ಚಾಮರಾಜನಗರ ಆಟದ ಮೈದಾನ ವಿವಾದ ಇದೀಗ ರಾಜಕೀಯವಾಗಿದೆ. ಈ ನಡುವೆ ಕೆಲ ಸಂಘಟನೆಗಳು ಜುಲೈ 12 ರಂದು ಚಾಮರಾಜಪೇಟೆ ಬಂದ್ ( Chamarajpet bandh) ಮಾಡಲು ಕರೆ ಕೊಟ್ಟಿದೆ. ಇದೀಗ ಈ ಬಗ್ಗೆ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ
ಬೆಂಗಳೂರು : ಚಾಮರಾಜಪೇಟೆಯ ಆಟದ ಮೈದಾನವನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದರ ವಿರುದ್ಧ ಹೋರಾಟ ತೀವ್ರಗೊಂಡಿದೆ. ಆಟದ ಮೈದಾನವನ್ನು ಆಟದ ಮೈದಾನವಾಗಿಯೇ ಬಿಡಿ ಅನ್ನು ಒತ್ತಾಯ ತೀವ್ರವಾಗಿದೆ. ( Chamarajpet bandh) ಕೆಲ ದಿನಗಳ ಹಿಂದೆ ಹಲವು ಸಂಘಟನೆಗಳು ಸಭೆಯೊಂದನ್ನು ನಡೆಸಿದ್ದು, ಜಮೀರ್ ವಿರುದ್ಧ ಆಕ್ರೋಶವನ್ನು ಹೊರ ಹಾಕುವುದರ ಜೊತೆಗೆ ಆಟದ ಮೈದಾನವನ್ನು ಆಟದ ಮೈದಾನವಾಗಿಯೇ ಉಳಿಸಿ ಎಂದು ಆಗ್ರಹಿಸಿತ್ತು.
ಚಾಮರಾಜಪೇಟೆ ಆಟದ ಮೈದಾನವನ್ನು ವಕ್ಫ್ ಗೆ ಕೊಡುವ ಪ್ರಯತ್ನವನ್ನು ಖಂಡಿಸಿದ್ದ ಈ ಸಭೆ ಜುಲೈ 12 ರಂದು ಚಾಮರಾಜಪೇಟೆ ( Chamarajpet) ಬಂದ್ ನಡೆಸಲು ತೀರ್ಮಾನಿಸಿತ್ತು. ಅಂದು ದೊಡ್ಡ ಮಟ್ಟದಲ್ಲಿ ಮೆರವಣಿಗೆ ನಡೆಸಲು ನಿರ್ಧರಿಸಲಾಗಿತ್ತು.
ಇದನ್ನು ಓದಿ : ಚಂದ್ರಶೇಖರ ಗುರೂಜಿ ಅಂತ್ಯಸಂಸ್ಕಾರ ಮುಗಿಸಿ ಮರಳುತ್ತಿದ್ದ ಶ್ರೀಗಳ ಕಾರು ಅಪಘಾತ
ಈಗ ಬಂದ್ ಕುರಿತಂತೆ ಪೊಲೀಸರು ಹೋರಾಟಗಾರರಿಗೆ ಎಚ್ಚರಿಕೆ ನೀಡಿದ್ದು, ಜುಲೈ 12 ರಂದು ಬಂದ್ ಮಾಡಲು ಅನುಮತಿ ಕೊಡಲು ಸಾಧ್ಯವಿಲ್ಲ ಎಂದು ಚಾಮರಾಜಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ತಿಳುವಳಿಕೆ ಪತ್ರ ಹೊರಡಿಸಿದ್ದಾರೆ.
ಹೈಕೋರ್ಟ್ ರಿಟ್ ಅರ್ಜಿ ಸಂಖ್ಯೆ 5781/2021 ರ ಪ್ರಕಾರ ಬೆಂಗಳೂರು ನಗರದಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೆಂಗಳೂರು ನಗರದ ಯಾವುದೇ ಭಾಗದಲ್ಲಿ ಪ್ರತಿಭಟನೆ, ಮುಷ್ಕರ, ಮೆರವಣಿಗೆ ನಡೆಸುವಂತಿಲ್ಲ. ಹೀಗಾಗಿ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಫ್ರೀಡಂ ಪಾರ್ಕ್ ನಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆದು ಪ್ರತಿಭಟನೆ ನಡೆಸಬಹುದಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಪ್ರತಿಭಟನೆ, ಮುಷ್ಕರ ನಡೆಸಿದರೆ ತಮ್ಮ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮಗಳ ಸಾವಿನ ಬೆನ್ನಲ್ಲೇ ಮಗನನ್ನೂ ಕಳೆದುಕೊಂಡ ಮೊಳಕಾಲ್ಮೂರು ಮಾಜಿ ಶಾಸಕ
20 ವರ್ಷಗಳ ಹಿಂದೆ ತಿಪ್ಪೇಸ್ವಾಮಿ ಪುತ್ರಿಯನ್ನು ಕಳೆದುಕೊಂಡಿದ್ದರು. ಇದೀಗ ಪುತ್ರನನ್ನು ( Molakalmur Tippeswamy son) ಕಳೆದುಕೊಂಡ ನೋವು
ಚಿತ್ರದುರ್ಗ : ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ನೆರ್ಲಗುಂಟೆ ಎನ್. ತಿಪ್ಪೇಸ್ವಾಮಿ ಪುತ್ರ ಶಿವಕುಮಾರ್ ಬುಧವಾರ ಮೃತಪಟ್ಟಿದ್ದಾರೆ. 32 ವರ್ಷದ ಶಿವಕುಮಾರ್ ( Molakalmur Tippeswamy son ) ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದರು. ತಮ್ಮ ಆರೋಗ್ಯ ಸುಧಾರಣೆ ಸಲುವಾಗಿ ಬೆಂಗಳೂರು, ದಾವಣಗೆರೆ, ಚಿತ್ರದುರ್ಗದಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಚಿತ್ರದುರ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತ ಪಟ್ಟಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ತಿಪ್ಪೇಸ್ವಾಮಿ ಟಿಕೆಟ್ ವಂಚಿತರಾಗಿದ್ದರು. ಶ್ರೀರಾಮುಲು ಕ್ಷೇತ್ರಕ್ಕೆ ವಲಸೆ ಬಂದ ಕಾರಣ ತಿಪ್ಪೇಸ್ವಾಮಿ ಪಕ್ಷೇತರರಾಗಿ ಸ್ಪರ್ಧಿಸಿ ಭಾರೀ ಅಂತರದಿಂದ ಸೋಲು ಕಂಡಿದ್ದರು. ಈ ವೇಳೆ ತಂದೆಯ ಗೆಲುವಿಗಾಗಿ ಶಿವಕುಮಾರ್ ಸಿಕ್ಕಾಪಟ್ಟೆ ಶ್ರಮಿಸಿದ್ದರು.
ತಂದೆಯ ರಾಜಕೀಯ ಭವಿಷ್ಯಕ್ಕಾಗಿ ಓಡಾಡುತ್ತಿದ್ದ ಶಿವಕುಮಾರ್ ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿದ್ದರು. ವಿಧಿಯಾಟ ಅಂದ್ರೆ 20 ವರ್ಷಗಳ ಹಿಂದೆ ತಿಪ್ಪೇಸ್ವಾಮಿ ಪುತ್ರಿಯೊಬ್ಬಳನ್ನು ಕಳೆದುಕೊಂಡಿದ್ದರು. ಇದೀಗ ಪುತ್ರ ಶೋಕ. ಇಬ್ಬರೂ ಮಕ್ಕಳನ್ನು ಕಳೆದುಕೊಂಡು ತಿಪ್ಪೇಸ್ವಾಮಿ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
Discussion about this post