ಮಂಗಳೂರು ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಕಿಸ್ಸಿಂಗ್ (Mangalore kissing) ಪ್ರಕರಣದ ವಿಡಿಯೋ ಸಂಬಂಧ ಮತ್ತೆ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ
ಮಂಗಳೂರು : ಕರಾವಳಿಯ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಕಿಸ್ಸಿಂಗ್ (Mangalore kissing) ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ವಶಕ್ಕೆ ಪಡೆದ ವಿದ್ಯಾರ್ಥಿಗಳ ಸಂಖ್ಯೆ 8ಕ್ಕೆ ಏರಿದೆ.
ಕೆಲ ದಿನಗಳ ಹಿಂದೆ ನಗರದ ಬಾವುಟಗುಡ್ಡೆ ಸಮೀಪದ ಅಪಾರ್ಟ್ಮೆಂಟ್ನಲ್ಲಿ ಒಂದರಲ್ಲಿ ನಡೆದ ಟ್ರುತ್ ಅಂಡ್ ಡೇರ್ ಆಟದಲ್ಲಿ ಈ ಕಿಸ್ಸಿಂಗ್ (Mangalore kissing) ಘಟನೆ ನಡೆದಿತ್ತು ಅನ್ನಲಾಗಿದೆ. ಕೆಲವು ಮೂಲಗಳ ಪ್ರಕಾರ ಈ ವಿಡಿಯೋ ಜನವರಿ ತಿಂಗಳಲ್ಲಿ ರೆಕಾರ್ಡ್ ಆಗಿತ್ತು ಇತ್ತೀಚೆಗೆ ಇದು ವೈರಲ್ ಆಗಿತ್ತು ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರ ತನಿಖೆ ಮುಂದುವರಿದಿದ್ದು, ತನಿಖೆಯ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ.
ಇದನ್ನೂ ಓದಿ : ಸಲಿಂಗಕಾಮದ ವಿರುದ್ಧ ಸಿಡಿದೆದ್ದ ಸೌದಿ : ಕಾಮನಬಿಲ್ಲಿನ ಬಣ್ಣದ ಬಟ್ಟೆ, ಆಟಿಕೆ ಜಪ್ತಿ
ವಿದ್ಯಾರ್ಥಿನಿಯರನ್ನು ರೂಮಿಗೆ ಕರೆಸಿಕೊಂಡು ಟ್ರುತ್ ಆ್ಯಂಡ್ ಡೇರ್ ಗೇಮ್ ಮೂಲಕ ಅವರಿಗೆ ಕಿಸ್ಸಿಂಗ್ (Mangalore kissing) ಮಾಡಿ ಅನುಚಿತವಾಗಿ ವರ್ತಿಸಿ ಅದರ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಮಾಧ್ಯಮಗಳಲ್ಲೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು.
ಈಗಾಗಲೇ ಈ ಸಂಬಂಧ 3 ಪ್ರತ್ಯೇಕ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಐವರು ವಿದ್ಯಾರ್ಥಿಗಳನ್ನು ಬಂಧಿಸಿ ಬಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಮತ್ತೆ ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, 3 ಪೋಕ್ಸೊ ಪ್ರಕರಣಗಳಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿದೆ.
ಈ ನಡುವೆ ಪ್ರಕರಣ ಮಹಿಳಾ ಠಾಣೆಯಿಂದ ಸಿಸಿಬಿ ವರ್ಗಾವಣೆಯಾಗಿದೆ.
ಇದನ್ನೂ ಓದಿ : ಬುರ್ಖಾ ಧರಿಸಿ ಸುದ್ದಿ ಓದಲಾರಂಭಿಸಿದ ಆಘ್ಘನ್ ನಿರೂಪಕಿಯರು
ಎರಡನೇ ಮದುವೆಯಾದ್ರ ವಿಜಯಾನಂದ ಕಾಶಪ್ಪನವರ : ಮಗುವಿನ ಜನನ ಪ್ರಮಾಣ ಪತ್ರ ವೈರಲ್
ವೀಣಾ ಕಾಶಪ್ಪನವರ್ ಜೊತೆ ಸಂಬಂಧ ಹದಗೆಟ್ಟಿದೆ. ವಿಜಯಾನಂದ ಕಾಶಪ್ಪನವರ್ ಎರಡನೇ ಮದುವೆಯಾಗಿದ್ದಾರೆ ಅನ್ನುವ ಸುದ್ದಿ ಹಿಂದೆ ಹರಡಿತ್ತು, ಇದೀಗ ಮತ್ತೆ ಅದಕ್ಕೆ ರೆಕ್ಕೆ ಪುಕ್ಕ ಬಂದಿದೆ
ಬಾಗಲಕೋಟೆ : ಮೊದಲ ಪತ್ನಿ ವೀಣಾ ಕಾಶಪ್ಪನವರ್ ಅವರಿಗೆ ಡಿವೋರ್ಸ್ ಕೊಡುವ ಮುನ್ನವೇ ಹುನಗುಂದ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಎರಡನೇ ಮದುವೆಯಾಗಿದ್ರೆ ಅನ್ನುವ ಸುದ್ದಿ ಹಿಂದೊಮ್ಮೆ ಹರಡಿತ್ತು. ಆದರೆ ಅದಕ್ಕೆ ಯಾವುದೇ ಸಾಕ್ಷಿಗಳು ಇರಲಿಲ್ಲ.
ಆದರೆ ಇದೀಗ ಮಗುವೊಂದರ ಜನನ ಪ್ರಮಾಣ ಪತ್ರ ವೈರಲ್ ಆಗಿದ್ದು, ತಂದೆ ಕಾಲಂನಲ್ಲಿ ವಿಜಯಾನಂದ ಕಾಶಪ್ಪನವರ ಎಂದು ಉಲ್ಲೇಖಿಸಲಾಗಿದೆ. ತಾಯಿಯ ಹೆಸರು ಪೂಜಾಶ್ರೀ ಎಂದು ನಮೂದಾಗಿದೆ. ಈ ಮೂಲಕ ಈ ಹಿಂದೆ ಹರಡಿದ್ದ ನಟಿ ಪೂಜಾಶ್ರೀ ಮತ್ತು ವಿಜಯಾನಂದ ಮದುವೆ ಸುದ್ದಿಗೆ ಜೀವ ಬಂದಿದೆ. ಅಷ್ಟು ಮಾತ್ರವಲ್ಲದೆ ವಿಜಯಾನಂದ ಕಾಶಪ್ಪನವರ ಎರಡನೇ ಮದುವೆಯಾಗಿದ್ದು ಹೌದು ಅನ್ನುತ್ತಿದೆ ಮೂಲಗಳು.
ಇನ್ನು ವರ್ಷದ ಹಿಂದೆಯೇ ವಿಜಯಾನಂದ ಕಾಶಪ್ಪನವರ ಹಾಗೂ ವೀಣಾ ಕಾಶಪ್ಪನವರ್ ಸಂಬಂಧ ಹದಗೆಟ್ಟಿದೆ ಅನ್ನಲಾಗಿದೆ. ಆದರೆ ಈ ಬಗ್ಗೆ ವೀಣಾ ಅವರಾಗಲಿ ಪೂಜಾಶ್ರೀಯವರಾಗಲಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯಾನಂದ ಕಾಶಪ್ಪನವರ, ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ. ಮಾಹಿತಿ ಇಲ್ಲದೆ ಏನು ಮಾತನಾಡಲಿ, ಫೋಟೋ ವೈರಲ್ ಬಗ್ಗೆ ನನಗೆ ಗೊತ್ತಿಲ್ಲ. ದಾಖಲೆ ಕೊಡಿ, ದಾಖಲೆ ಕೊಟ್ಟರೆ ಮಾತನಾಡುತ್ತೇನೆ ಅಂದಿದ್ದಾರೆ. ವೈಯುಕ್ತಿಕ ಜೀವನವೇ ಬೇರೆ, ರಾಜಕೀಯವೇ ಬೇರೆ, ವಿರೋಧಿಗಳೇ ಹೀಗೆ ಮಾಡುತ್ತಿದ್ದಾರೆ ಅಂದಿದ್ದಾರೆ.
Discussion about this post