ನೂಪುರ್ ಶರ್ಮ ( nupur sharma ) ಹೇಳಿಕೆ ಬೆನ್ನಲ್ಲೇ ಎದ್ದಿರುವ ವಿವಾದ ನಿಲ್ಲುವ ಲಕ್ಷಣಗಳಿಲ್ಲ. ಅಲ್ಲಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಪ್ರಕರಣ ವರದಿಯಾಗುತ್ತಿದ್ದು, ಈ ನಡುವೆ ಮಣಿಮೇಕಲೈಗೆ ಕಾಳಿ ಚಿತ್ರದ ಮೂಲಕ ಬಹುಸಂಖ್ಯಾತರ ನಂಬಿಕೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿದ್ದಾರೆ
ಜೈಪುರ : ಪ್ರವಾದಿ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ( nupur sharma) ಶಿರಚ್ಛೇದ ಮಾಡಿದವರಿಗೆ ನನ್ನ ಆಸ್ತಿ ನೀಡುತ್ತೇನೆ ಎಂದು ವಿಡಿಯೋ ಮೂಲಕ ಘೋಷಿಸಿದ್ದ ಅಜ್ಮೇರ್ ದರ್ಗಾದ ಮುಖ್ಯ ವ್ಯವಸ್ಥಾಪಕ ಸಲ್ಮಾನ್ ಚಿಸ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಚಿಸ್ತಿ ಕನ್ನಯಲಾಲ್ ಹತ್ಯೆಗೂ ಮುನ್ನ ಈ ವಿಡಿಯೋ ಮಾಡಿದ್ದು, ತಡವಾಗಿ ಇಂಟರ್ ನೆಟ್ ಗೆ ಅಪ್ ಲೋಡ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ವಿಡಿಯೋ ವೈರಲ್ ಆಯ್ತು, ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಇದೀಗ ಮಂಗಳವಾರ ತಡರಾತ್ರಿ ಖಾದಿ ಮೊಹಲ್ಲಾದಲ್ಲಿರುವ ನಿವಾಸದಿಂದ ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ಚಾಮರಾಜಪೇಟೆ ಬಂದ್ ಮಾಡಿಸಿದ್ರೆ ಕಠಿಣ ಕ್ರಮ : ಪೊಲೀಸರ ವಾರ್ನಿಂಗ್
ನೂಪುರ್ ನಾಲಿಗೆ ತಂದ್ರೆ 2 ಕೋಟಿ : ಹರಿಯಾಣದ ವ್ಯಕ್ತಿ ಘೋಷಣೆ
ಹರಿಯಾಣ : ಅಜ್ಮೇರ್ ದರ್ಗಾದ ಮುಖ್ಯಸ್ಥನ ಬಂಧನದ ಬೆನ್ನಲ್ಲೇ, ಹರಿಯಾಣದ ವ್ಯಕ್ತಿಯೊಬ್ಬ ನೂಪುರ್ ನಾಲಿಗೆ ತಂದ್ರೆ 2 ಕೋಟಿ ಬಹುಮಾನ ಕೊಡುವುದಾಗಿ ಘೋಷಿಸಿದ್ದಾನೆ. ಹರಿಯಾಣದ ಮೇವಾತ್ ನ ವ್ಯಕ್ತಿ ಈ ಘೋಷಣೆ ಮಾಡಿದ್ದು ವಿಡಿಯೋ ವೈರಲ್ ಆಗಿದೆ. ಇದೀಗ ಈ ಆರೋಪಿಗಾಗಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ : ಮಗಳ ಸಾವಿನ ಬೆನ್ನಲ್ಲೇ ಮಗನನ್ನೂ ಕಳೆದುಕೊಂಡ ಮೊಳಕಾಲ್ಮೂರು ಮಾಜಿ ಶಾಸಕ
ಕಾಳಿ ಚಿತ್ರ ನಿರ್ಮಾಪಕಿ ಅರ್ಚಕನಿಂದ ಶಿರಚ್ಛೇದದ ಬೆದರಿಕೆ
ಆಯೋಧ್ಯೆ : ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಆಡುತ್ತದೆ. ಕಾನೂನಿನ ಭಯವಿಲ್ಲದ ಮಂದಿ ಇದೀಗ ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ನೂಪುರ್ ಶರ್ಮಾ ವಿರೋಧಿಸಿ ಮಾತನಾಡಿದವರ ಬೆನ್ನಲ್ಲೇ, ಕಾಳಿ ಚಿತ್ರದ ಪೋಸ್ಟರ್ ಕುರಿತ ಹೊಸ ವಿವಾದ ಸೃಷ್ಟಿಯಾಗಿದೆ.
ನಿರ್ಮಾಪಕಿ ಮಣಿಮೇಕಲೈ ಕಾಳಿಮಾತೆ ಕೈಯಲ್ಲಿ ಸಿಗರೇಟ್ ಹಿಡಿದಿರುವ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಆಸ್ತಿಕರ ನಂಬಿಕೆಗೆ ಧಕ್ಕೆ ತಂದಿದ್ದಾರೆ. ಈ ಪೋಸ್ಟರ್ ಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಗಳು ದಾಖಲಾಗಿವೆ.
ಇದರ ಬೆನ್ನಲ್ಲೇ ಆಯೋಧ್ಯೆ ಹನುಮಾನಗಢಿ ದೇವಸ್ಶಾನದ ಅರ್ಚಕ ನಿರ್ಮಾಪಕಿ ಮಣಿಮೇಕಲೈಗೆ ಬೆದರಿಕೆ ಹಾಕಿದ್ದು, ದೇಹದಿಂದ ತಲೆ ಬೇರ್ಪಡಿಸುವೆ ಅಂದಿದ್ದಾರೆ.
ಬಾದಾಮಿಯಲ್ಲಿ ಸೋಲು ಭೀತಿ ಕೋಲಾರಕ್ಕೆ ಸಿದ್ದರಾಮಯ್ಯ ವಲಸೆ
ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ( Siddaramaiah ) ರಾಜಕೀಯ ಹಿಡಿತ ಕಳೆದುಕೊಂಡಿದ್ದಾರೆಯೇ ಅನ್ನುವ ಅನುಮಾನ ಶುರುವಾಗಿದೆ. ಕಳೆದ ಬಾರಿ ತಮ್ಮದೇ ಭದ್ರಕೋಟೆ ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ ಬಾದಾಮಿಯಲ್ಲಿ ಪ್ರಯಾಸದ ಗೆಲುವು ಸಾಧಿಸಿದ್ದರು. ಮುಂದಿನ ಚುನಾವಣೆಯಲ್ಲಿ ಬಾದಾಮಿ ಕೂಡಾ ಅವರಿಗೆ ಸೇಫ್ ಅಲ್ಲ ಅನ್ನಿಸಿದೆ.
ಬೆಂಗಳೂರು : ಸಿದ್ದರಾಮಯ್ಯ ಅಂದ್ರೆ ಮೈಸೂರು, ಮೈಸೂರು ಅಂದ್ರೆ ಸಿದ್ದರಾಮಯ್ಯ ಅನ್ನುವ ಕಾಲ ಹೊರಟು ಹೋಗಿದೆ. ಈಗ್ಲೂ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತಾರೆ. ಆದರೆ ಸಿದ್ದರಾಮಯ್ಯ ಅವರಿಗೆ ಸುಲಭದಲ್ಲಿ ಗೆಲುವು ಸಾಧಿಸಬಹುದಾದ ಕ್ಷೇತ್ರದ ಕೊರತೆ ಕಾಡುತ್ತಿದೆ. 2023ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಂಗ್ರೆಸ್ ನ ಬಣವೊಂದು ಪ್ರಯತ್ನಿಸುತ್ತಿದ್ದು, ಹೀಗಾಗಿ ಸೇಫ್ ಕ್ಷೇತ್ರದ ಹುಡುಕಾಟ ಮುಂದುವರಿದಿದೆ.
ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರದಲ್ಲಿ ಗೆಲ್ಲುವುದು ಸುಲಭವಿಲ್ಲ. ಕಳೆದ ಬಾರಿ ಬಾದಾಮಿಯಲ್ಲಿ ಗೆಲ್ಲಬೇಕಾದರೆ ಪಟ್ಟ ಶ್ರಮ ಯಾರಿಗೂ ಬೇಡ. ಸಿದ್ದರಾಮಯ್ಯರಂತಹ ನಾಯಕರು ಅಲ್ಲಿ ನೀರು ಕುಡಿದಷ್ಟೇ ಸಲೀಸಾಗಿ ಗೆಲ್ಲಬೇಕಿತ್ತು. ಆದರೆ ಹಾಗಾಗಿಲ್ಲ. ಈ ಕಾರಣದಿಂದ ಸಿದ್ದರಾಮಯ್ಯ ಇದೀಗ ವಲಸೆ ಮೂಡ್ ನಲ್ಲಿದ್ದಾರೆ.
ಚಾಮರಾಜಪೇಟೆಯಲ್ಲಿ ಜಮೀರ್ ಸೀಟು ಬಿಟ್ಟು ಕೊಡ್ತಾರೆ, ಸುಲಭವಾಗಿ ಗೆಲ್ಲಬಹುದು ಅನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಯಾಕೋ ಸಿದ್ದರಾಮಯ್ಯನವರೇ ಈ ಬಗ್ಗೆ ಮನಸ್ಸು ಮಾಡಿಲ್ಲ. ಈ ನಡುವೆ ಸಿದ್ದರಾಮಯ್ಯನವರು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಅನ್ನುವ ಮಾತುಗಳು ಕೇಳಿ ಬಂದಿದೆ.
ಇದಕ್ಕೆ ಪೂರಕವಾಗಿ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ಕೋಲಾರಕ್ಕೆ ಬನ್ನಿ ಎಂದು ಆಹ್ವಾನಿಸಿದ್ದಾರೆ. ಇದಕ್ಕೆ ತಾತ್ವಿಕ ಒಪ್ಪಿಗೆಯನ್ನೂ ಸಿದ್ದರಾಮಯ್ಯ ಕೊಟ್ಟಿದ್ದಾರೆ. ಈ ಸಂಬಂಧ ಇತ್ತೀಚೆಗೆ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್,ಕೃಷ್ಣ ಬೈರೇಗೌಡ, ನಜೀರ್ ಅಹಮ್ಮದ್, ಕೊತ್ತೂರು ಮಂಜುನಾಥ್, ಡಾ.ಎಂ.ಸಿ. ಸುಧಾಕರ್ ಭೇಟಿಯಾಗಿದ್ದು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.
ಕೋಲಾರದಲ್ಲಿ ಇದೀಗ ಜೆಡಿಎಸ್ ನ ಕೆ ಶ್ರೀನಿವಾಸ ಗೌಡ ಶಾಸಕರಾಗಿದ್ದಾರೆ. ಈಗಾಗಲೇ ಕಾಂಗ್ರೆಸ್ ಸೇರಿರುವ ಅವರು ತಮ್ಮ ಮಗನ ರಾಜಕೀಯ ಭವಿಷ್ಯ ಕಟ್ಟುವ ಕೆಲಸದಲ್ಲಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಬಂದ್ರೆ ಕ್ಷೇತ್ರ ಬಿಟ್ಟು ಕೊಡುವುದಾಗಿ ಹೇಳಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಸಂಭವಿಸಿದೆ. ಮತ ಬ್ಯಾಂಕ್ ಗಳು ಕೂಡಾ ಸ್ಥಾನ ಪಲ್ಲಟಗೊಂಡಿದೆ. ಬಿಜೆಪಿ ಅಲ್ಲಿ ಪ್ರಬಲವಾಗಿಲ್ಲ. ಶ್ರೀನಿವಾಸ ಗೌಡ ಅವರು ಕಾಂಗ್ರೆಸ್ ಗೆ ಬಂದ ಕಾರಣ ಜೆಡಿಎಸ್ ಕೂಡಾ ಅಲ್ಲಿ ಶಕ್ತಿಯುತವಾಗಿಲ್ಲ. ಅಲ್ಪಸಂಖ್ಯಾತ ಮತಗಳೇ ಈ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವುದು ಸಿದ್ದರಾಮಯ್ಯ ಅವರಿಗೆ ಇಲ್ಲಿ ಗೆಲುವು ಕಷ್ಟವಲ್ಲ ಅನ್ನಲಾಗಿದೆ.
Discussion about this post