ನವದೆಹಲಿ : ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಪ್ರೈಡ್ ಪೆರೇಡ್ ಸಂಭ್ರಮವಿದ್ರೆ, ಸೌದಿಯಲ್ಲಿ ಪ್ರೈಡ್ ರೇಡ್ ಶುರುವಾಗಿದೆ. ಸಲಿಂಗಕಾಮದ ಬಗ್ಗೆ ಸೌದಿಯಲ್ಲಿ ಕಠಿಣ ಕಾನೂನುಗಳು ಜಾರಿಯಲ್ಲಿರುವ ಕಾರಣ ಪ್ರೈಡ್ ಪೆರೇಡ್ ಹತ್ತಿಕುವ ಸಲುವಾಗಿ ಕಾಮನಬಿಲ್ಲಿನ ಬಣ್ಣವಿರುವ ಆಟಿಕೆ, ಬಟ್ಟೆ ಸೇರಿದಂತೆ ಎಲ್ಲಾ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
A pride parade is an outdoor event celebrating lesbian, gay, bisexual, and transgender social and self acceptance, achievements, legal rights, and pride
ಈ ಬಗ್ಗೆ ಬಿಬಿಸಿ ಮತ್ತು ಸೌದಿ ಅರೇಬಿಯಾದ ವಾಹಿನಿಗಳು ವರದಿ ಮಾಡಿದ್ದು, ಕಾಮನಬಿಲ್ಲಿನ ಬಣ್ಣದಲ್ಲಿರುವ ವಸ್ತುಗಳು ಸಲಿಂಗಕಾಮಕ್ಕೆ ಉತ್ತೇಜನ ನೀಡುವುದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳ ಮಾತು ಉಲ್ಲೇಖಿಸಿ ವರದಿ ಮಾಡಿದೆ. ಈ ವಸ್ತುಗಳು ಇಸ್ಲಾಂ ನಂಬಿಕೆ ಹಾಗೂ ನೈತಿಕತೆಗೆ ವಿರುದ್ಧವಾಗಿದೆ ಅನ್ನುವುದು ಅಧಿಕಾರಿಗಳ ವಾದವಾಗಿದೆ.
ಸೌದಿ ಅರೇಬಿಯಾದಲ್ಲಿ ಸಲಿಂಗಕಾಮಕ್ಕೆ ಮರಣದಂಡನೆ ಅಥವಾ ಛಡಿ ಏಟಿನ ಶಿಕ್ಷೆ ನೀಡಲಾಗುತ್ತದೆ. ಜೊತೆಗೆ ಪುರುಷರು ಮಹಿಳೆಯರ ಬಟ್ಟೆ ಧರಿಸುವುದನ್ನೂ ಇಲ್ಲಿ ನಿಷೇಧಿಸಲಾಗಿದೆ.
ಆದರೆ ಮಜಾ ಏನ್ ಗೊತ್ತಾ ಇದೇ ರಾಷ್ಟ್ರ 2002ರ ಫಿಪಾ ವರ್ಲ್ಡ್ ಕಪ್ ಅನ್ನು ಆಯೋಜಿಸಿದೆ. ಜೊತೆಗೆ ( lgbtq )Lesbian, gay, bisexual, and transgender ಅಭಿಮಾನಿಗಳು ಫಿಪಾ ವರ್ಲ್ಡ್ ಕಪ್ ಗೆ ಬರಬಹುದು ಅಂದಿದೆ.
Discussion about this post