ಕಾನ್ಪುರ : ಮುಖ ನೋಡಿ, ವ್ಯವಾಹರ ನೋಡಿ ಎಂದಿಗೂ ಅವರ ಆದಾಯವನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಸಚಿವನೊಬ್ಬ ಹವಾಯಿ ಚಪ್ಪಲಿ ಹಾಕಿಕೊಂಡು, ಗೂಡಂಗಡಿಯಲ್ಲಿ ಟೀ ಕುಡಿದ ತಕ್ಷಣ ಅವನೊಬ್ಬ ಸಾಚಾ ರಾಜಕಾರಣಿ ಎಂದು ಕರೆಯುವಂತಿಲ್ಲ. ಹಾಗೇ ಪಾನ್ ಸ್ಟಾಲ್ ಇಟ್ಟವರು, ಚಾಟ್ ಮಾರಾಟ ಮಾಡುವವರು ಬಡವರು ಎಂದು ಹೇಳುವ ಹಾಗಿಲ್ಲ. ಯಾಕಂದ್ರೆ ಆದಾಯ ತೆರಿಗೆ ಇಲಾಖೆಯ ಸಮೀಕ್ಷೆಯೊಂದು ಶಾಕ್ ಕೊಟ್ಟಿದೆ.
ಕಾನ್ಪುರದ 250ಕ್ಕೂ ಅಧಿಕ ಪಾನ್, ಸಮೋಸಾ ಹಾಗೂ ಚಾಟ್ ಮಾರಾಟಗಾರರು ಕೋಟ್ಯಧಿಪತಿಗಳು ಎಂದು ಆದಾಯ ತೆರಿಗೆ ಇಲಾಖೆಯ ಸಮೀಕ್ಷೆ ಹೇಳಿದೆ ಕಾನ್ಪುರದ ಫುಟ್ ಪಾತ್ ಗಳಲ್ಲಿ ತಿಂಡಿ ತಿನಿಸು ಮಾರಾಟ ಮಾಡುವ 256 ಜನ ಕೋಟ್ಯಧಿಪತಿಗಳು ಎಂದು ಉತ್ತರ ಪ್ರದೇಶದ ಆದಾಯ ತೆರಿಗೆ ಇಲಾಖೆಯೇ ಹೇಳಿದೆ. ಅಚ್ಚರಿ ಏನ್ ಗೊತ್ತಾ ಕಾನ್ಪುರದ ರಸ್ತೆಗಳಲ್ಲಿ ಚಿಂದಿ ಆಯುವ ಕೆಲವರು ಮೂರಕ್ಕಿಂತ ಹೆಚ್ಚು ಕಾರುಗಳನ್ನು ಹೊಂದಿದ್ದಾರಂತೆ.
ಇನ್ನು ಎರಡು ವರ್ಷಗಳ ಹಿಂದೆ ನಗರದ ಚಿಂದಿ ವ್ಯಾಪಾರಿಯೊಬ್ಬರು 10 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾರೆ. ಇನ್ನು ಆರ್ಯ ನಗರ, ಸ್ವರೂಪ್ ನಗರ ಮತ್ತು ಬಿರ್ಹಾನ ರಸ್ತೆಯಲ್ಲಿರುವ ಪಾನ್ ಅಂಗಡಿಗಳ ಮಾಲೀಕರು ಕೊರೋನಾ ಸಂಕಷ್ಟ ಕಾಲದಲ್ಲಿ 5 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಖರೀದಿಸಿದ್ದಾರಂತೆ.
ಹೀಗೆ ಆದಾಯ ತೆರಿಗೆ ಇಲಾಖೆಯ ಸಮೀಕ್ಷೆಯ ಪ್ರತೀ ಪುಟದ ವರದಿಯೂ ಅಚ್ಚರಿ ಅಚ್ಚರಿ ಮೂಡಿಸಿದೆ.
Discussion about this post