ನವದೆಹಲಿ : ಸುದ್ದಿ ವಾಹಿನಿಗಳು TRPಗಾಗಿ ಎನೆಲ್ಲಾ ಸರ್ಕಸ್ ಮಾಡುತ್ತದೆ ಅನ್ನುವುದನ್ನು ತಿಳಿಯಬೇಕಾದರೆ ಭಾರತದ ಟಿವಿ ಚಾನೆಲ್ ಗಳನ್ನು ನೋಡಬೇಕು. ಅದರಲ್ಲೂ ಕನ್ನಡ ಸುದ್ದಿ ವಾಹಿನಿಗಳ ವರದಿಗಾರರು ರಸ್ತೆಯಲ್ಲಿ ಮಲಗಿ, ನೀರಿನಲ್ಲಿ ಮುಳುಗಿ ವರದಿ ಮಾಡಲಾರಂಭಿಸಿದ್ದಾರೆ. ಅದರ ಫಲಶೃತಿ ಮಾತ್ರ ಶೂನ್ಯ ಅನ್ನುವುದು ಬೇರೆ ಮಾತು.
ಈ ನಡುವೆ ಉಗ್ರರ ಕೈ ವಶವಾಗಿರುವ ತಾಲಿಬಾನ್ ನಲ್ಲಿ ಬುರ್ಖಾ ಧರಿಸಿ ನಿರೂಪಕಿಯರು ಸುದ್ದಿ ಓದಲಾರಂಭಿಸಿದ್ದಾರೆ. ತಾಲಿಬಾನ್ ಸರ್ಕಾರ ಮಹಿಳೆಯರ ಮೇಲೆ ಕಟ್ಟು ನಿಟ್ಟಿನ ಕಾನೂನುಗಳನ್ನು ಜಾರಿಗೊಳಿಸಿದ್ದು, ಮಹಿಳಾ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ. ಅಲ್ಲಿನ ಮಹಿಳೆಯರ ಸ್ಥಿತಿಗತಿ ಚಿಂತಾಜನಕವಾಗಿದ್ದು, ನರಕದಲ್ಲಿ ಬದುಕುತ್ತಿದ್ದಾರೆ. ಈಗಾಗಲೇ ಮಹಿಳೆಯರ ಮೇಲೆ ಹತ್ತು ಹಲವು ನಿರ್ಬಂಧಗಳನ್ನು ಹೇರಿರುವ ತಾಲಿಬಾನ್ ಸರ್ಕಾರ, ಟಿವಿ ಸುದ್ದಿ ವಾಚಕರು ಬುರ್ಖಾ ಧರಿಸಿ ಸುದ್ದಿ ಓದಬೇಕು ಎಂದು ಕಟ್ಟಪ್ಪಣೆ ಹೊರಡಿಸಿತ್ತು.
ಅದರಂತೆ ಇದೀಗ ನಿರೂಪಕಿಯರು ಟಿವಿ ಕಾರ್ಯಕ್ರಮದ ವೇಳೆ ಬುರ್ಖಾ ಧರಿಸಿ, ಮುಖ ಮುಚ್ಚಿ ಸುದ್ದಿ ಓದಲಾರಂಭಿಸಿದ್ದಾರೆ. ಇನ್ನು ಮುಖ ಮುಚ್ಚಿ ಸುದ್ದಿ ಓದಲು ನಿರಾಕರಿಸಿದ ನಿರೂಪಕಿಯರನ್ನು ಹಲವು ಚಾನೆಲ್ ಗಳು ಕೆಲಸದಿಂದ ಕಿತ್ತು ಹಾಕಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿವೆ.
Discussion about this post