ಹೊಸದೆಹಲಿ : ವಿಶ್ವದಲ್ಲಿ ಕೊರೋನಾ ಸೋಂಕು ಅಬ್ಬರ ತಗ್ಗಿತ್ತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೊಂದು ಆತಂಕದ ಸುದ್ದಿ ಬಂದಿದೆ. ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಪತ್ತೆಯಾಗಿರುವ ಹೊಸ ತಳಿ ಆತಂಕ ಸೃಷ್ಟಿಸಿದೆ. ಹೊಸ ರೂಪಾಂತರಿ ತಳಿ ಅತ್ಯಂತ ವೇಗವಾಗಿ ಹರಡುವ ಗುಣ ಹೊಂದಿದ್ದು, ಭಾರತದಲ್ಲಿ ಮೂರನೇ ಅಲೆಯಗೆ ಇದು ಕಾರಣವಾಗುವ ಸಾಧ್ಯತೆಗಳಿದೆ.
ಈಗಾಗಲೇ AY4.2 ಹೆಸರಿನ ಹೊಸ ರೂಪಾಂತರಿ ತಳಿ ಈಗಾಗಲೇ ಚೀನಾ, ರಷ್ಯಾ, ಜರ್ಮನಿಯಲ್ಲಿ ಕೊರೋನಾ ಏರಿಕೆಗೆ ಕಾರಣವಾಗಿದೆ. ಈಗಿನ ಸಂಶೋಧನೆ ಪ್ರಕಾರ ಡೆಲ್ಟಾ ರೂಪಾಂತರಿಗಿಂತಲೂ ಅಪಾಯಕಾರಿ ಎಂದು ಗೊತ್ತಾಗಿದ್ದು, ಬ್ರಿಟನ್ ನಲ್ಲಿ ಇದನ್ನು variant under investigation ಎಂದು ಘೋಷಿಸಲಾಗಿದೆ.
ಈಗಾಗಲೇ ಬ್ರಿಟನ್ ನಲ್ಲಿ 68 ಸಾವಿರ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
Discussion about this post