾಡಿದ್ದ ಪಿಎಸ್‌ಐ ಅರವಿಂದ ಅಂಗಡಿ, ಕಾಜು ಮಸಾಲಾ ಪಾರ್ಸೆಲ್ ಮಾಡು ಹೊರಗಡೆ ಇದ್ದೀನಿ ಅಂದಿದ್ದನಂತೆ. ಈ ವೇಳೆ ನಾನು ಹೊರಗಡೆ ಇದ್ದೀನಿ ಡಾಬಾಕ್ಕೆ ಹೋಗಿ ಪಾರ್ಸೆಲ್ ಸಿಗುತ್ತೆ ಅಂದಿದ್ದಾರೆ. ಇದೇ ಕೋಪ ಇಟ್ಟುಕೊಂಡು ಪಿಎಸ್ಐ ನನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ ಅಂತಾ ಶ್ರೀಶೈಲ ಆರೋಪಿಸಿದ್ದಾರೆ. ಇದರಲ್ಲಿ ಯಾವುದು ಸತ್ಯ, ಸುಳ್ಳು ಅನ್ನುವುದು ಪ್ರಾಮಾಣಿಕ ತನಿಖೆ ನಡೆದರೆ ಗೊತ್ತಾಗಲಿದೆ. ಆದರೆ ಅರವಿಂದ ಅಂಗಡಿ ವರ್ತನೆ ಗಮನಿಸಿದರೆ, ಈ ವ್ಯಕ್ತಿ ಶಿಸ್ತಿನ ಮಾರ್ಗದಿಂದ ಪೊಲೀಸ್ ಇಲಾಖೆ ಸೇರಿದಂತೆ ಕಾಣಿಸುತ್ತಿಲ್ಲ. ಆದ್ಯಾವುದೋ ಅಡ್ಡ ಮಾರ್ಗದಿಂದಲೇ ಬಂದಿರಬೇಕು.
Discussion about this post