ಮದುವೆ ಮಾಡಿಸಿದ್ದ ಪುರೋಹಿತನ ಜೊತೆಯೇ ನವ ವಿವಾಹಿತೆ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಸಿರೋಂಜ್ ನಲ್ಲಿ ನಡೆದಿದೆ.
ಹಸೆಮಣಿಯಲ್ಲಿ ಅವರಿಬ್ಬರ ನಡುವೆ ಪ್ರೇಮಾಂಕುರವಾಯ್ತೋ… ಅಥವಾ ಅದಕ್ಕಿಂತ ಮುಂಚೆ ಅವರಿಬ್ಬರು ಪ್ರೇಮಿಸುತ್ತಿದ್ದರೋ ಗೊತ್ತಿಲ್ಲ. ಸಪ್ತಪದಿ ತುಳಿದವನೊಂದಿಗೆ ಬಾಳಿ ಬದುಕಬೇಕಾದವಳು, ಮಂತ್ರ ಹೇಳಿದವನೊಂದಿಗೆ ಪರಾರಿಯಾಗಿದ್ದಾಳೆ.
ಎರಡು ವಾರಗಳ ಹಿಂದೆ ಅಂದರೇ ಮೇ 7 ರಂದು ಪರಾರಿಯಾದ ನವವಿವಾಹಿತೆಯ ಮದುವೆಯಾಗಿತ್ತು. ಮೇ 23 ರಂದು ಆಕೆ ಪುರೋಹಿತನ ಜೊತೆಯೇ ಓಡಿ ಹೋಗಿದ್ದಾಳೆ. ಮೇ 23 ರಂದು ಆತ ಮತ್ತೊಂದು ಮದುವೆ ಮಾಡಿಸಿದ್ದ, ಅದಾದ ನಂತರ ಅವರಿಬ್ಬರ ಬಗ್ಗೆ ಸುಳಿವಿಲ್ಲ, ಎಲ್ಲಿದ್ದಾರೆ ಎಂಬ ಬಗ್ಗೆಯೂ ಮಾಹಿತಿಯಿಲ್ಲ.
ವಿವಾಹದ ನಂತರದ ಶಾಸ್ತ್ರಗಳನ್ನು ನಡೆಸುವ ಸಲುವಾಗಿ ತವರು ಮನೆಗೆ ಆಗಮಿಸಿದ್ದ ನವ ವಿವಾಹಿತೆ ಕೂಡ ಮೇ 23 ರಿಂದ ನಾಪತ್ತೆಯಾಗಿದ್ದಾಳೆ. ಒಂದೂವರೆ ಲಕ್ಷ ರು ಮೌಲ್ಯದ ಚಿನ್ನಾಭರಣ ಮತ್ತು 30 ಸಾವಿರ ರೂ ಹಣದ ಜೊತೆ ವಧು ಪರಾರಿಯಾಗಿದ್ದು, ಈ ಸಂಬಂಧ ವಧುವಿನ ಮನೆಯವರು ದೂರು ದಾಖಲಿಸಿದ್ದಾರೆ.
ಪುರೋಹಿತನಿಗೆ ಈಗಾಗಲೇ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
Discussion about this post