- Advertisement -
- Advertisement -
ಮುಂಬಯಿಯ ಸರ್ದಾರ್ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಫೆಮಿನಾ ಮಿಸ್ ಇಂಡಿಯಾ 2019- ಸ್ಪರ್ಧೆಗೆ ತೆರೆ ಬಿದ್ದಿದ್ದು, ಶನಿವಾರ ರಾತ್ರಿ ರಾಜಸ್ಥಾನದ ಸುಮನ್ ರಾವ್ ಅವರು ಮಿಸ್ ಇಂಡಿಯಾ 2019 ಆಗಿ ಹೊರ ಹೊಮ್ಮಿದ್ದಾರೆ.
ಸ್ಪರ್ಧೆಯಲ್ಲಿ ವಿಜೇತರಾದ ಸುಮನ್ ರಾವ್ ಅವರಿಗೆ 2018ರ ಮಿಸ್ ಇಂಡಿಯಾ ಅನುಕೀರ್ತಿ ವಾಸ್ ಕಿರೀಟ ತೊಡಿಸಿದರು.
ಬಿಹಾರದ ಶ್ರೇಯಾ ಶಂಕರ್ ಅವರು ಮಿಸ್ ಇಂಡಿಯಾ ಯುನೈಟೆಡ್ ಕಾಂಟಿನೆಂಟ್ಸ್ 2019 ಆಗಿ ಆಯ್ಕೆಯಾದರೆ, ಛತ್ತೀಸ್‌ಗಢದ ಶಿವಾನಿ ಜಾಧವ್ ಮಿಸ್ ಗ್ರ್ಯಾಂಡ್ ಇಂಡಿಯಾ 2019 ಆಗಿ ಹೊರಹೊಮ್ಮಿದರು. ತೆಲಂಗಾಣದ ಸಂಜನಾ ವಿಜ್ ಮಿಸ್ ಇಂಡಿಯಾ 2019 ರನ್ನರ್ ಅಪ್ ಪಟ್ಟಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
- Advertisement -