ಕರ್ನಾಟಕ ಪೊಲೀಸ್ ಅಂದ್ರೆ ಹೆಮ್ಮೆ. ಆದರೆ ಇತ್ತೀಚಿನ ದಿನಗಳಲ್ಲಿ ಶಿಸ್ತಿಗೆ ಹೆಸರಾದ ಇಲಾಖೆಗೆ ಕಳಂಕ ತಂದವರ ಸಂಖ್ಯೆಯೇ ಹೆಚ್ಚು. ಹಾಗಂತ ಶಿಸ್ತಿನ ಇಲಾಖೆಯ ಗೌರವ ಉಳಿಸಿದವರಿಲ್ಲವೇ ಖಂಡಿತಾ ಇದ್ದಾರೆ. ಅದರಲ್ಲೊಂದು ಹೆಸರು ಪಿಎಸ್ಐ ಶಾಂತಪ್ಪ (mobile toilet Shanthappa PSI )
ಅದು ಫೆಬ್ರವರಿ 4, ವಿಧಾನಸೌಧ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ಶಾಂತಪ್ಪ ( mobile toilet Shanthappa PSI ) ತನ್ನ ತಾಯಿಯ ಜೊತೆ ಬಳ್ಳಾರಿಗೆ ಹೊರಟಿದ್ದರು. ಈ ವೇಳೆ ಗೊರಗುಂಟೆ ಪಾಳ್ಯದಲ್ಲಿ ಬಸ್ ಗಾಗಿ ಕಾಯುತ್ತಿದ್ದ ವೇಳೆ ತಾಯಿ ಮೂತ್ರ ವಿಸರ್ಜನೆ ಸಲುವಾಗಿ ಜಾಗ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ನಿಜಕ್ಕೂ ಗಾಬರಿ ಬೀಳುವ ಪರಿಸ್ಥಿತಿ ಶಾಂತಪ್ಪ ( psi shantappa ) ಅವರದ್ದು. ಅವತ್ತು ಹೇಗೋ ಪರಿಸ್ಥಿತಿಯನ್ನು ನಿಭಾಯಿಸಿದ್ರು. ಆದರೆ ನನ್ನ ತಾಯಿಯಂತೆ ಅದೆಷ್ಟು ಹೆಣ್ಣು ಮಕ್ಕಳು ಸಂಕಷ್ಟಪಡುತ್ತಿರಬಹುದು ಅನ್ನುವ ವ್ಯಥೆ ಕಾಡಿದೆ.
ಪುರುಷರು ಗೋಡೆ ಬದಿಗೆ ಹೋಗಬಹುದು ಮಹಿಳೆಯರು ಹೋಗಲು ಸಾಧ್ಯವೇ ಅನ್ನುವುದು ಮನದಟ್ಟಾಗುತ್ತಿದ್ದಂತೆ, ಶೌಚಾಲಯ ಕಟ್ಟಿಕೊಡಿ ಅನ್ನುವ ಆಂದೋಲನವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭಿಸಿದ್ದಾರೆ. ಆದರೆ ಈ ಜಡ್ಡು ಗಟ್ಟಿದ, ಕಿವುಡಾದ ವ್ಯವಸ್ಥೆಗೆ ಈ ಮನವಿ ಕೇಳಿದ್ರೆ ಹೇಳಿ. ದೊಡ್ಡ ದೊಡ್ಡ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಶೌಚಾಲಯದ ಅಗತ್ಯ ಮತ್ತು ಅದರ ಅರಿವಿಯೇ ಇರುವುದಿಲ್ಲ ಅಂದ ಮೇಲೆ ಶಾಂತಪ್ಪ ( psi shantappa ) ಅವರ ಮನವಿ ಕೇಳಲು ಸಾಧ್ಯವೇ. ಬಿಬಿಎಂಪಿ ಅಧಿಕಾರಿಗಳಾಗಲಿ, ಸ್ಥಳೀಯ ಶಾಸಕ ಮುನಿರತ್ನರಾಗಲಿ ಕ್ಯಾರೇ ಅನ್ನಲಿಲ್ಲ. ಓಟು ಬಂದಾಗ ಜನರ ಬಕ್ರ ಮಾಡಲು ಅವರಿಗೆ ಗೊತ್ತಿರುತ್ತದೆ ಬಿಡಿ.
ಇದನ್ನೂ ಓದಿ : Fake call center in bangalore : ಬೆಂಗಳೂರಿನಲ್ಲಿ ಕೂತು ವಿಶ್ವದ ದೊಡ್ಡಣ್ಣನಿಗೆ ವಂಚನೆ : ನಕಲಿ ಕಾಲ್ ಸೆಂಟರ್ ನ ಅಸಲಿ ಕಹಾನಿ
100 ದಿನಗಳ ಕಾಲ ಅಭಿಯಾನ ನಡೆಸಿ ಸೋತ ಪಿಎಸ್ಐ ಶಾಂತಪ್ಪ (psi shantappa) ಸುಮ್ಮನಾಗಲಿಲ್ಲ. ಬದಲಾಗಿ ತಮ್ಮ ಆಪ್ತರ ಸಹಾಯ ಕೇಳಿದರು. ಸರ್ಕಾರಿ ವ್ಯವಸ್ಥೆಯಂತೆ ಯಾರೊಬ್ಬರೂ ಕೈ ಎತ್ತಲಿಲ್ಲ. ಬದಲಾಗಿ ಕೈ ಜೋಡಿಸಿದರು. ಹೀಗಾಗಿ ಮೊಬೈಲ್ ಶೌಚಾಲಯವೊಂದು ಸಿದ್ದವಾಯ್ತು. ಇದೀಗ ಗೊರಗುಂಟೆಪಾಳ್ಯದ ತಂಗುದಾಣಕ್ಕೆ ಹೊಂದಿಕೊಂಡ ಜಾಗದಲ್ಲಿ ಮೊಬೈಲ್ ಶೌಚಾಲಯ ನಿಲ್ಲಿಸಲಾಗಿದ್ದು, ಒಟ್ಟು 10 ಶೌಚಗೃಹಗಳು ಈ ವಾಹನದಲ್ಲಿದೆ. ಇದಕ್ಕೆ ನೀರಿನ ವ್ಯವಸ್ಥೆಯೂ ಇದರಲ್ಲೇ ಇದ್ದು, ಶೌಚಾಲಯ ತುಂಬಿದ ನಂತ್ರ ಇದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆಯೂ ಇದರಲ್ಲಿದೆ. ಶೌಚಾಲಯ ನಿರ್ವಹಣೆ ಜವಾಬ್ದಾರಿಯನ್ನು ಕೆಲ ಸ್ವಯಂ ಸೇವಕರೇ ವಹಿಸಿಕೊಂಡಿದ್ದಾರೆ.
ಇಂತಹುದೊಂದು ಕಾರ್ಯದ ಬಳಿಕ ಬಿಬಿಎಂಪಿ ಕಮಿಷನರ್ ಶಾಂತಪ್ಪ ಅವರನ್ನು ಕರೆಸಿ ಅಭಿನಂದಿಸಿದ್ದಾರೆ. ಮಾನ್ಯ ಗೃಹ ಸಚಿವರು ಭೇಷ್ ಅಂದಿದ್ದಾರೆ. ಆದರೆ ಯಾರೊಬ್ಬರೂ ಶೌಚಾಲಯ ಕಟ್ಟಿಸುವ ಭರವಸೆ ನೀಡಿಲ್ಲ.
ಇದನ್ನು ಓದಿ : Bigg Boss kannada : Drone Prathap ಬಿಗ್ ಬಾಸ್ ಮನೆಗೆ : ಮಹಾಮನೆಯಲ್ಲಿ ಇನ್ನೇನು ಕಾದಿದೆಯೋ
ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಕನಸನ್ನು ಜಾರಿ ಮಾಡಲು ಪಿಎಸ್ಐ ಒಬ್ಬರು ಶ್ರಮಿಸಿರುವುದು ನಿಜಕ್ಕೂ ಒಳ್ಳೆಯ ಕೆಲಸ. ಆದರೆ ಅದೇ ಮೋದಿಯವರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಮೋದಿಯವರ ಕೆಲಸ ನೋಡಿ ಬಿಜೆಪಿ ಸೇರಿದ ಮುನಿರತ್ನ ಶೌಚಾಲಯ ಕಟ್ಟಿಕೊಡಿ ಅನ್ನುವ ಮನವಿಯನ್ನು ಕಡೆಗಣಿಸಿದ್ದು ವ್ಯವಸ್ಥೆಗೆ ಹಿಡಿದ ಕೈಗನ್ನಡಿ.
ಅಂದ ಹಾಗೇ psi shantappa ಅವರ ಸಮಾಜ ಸೇವೆ ಹೊಸದೇನಲ್ಲ. ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿದ್ದ ಸಂದರ್ಭದಲ್ಲಿ ಅದೆಷ್ಟೋ ಮಕ್ಕಳ ಎಜುಕೇಶ್ ಸೇರಿದಂತೆ ಬಡ ಕುಟುಂಬದ ಬದುಕು ಹಸನುಗೊಳಿಸುವಲ್ಲಿ ಶ್ರಮವಹಿಸಿದ್ದಾರೆ. ಹೀಗೆ ಅವರ ಸಮಾಜ ಸೇವೆಯ ಪಟ್ಟಿ ನೋಡಿದರೆ ಪೊಲೀಸ್ ಇಲಾಖೆ ಇಂತಹ ಹೃದಯವಂತರು ಇನ್ನೂ ಇದ್ದಾರೆಯೇ ಅನ್ನುವ ಪ್ರಶ್ನೆ ಖಂಡಿತಾ ಬರುತ್ತದೆ.
ಸತ್ಕಾರ ಮಾಡಲು ಹೋದಾಗ ಸಮಸ್ಯೆ ಖಂಡಿತಾ ಎಂದು ಅರಿತಿರುವ ಶಾಂತಪ್ಪ ಅವರ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಯಾರಾದ್ರೂ ತಿಳಿಸಿದ್ರೆ ಪುಣ್ಯ ಬರುತ್ತದೆ.
Bigg Boss kannada : Drone Prathap ಬಿಗ್ ಬಾಸ್ ಮನೆಗೆ : ಮಹಾಮನೆಯಲ್ಲಿ ಇನ್ನೇನು ಕಾದಿದೆಯೋ
ಈ ಬಾರಿ ಕನ್ನಡದಲ್ಲಿ ಎರಡೆರಡು Bigg Boss ಕಾರ್ಯಕ್ರಮ ಮೂಡಿಬರಲಿದೆ. ಮೊದಲು ಮಿನಿ ಸೀಸನ್ ( bigg boss mini season) ನಡೆದರೆ ಬಳಿಕ ಮಹಾ ಸೀಸನ್ ನಡೆಯಲಿದೆ. ಈ ಬಾರಿಯೂ ಕಿಚ್ಚ ಸುದೀಪ್ ( kiccha sudeep ) ಕಾರ್ಯಕ್ರಮ ನಡೆಸಿಕೊಡಲಿದ್ದಾರೆ
ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಬಿಗ್ ಬಾಸ್ ( Bigg Boss kannada ) ಯಾವಾಗ ಅನ್ನುವ ಪ್ರಶ್ನೆ ಎಲ್ಲರಲ್ಲಿದೆ. ಮೊದಲು ಐಪಿಎಲ್ ಮುಗಿಯಲಿ ಆಮೇಲೆ ಬಿಗ್ ಬಾಸ್ ಶುರುವಾಗಲಿದೆ ಅನ್ನಲಾಗಿತ್ತು. ಆದಾದ ಬಳಿಕ ವಿಕ್ರಾಂತ್ ರೋಣ ( vikrant rona) ಬಿಡುಗಡೆಯ ಗಡಿಬಿಡಿಯಲ್ಲಿ ಸುದೀರ್ ( Sudeep ) ಇದ್ದಾರೆ. ಹೀಗಾಗಿ ವಿಕ್ರಾಂತ್ ರೋಣ ಬಿಡುಗಡೆಯ ನಂತರವೇ ಬಿಗ್ ಬಾಸ್ ಕನ್ನಡ ಶುರುವಾಗಲಿದೆ ಅನ್ನಲಾಗಿತ್ತು.
ಇದೀಗ ಹೊಸ ಸುದ್ದಿಯೊಂದು ಬಂದಿದ್ದು, ಬಿಗ್ ಬಾಸ್ ಕಾರ್ಯಕ್ರಮ ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾಗಲಿದೆ. ಈ ಬಾರಿ ಎರಡು ಬಿಗ್ ಬಾಸ್ ಕಾರ್ಯಕ್ರಮ ನಡೆಯಲಿದೆ. ವೂಟ್ ( voot select ) ಸಲುವಾಗಿ ಮೊದಲು ಮಿನಿ ಸೀಸನ್ ನಡೆಯಲಿದೆ. ಕಿರುತೆರೆಯ ಕೆಲ ಮಂದಿ, ಸೋಶಿಯಲ್ ಮೀಡಿಯಾದ ಕಿರಿಕ್ ಸ್ಟಾರ್ ಗಳು ಸೇರಿದಂತೆ ಕೆಲ ಅರೆಬೆಂದ ಸೆಲೆಬ್ರೆಟಿಗಳು ಪಾಲ್ಗೊಳ್ಳಲಿದ್ದಾರೆ. ಎಂದಿನಂತೆ ಇಲ್ಲಿ ವಾರಾಂತ್ಯದ ಕಾರ್ಯಕ್ರಮವನ್ನು ( kiccha sudeep ) ನಡೆಸಿಕೊಡಲಿದ್ದಾರೆ.
ಇದಾದ ಬಳಿಕ ಕಲರ್ಸ್ ವಾಹಿನಿಗಾಗಿ ಬಿಗ್ ಬಾಸ್ ಕಾರ್ಯಕ್ರಮ ನಡೆಯಲಿದೆ. ಮಿನಿ ಸೀಸನ್ ನ ಟಾಪ್ 5 ಸ್ಪರ್ಧಿಗಳ ಜೊತೆಗೆ ಸೆಲೆಬ್ರೆಟಿಗಳು ಇಲ್ಲಿ ಪಾಲು ಪಡೆಯುತ್ತಾರೆ,
ಇದೀಗ ಬಂದಿರುವ ಮಾಹಿತಿ ಪ್ರಕಾರ ಶಿವ ಪುತ್ರ, ರೂರಲ್ ರಂಜನ್ ಹಾಗೂ ಡ್ರೋಣ್ ಪ್ರತಾಪ್ ಮಿನಿ ಸೀಸನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.ಜೊತೆಗೆ ಸ್ವಯಂ ಘೋಷಿತ ಕೆಲ ಸೆಲೆಬ್ರೆಟಿ ಸ್ಟಾರ್ ಗಳ ಜೊತೆಗೆ ಮಾತುಕತೆ ಕೂಡಾ ನಡೆಯುತ್ತಿದೆ.
Discussion about this post