ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಂದಿದ್ದ ಕೊರೋನಾ ಇದೀಗ ನಿಧಾನವಾಗಿ ಏರಲಾರಂಭಿಸಿದೆ. ಪಾಸಿಟಿವಿಟಿ ದರ ಕರಾವಳಿ ಜಿಲ್ಲೆಯಲ್ಲಿ ಏರುತ್ತಿರುವುದನ್ನು ಗಮನಿಸಿದರೆ ಜನವರಿ ಫೆಬ್ರವರಿ ಹೊತ್ತಿಗೆ ಆತಂಕ ಕಟ್ಟಿಟ್ಟ ಬುತ್ತಿ. ಈಗಾಗಲೇ ಕೇರಳದಿಂದ ಬರೋ ವಿದ್ಯಾರ್ಥಿಗಳಲ್ಲೇ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಕಾಲೇಜುಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎನ್ನಲಾಗಿದೆ. ಹಲವು ಶಿಕ್ಷಣ ಸಂಸ್ಥೆಗಳೇ ಕ್ಲಸ್ಟರ್ ಗಳಾಗಿ ಬದಲಾಗುವ ಮುನ್ಸೂಚನೆ ದೊರೆತಿದೆ.
ಈ ನಡುವೆ ನಗರದ ಹೊರವಲಯದ ವಳಚ್ಚಿಲ್ ನಲ್ಲಿರುವ ಶ್ರೀನಿವಾಸ ನರ್ಸಿಂಗ್ ಕಾಲೇಜಿನ 10 ಮಂದಿ ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ಗುರುವಾ ಇಬ್ಬರು ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಬಂದಿದ್ದು ಶುಕ್ರವಾರ 8 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ.
ಇದನ್ನು ದಕ್ಷಿಣ ಕನ್ನಡ ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಎಚ್ ಅಶೋಕ್ ದೃಢಪಡಿಸಿದ್ದು, ಕಾಲೇಜನ್ನು containment zone ಎಂದು ಘೋಷಿಸಿ ನರ್ಸಿಂಗ್ ತರಗತಿಗಳನ್ನು ರದ್ದು ಪಡಿಸಲಾಗಿದೆ. ಇನ್ನು ಪಾಸಿಟಿವ್ ಬಂದ ಎಲ್ಲರೂ ಕೂಡಾ ಕೇರಳದವರಾಗಿದ್ದು, ಈಗಾಗಲೇ 374 ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು ವರದಿ ನಿರೀಕ್ಷಿಸಲಾಗುತ್ತಿದೆ.
ಇನ್ನು ಪಾಸಿಟಿವ್ ಬಂದ ವಿದ್ಯಾರ್ಥಿಗಳನ್ನು ಕಾಲೇಜು ಹಾಸ್ಟೆಲ್ ನಲ್ಲೇ isolated ಮಾಡಲಾಗಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಮೇಲ್ವಿಚಾರಣೆಗಾಗಿ ನೇಮಿಸಲಾಗಿದೆ. ಇದೇ ನರ್ಸಿಂಗ್ ಕಾಲೇಜು ಕ್ಯಾಂಪಸ್ ನಲ್ಲಿ ಇಂಜಿನಿಯರಿಂಗ್ ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳಿದ್ದು, ಎಚ್ಚರ ತಪ್ಪಿದರೆ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆಗಳಿದೆ.
ರಾವತ್ ಸಾವು ಸಂಭ್ರಮಿಸಿದವರ ವಿರುದ್ಧ ಕಾರ್ಯಾಚರಣೆ ಪ್ರಾರಂಭ : ಮೂವರ ಬಂಧನ
ನವದೆಹಲಿ : ಹೆಲಿಕಾಫ್ಟರ್ ದುರಂತದಲ್ಲಿ ವೀರ ಮರಣ ಹೊಂದಿದ ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸಾವನ್ನು ಸಂಭ್ರಮಿಸಿದವರ ವಿರುದ್ಧ ಕಾರ್ಯಾಚರಣೆ ಪ್ರಾರಂಭವಾಗಿದೆ. ಈಗಾಗಲೇ ಈ ದೇಶ ದ್ರೋಹಿಗಳಿಗೆ ಇನ್ಮುಂದೆ ನೆಮ್ಮದಿಯಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬಹಿರಂಗವಾಗಿಯೇ ಗುಡುಗಿದ್ದಾರೆ.
ಈ ನಡುವೆ ಬಿಪಿನ್ ರಾವತ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಮೂವರನ್ನು ಬಂಧಿಸಲಾಗಿದೆ. ರಾಜಸ್ಥಾನ, ಗುಜರಾತ್ ಮತ್ತು ಜಮ್ಮು ಕಾಶ್ಮೀರದಲ್ಲಿ ತಲಾ ಒಬ್ಬರನ್ನು ಬಂಧಿಸಲಾಗಿದೆ.
ಜಮ್ಮು ಕಾಶ್ಮೀರದ ರಜೌರಿಯಾದಲ್ಲಿ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ. ಈತನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಟೋಂಕ್ ಜಿಲ್ಲೆಯ ಜವಾದ್ ಖಾನ್ (21) ಎಂಬಾತ, ‘ ರಾವತ್ ನರಕಕ್ಕೆ ಹೋಗುವ ಮೊದಲೇ ದಹಿಸಿ ಹೋದರು ’ ಎಂದು ಪೋಸ್ಟ್ ಹಾಕಿದ್ದ. ಹೀಗಾಗಿ ತಾಲಿಬಾನಿ ಮನಸ್ಥಿತಿಯ ವ್ಯಕ್ತಿ ಇದೀಗ ಪೊಲೀಸ್ ಠಾಣೆ ಸೇರಿದ್ದಾನೆ.
ಗುಜರಾತ್ ನ ಅಮ್ರೇಲಿಯಲ್ಲಿ ಶಿವಭಾಯಿ ರಾಮ್ ಎಂಬಾತ ರಾವತ್ ಸಾವನ್ನು ಸಂಭ್ರಮಿಸಿದ ಕರ್ಮಕ್ಕೆ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾನೆ. ಈತ ಈ ಹಿಂದೆಯೂ ಹಿಂದೂ ದೇವತೆಗಳನ್ನು ಅವಮಾನಿಸಿ ಪೋಸ್ಟ್ ಹಾಕಿದ್ದ. ಮತ್ತೊಂದು ಕಡೆ ರಾವತ್ ಸಾವಿನ ಸುದ್ದಿಯ ಮಾಧ್ಯಮ ವರದಿಗೆ ಅಸಭ್ಯ ಇಮೋಜಿ ಹಾಕಿದ ಕಾರಣಕ್ಕೆ ಜಮ್ಮು ಕಾಶ್ಮೀರ ಬ್ಯಾಂಕ್ ನ ಮಹಿಳಾ ಉದ್ಯೋಗಿ ಆಫ್ರೀನ್ ಳನ್ನು ಅಮಾನತು ಮಾಡಲಾಗಿದೆ. ಈ ನಡುವೆ ಕೇರಳದ ಸರ್ಕಾರಿ ವಕೀಲರೊಬ್ಬರು ರಾವತ್ ಸಾವಿನ ಬಗ್ಗೆ ಅತ್ಯಂತ ಕೀಳು ಮನಸ್ಥಿತಿಯ ಪೋಸ್ಟ್ ಹಾಕಿದ್ದಾರೆ. ಆದರೆ ಈ ಬಗ್ಗೆ ಪಿಣರಾಯಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಅರಬರ ನಾಡಿನಲ್ಲಿ ಒಂಟೆಗೂ ಸೌಂದರ್ಯ ಸ್ಪರ್ಧೆ : ನಿಯಮ ಮೀರಿದ್ರೆ ದಂಡವೂ ಉಂಟು
Discussion about this post