ಡಾ.ರಾಜ್ ಮೊಮ್ಮಗಳ ಚೊಚ್ಚಲ ಚಿತ್ರ ನಿನ್ನ ಸನಿಹಕೆ ಚಿತ್ರವನ್ನು ಸಿ.ಎಂ ಬಸವರಾಜ್ ಬೊಮ್ಮಾಯಿ ವೀಕ್ಷಿಸಲಿದ್ದಾರೆ. ಈ ಸಲುವಾಗಿ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಪಿ.ವಿ.ಆರ್ ಒರಾಯಾನ್ ಮಾಲ್ ನಲ್ಲಿ ಗುರುವಾರ ಸಂಜೆ 7 ಗಂಟೆಗೆ ಪ್ರಿಮಿಯರ್ ಶೋ ಕೂಡಾ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಟುಂಬ ಸೇರಿದಂತೆ ಇಡೀ ಚಿತ್ರರಂಗದ ಗಣ್ಯಾತಿಗಣ್ಯರು ಭಾಗಿಯಾಗಲಿದ್ದು, ಸಿ.ಎಂ ಬಸವರಾಜ್ ಬೊಮ್ಮಾಯಿಯವರ ಭೇಟಿ ಮಾಡಿದ ನಿನ್ನ ಸನಿಹಕೆ ಚಿತ್ರತಂಡ ಪ್ರಿಮಿಯರ್ ಶೋಗೆ ಆಹ್ವಾನಿಸಿತು.

ಈ ವೇಳೆ ಚಿತ್ರ ನಾಯಕ ನಟ ಹಾಗೂ ನಿರ್ದೇಶಕ ಸೂರಜ್ ಗೌಡ, ನಾಯಕಿ ಧನ್ಯ ರಾಮ್ ಕುಮಾರ್, ನಿರ್ಮಾಪಕರಾದ ಅಕ್ಷಯ್ ರಾಜಶೇಖರ್, ರಂಗನಾಥ್ ಕೂಡ್ಲಗಿ ಉಪಸ್ಥಿತರಿದ್ದರು.
ಇದೇ ಶುಕ್ರವಾರ ರಾಜ್ಯದಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಿನ್ನ ಸನಿಹಕೆ ಚಿತ್ರ ತೆರೆಗೆ ಬರಲಿದೆ.

Discussion about this post